ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೂರನೆಯ ಪರಿಚ್ಛೇದ
೨೭

ಗಳಿಗೂ ಕಿವಿಗಳಿಗೂ ಮಧ್ಯೆ ಇದ್ದ ವಿವಾದವು ಹರಿಯತು. ಅದೆಲ್ಲಾ ಅವಳು ಸುಳ್ಳಾಗಿ ಕಲ್ಪಿಸಿಕೊಂಡುದದಲ್ಲ. ಮಾಲತಿಗೂ ರಮೇಶನಿಗೂ ನಡೆದ ಪ್ರೀತಿಯ ಸಂಭಾಷಣೆಯನ್ನು ಸ್ವಂತವಾಗಿ ತನ್ನ ಕಿವಿಗಳಿಂದಲೇ ಕೇಳಿದಳು. ಶೋಭನೆಯು ಉಲ್ಬಣವಾದ ವೆದರೆಯಿಂದ ಜ್ಞಾನವಿಲ್ಲದವಳಂತಾಗಿ ಅಲ್ಲಿ ನಿಲ್ಲದೆ ಸ್ವಲ್ಪ ದೂರಹೋಗಿ ನದಿಯ ತೀರದಲ್ಲಿ ಬಂದು ನಿಂತಳು. ತನ್ನ ಸಂಕಲ್ಪವನ್ನು ನೆರವೇರಿಸುವುದಕ್ಕೆ ಮೊದಲು ಒತ್ತಡವೆ ಭೂದೇವಿಯನ್ನೂ ಒತ್ತಡವೆ ನದಿಯನ್ನೂ ಒತ್ತಡವೆ ಮನೆಯನ್ನೂ ದೃಷ್ಟಿಸಿ ನೋಡಿ ಹೃದಯದಲ್ಲಿ ಕೆಲವು ಭಾವಗಳು ಮಿಂಚಿನ ವೇಗದಿಂದ ಹುಟ್ಟಿ ನಾನಾರವಳು ನಾನು ನನ್ನ ಸ್ವಾಮಿಯವಳಾಗದ ಬಳಿಕ ಮತ್ತಾರವಳು? ನನ್ನ ಸ್ವಾಮಿಯು ನನ್ನನ್ನು ನೋಡಲೆಳಸದಾಗ ಮತ್ತಾರು ನನ್ನನ್ನು ನೋಡಲೆಳಸುವರು? ನಾನು ಪ್ರಪಂಚಕ್ಕೆ ಬೇಕಾದವಳಲ್ಲ; ಸಮಾಜಕ್ಕೆ ಬೇಕಾದವಳಲ್ಲ; ಬಂಧುಬಳಗದವರಿಗೆ ಬೇಕಾದವಳಲ್ಲ; ಬೇರೇ ಜನರು ಹಾಗಿರಲಿ: ನಾನೇ ನನಗೆ ಬೇಕಾದವಳಲ್ಲ; ಹೀಗಿರುವಾಗ ಬದುಕಿ ಈ ನರಕಯಾತನೆಯನ್ನು ಅನುಭವಿಸಲೇಕೆ? ಇಂದು ನಾನು ಸತ್ತರೆ ಮೊದಲಿನಂತೆ ರಾತ್ರಿ ಹಗಲು ಆಗುವುದು ನಿಲ್ಲುವುದಿಲ್ಲ; ಪ್ರಪಂಚವು ನಡೆಯುವುದು ನಿಲ್ಲುವುದಿಲ್ಲ; ಋತುಗಳ ಯಥಾ ಪ್ರಕಾರ ಬಂದು ಹೋಗುವುವು; ಅಮಾವಾಸ್ಯೆವಾದ ಬಳಿಕ ಚಂದ್ರನು ಹುಟ್ಟುತಲೇ ಇರುವನು; ಬ೦ಧುಬಳಗದವರು ಒತ್ತಡವೆ ಮಾತ್ರ ಕಣ್ಣೀರನ್ನು ಬಿಟ್ಟ ಬಳಿಕ ಮೊದಲಿನಂತೆ ಸಂಸಾರದಲ್ಲಿ ಸಂತೋಷವಾಗಿರುವರು; ನನ್ನ ಸ್ವಾಮಿಯಾದರೊ? ಅವನೊ? ಅವನೇನನ್ನು ಮಾಡುವನು? ಕಣ್ಣೀರು ಬಿಡುವ ಮಾತು ಹಾಗಿರಲಿ; ತನ್ನ ಮಾರ್ಗವು ನಿಷ್ಕಂಟಕವಾಯಿತೆಂದು ಭಾವಿಸಿಕೊಂಡು ಸುಖಿಯಾಗಿಯೇ ಇರುವನು! ಹಾಗಾದರೆ, ಹಾಗಾದರೆ?' ಎಂದು ಹೇಳುತ್ತಾ ನಾಲ್ಕೂ ದಿಕ್ಕುಗಳನ್ನು ನೋಡಿದಳು. ತಲೆಯು ತಿರುಗುತ್ತಿದ್ದಿತು. ನಾಲ್ಕೂಕಡೆಯಲ್ಲಿ ಅಂಧಕಾರವು ಹೊರ್ತು ಮತ್ತಾವದೂ ಕಾಣದು. ಭೂಮಿಯೇ ಕತ್ತಲೆ, ಆಕಾಶವೂ ಕತ್ತಲೆ, ನದಿಯ ನೀರೂ ಕತ್ತಲೆ. ಎಲ್ಲೆಲ್ಲಿಯೂ ಕತ್ತಲೆಮಯ, ಕತ್ತಲೆಯು ಆವರಿಸಿಕೊಂಡು ಸುತ್ತುತ್ತಿದ್ದಿತು. ಶೋಭನೆಯು ಆ ಕತ್ತಲೆಯಲ್ಲಿ ಸುತ್ತುತ್ತಿದ್ದ ನದಿಯ ಸುಳಿಯಲ್ಲಿ ಧುಮುಕಿಬಿಟ್ಟಳು!