ಪುಟ:ಮಿಂಚು.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

100

ಮಿಂಚು

ಪರಶುರಾಮನನ್ನು ಅಲ್ಲಯೇ ಕೂತಿರುವಂತೆ ಸನ್ನೆ ಮಾಡಿದಳು, ಆಗಲೇ ಇಬ್ಬರನ್ನು
ಜವಾನ ಒಳಗೆ ಕಳಿಸಿದ್ದ. ಕಿಷ್ಕಿಂಧೆಯ ಮುಖ್ಯಿಮಂತ್ರಿಯತ್ತ ಅವನು ಲಕ್ಷ್ಯ
ಹರಿಸಲೆ ಇಲ್ಲ.
ಇದು ತನ್ನದೇ ಮನೆ ಎನ್ನುವಂತೆ ಸೌದಾಮಿನಿ ಅಧ್ಯಕ್ಷರ ಸಮ್ಮುಖಕ್ಕೆ ತೇಲಿ
ಹೋದಳು.
"ಬಾ" ಎಂದು ಅಧ್ಯಕ್ಷ ಕರೆಯುತ್ತಿದ್ದಂತೆ ಸೌದಾಮಿನಿ ಪಾದಗಳಿಗೆ ನಮಿಸಿ
ದಳು. ಕೊಠಡಿಯ ನೆಲವನ್ನು ಆವರಿಸಿತ್ತು ದಪ್ಪನೆಯ ಹಾಸುಗೆ, ಗೋಡೆಗಳು
ದ್ದಕ್ಕೂ ಒರಗಲು. ದಿಂಬುಗಳು.
"ಏನು ಹೇಳ್ತಿದೆ ನಮ್ಮ ಕಿಷ್ಕಿಂಧೆ? ಮಳೆ__ಬೆಳೆ?"
"ತಜ್ಞರ ಪ್ರಕಾರ ಇದು ಸುಭಿಕ್ಷದ ವರ್ಷ."
"ತಜ್ಞರು ಇರಲಿ. ನೀನು ಪರಂಪರೇನ ಬಿಡಬೇಡ. ಜ್ಯೋತಿಷ್ಕರನ್ನೂ ಕೇಳು."
"ತಾವು ನನ್ನ ತಂದೆ ಸಮಾನ. ತಮ್ಮಲ್ಲಿ ಹೇಳದೆ ಇದ್ದೇನಾ? ಆಗಲೇ
ಜ್ಯೋತಿಷ್ಕರನ್ನು ಕೇಳಿದ್ದಾಯಿತು. ಸುಭಿಕ್ಷದ ವರ್ಷ ಅಂತ ಅವರೇ ಹೇಳಿದ್ರು,"
"ಜಾಣಪ್ಪ ಚೆನ್ನಾಗಿದಾರಾ?"
"ಇದಾರೆ. ಎರಡು ರಾಜ್ಯಪಾಲ ಹುದ್ದೆಗಳು ಖಾಲಿಯಾಗ್ತಿವೆ,"
"ಹೌದು. ಕಾಶ್ಮೀರ ಮತ್ತು ಕೇರಳ,"
"ಕಾಶ್ಮೀರದ ಚಳಿ ತಡಕೊಳ್ಳೋದು ಅವರಿಂದ ಆಗಲಾರದು. ಕೇರಳ ವಾಸಿ,
ಅವರು ರಾಜ್ಯಪಾಲರಾಗಿ ಹೋಗೋದು ನಮ್ಮ ಪಕ್ಷದ ಹಿತದ ದೃಷ್ಟಿಯಿಂದ ಮುಖ್ಯ.
ನಕುಲಧೇವ್ ಜಿ ತಮಗೆಲ್ಲ ಹೇಳಿರಬಹುದು,"
"ಹ್ಞ ಹ್ಞ ಹೇಳಿದಾರೆ. ಪ್ರಧಾನಿಯವರ ಜತೆ ಮಾತಾಡ್ತೇನೆ. ಅವರು
ಒಪ್ತಾರೆ."
"ನನ್ನ ಎದೆಯ ಮೇಲಿಂದ ದೊಡ್ಡ ಭಾರ ಇಳಿಸಿದ ಹಾಗಾಯ್ತು."
"ಸೌದಾ ಬೇಟಿ, ಒಂದು ವಿಷಯ ನಿನಗೆ ಗೊತ್ತಿದೆಯೊ ಇಲ್ವೊ? ಕಿಷ್ಕಿಂಧೆಗೆ
ಪಕ್ಷದ ಮುಖ್ಯಸ್ಥೆಯಾಗಿ ನಿನ್ನನ್ನು ಕಳಿಸೋದಕ್ಕೆ ಕೆಲವರ ಪ್ರಬಲ ವಿರೋಧವಿತ್ತು.
ಅವರಲ್ಲೊಬ್ಬ ನಿನ್ನ ನಕುಲದೇವ್. ಅವನಿಗೆ ತಿಳಿಯ ಹೇಳ್ದೆ. ಉಳಿದವರ ಬಾಯಿ
ಮುಚ್ಚಿಸ್ದೆ. ನಿನ್ನ ಸಾಮರ್ಥ‍್ಯದ ವಿಷಯದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿತ್ತು:
ನನ್ನದು ಸರಿಯಾದ ತೀರ್ಮಾನ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ."
"ತಮ್ಮ ಪಿತೃವಾತ್ಸಲ್ಯಕ್ಕಾಗಿ ನಾನು ಚಿರಋಣಿ."
"ಯಾವುದೇ ಸಂಘಟನೆಗಾಗಿ, ಮಹೋದ್ದೇಶಕ್ಕಾಗಿ, ಹಣ ಸಂಗ್ರಹಿಸೋದು
ತಪ್ಪಲ್ಲ, ಮಹಾತ್ಮಾಜಿಯೂ ಅದನ್ನು ಮಾಡ್ತಿದ್ದರು. ಆದರೆ ನಾವು ಧನಪಿಶಾಚಿ
ಗಳಾಗಬಾರದು. ಜನತೆ ನಮ್ಮ ಕೈಗಿತ್ತಿರುವ ಅಧಿಕಾರದ ದುರುಪಯೋಗ ಸಲ್ಲದು,
ಸೇವೆ ಸ್ತುತ್ಯ. ಸೇವನೆ ಅನಾಚಾರ."