ಪುಟ:ಮಿಂಚು.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

117

“ಬನ್ನಿ, ಚೌಗುಲೆ ಸಾಹಿಬ್, ರಾಜ್ಯಪಾಲರನ್ನು ಕಂಡಿದ್ರೆ?”
“ವಿದಾಯ ಹೇಳೋದಕ್ಕೆ ಹಳಬರು ನಿನ್ನೆ ಹೋದಾಗ ನಾನೂ ಜತೇಲಿದ್ದು
ನಮಸ್ಕರಿಸಿ ಬಂದೆ.”
“ಬಜೆಟ್ ಅಧಿವೇಶನಕ್ಕೆ ದಿನ ಗೊತ್ತುಮಾಡಿ, ಮುಂದಿನ ವಾರ ದಿಲ್ಲಿಗೆ
ಹೋಗಿ, ಯೋಜನಾ ಆಯೋಗದವರನ್ನು ಭೇಟಿಯಾಗಿ ಬನ್ನಿ, ಇಲ್ಲಿಂದ ಅರ್ಥ
ಕಾರ್ಯದರ್ಶಿಯನ್ನೂ ಕರೆದುಕೊಂಡು ಹೋಗಿ, ಯೋಜನಾ ವೆಚ್ಚ, ಯೋಜನೇತರ
ವೆಚ್ಚ, ಇವೆರಡರ ನಿರ್ಬಂಧಗಳನ್ನೂ ಮೀರಿ ಏರುವ ವೆಚ್ಚ, ಅಂಕೆ ಸಂಖ್ಯೆಗಳ ಜತೆ
ಆಟವಾಡುವವರನ್ನು ಕಂಡರೆ ನನಗಿಷ್ಟ, ಎಂಎ. ಯಲ್ಲಿ ಯಾವ ವಿಷಯ ಅಭ್ಯಾಸ
ಮಾಡಿದವರು ನೀವು ?”
“ಇತಿಹಾಸ.”
“ಇತಿಹಾಸ ಮುಖ್ಯ. ಆದರೆ ನಿಮಗೇನಪ್ಪ ಐಎಎಸ್ ನವರಿಗೆ ಎಲ್ಲ ವಿಷಯ
ಗಳೂ ಕರತಲಾಮಲಕ, ಐಸಿಎಸ್ ನೌಕರಶಾಹಿ ಇಂಗ್ಲಿಷರ ಪಾಲಿಗೆ ಕಬ್ಬಿಣದ
ಚೌಕಟ್ಟು, ಸ್ವತಂತ್ರ ಭಾರತದ ಪ್ರಜಾಪ್ರಭುತ್ವಕ್ಕೆ ಹೇಳಿ ಮಾಡಿಸಿದ್ದು, ಸ್ಟೇನ್‌ಲೆಸ್
ಸ್ಟೀಲಿನ ಚೌಕಟ್ಟು-ಅದೇ ಭಾರತೀಯ ಆಡಳಿತ ಸೇವಾ ವ್ಯವಸ್ಥೆ, ಹಿಂದಿನವರನ್ನು
ಇಂಡಿಯನ್ ಕುಕಿಂಗ್ ಸರ್ವಿಸ್ ಅಂತ ಗೇಲಿ ಮಾಡ್ತಿದ್ವಿ, ಈಗಿನವರನ್ನು ಲೇವಡಿ
ಮಾಡುವಂತಿಲ್ಲ, ಅಪ್ಪಟ ಬಂಗಾರ.”
..... ..... ..... .....
“ಏನ್ಹೇಳ್ತೀರಾ ?”
“ಗಹನ ವಿಚಾರಗಳು, ಕಿಷ್ಕಿಂಧೆಗೆ ಬಂದು ಸಂಶೋಧಕ ವಿದ್ಯಾರ್ಥಿಯಾಗಿ
ದ್ದೇನೆ.”
“ಬಹಳ ಕಷ್ಟ ಪಡಬೇಡಿ, (ಜಾಣಪ್ಪ ನನಗೂ ಒಮ್ಮ ಅಂದಿದ್ದರು-ಜಾಸ್ತಿ
ಓದಬೇಡ-ಅಂತು ನೀವು ನಿವೃತ್ತರಾದಮೇಲೆ ಕಿಷ್ಕಿಂಧಾ ವಿಶ್ವವಿದ್ಯಾಲಯ ನಿಮಗೆ
ಡಿಲಿಟ್ ಪದವಿ ಕೊಡದೆ, ಜಾತಿವಾದ ಮುರ್ದಾಬಾದ್; ಸರ್ವಧರ್ಮ ಸಮಭಾವ...
ಇವು ಇಂದಿನ ಕಿರಿಯರಿಗೆ ನಾವು ಹೇಳಿಕೊಡಬೇಕಾದ ಪ್ರೊಗನ್,”
“ದಿಲ್ಲಿಯಲ್ಲಿ ಸಂಪಾದಕರೊಂದಿಗೆ ಸಂವಾದ ಬೆನ್ನಾಗಿ ಆಯ್ಕಂತೆ ಪರಶು
ರಾಮ್ ತಂದ ಪತ್ರಿಕೆಗಳನ್ನೂ ನೋಡಿದೆ.”
“ಸಂಪುಟ ಸಭಾ ಕೊಠಡಿಯ ಮೇಜಿನ ಮೇಲೆ ಆ ಪತ್ರಿಕೆಗಳಿರಲಿ, ಇವತ್ತು
ಹನ್ನೆರಡು ಘಂಟೆಗೆ ಸಂಪುಟಸಭೆ ಕರೆದಿದ್ದೇನೆ. ಇವತ್ತು ಬೆಳಗ್ಗಿನ ಇಲ್ಲಿನ ಪತ್ರಿಕೆ
ಗಳನ್ನ ನೋಡಿದ್ದೀರಿ, ಅಲ್ಲವೆ ?"
“ನೋಡಿದ್ದೇನೆ, ಪ್ರಧಾನಿ ಮತ್ತು ತಮ್ಮ ಭೇಟಿಯ ವರದಿ ವಿವರವಾಗಿ
ಬಂದಿದೆ.
“ಚಿತ್ರಗಳಿಲ್ಲ. ಅದೇ ಕೊರತೆ,”