ಪುಟ:ಮಿಂಚು.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

120

ವಿಂಚು

ಆಕೆ ಎದೊಡ್ಡನೆ, ಸಭೆ ಮುಗಿಯಿತೆಂದು ಉಳಿದವರೂ ಎದ್ದರು. ನೀರಾವರಿ
ಮಂತ್ರಿ ನಾರಣಪ್ಪ ಕೇಳಿದರು :
“ರೋಲೆಕ್ಸ್ ಯಾವಾಗ ತರಿಸ್ತೀರಿ ? ನೀರಿನಲ್ಲಿ ಅದ್ದಿದರೂ ಅದು ಹಾಳಾ
ಗೋದಿಲ್ವಂತೆ.”
“ಒಟ್ಟು ಏಳು ಬೇಕು. ಯಾವುದಕ್ಕೂ ಬಜೆಟ್ ಅಧಿವೇಶನ ಕಳೀಲಿ.”

***

ಸಣ್ಣ ಪೇಟೆಯ ಜವಳಿ ಸಾಹುಕಾರ ಧನಂಜಯಕುಮಾರರ ಅಂಗಡಿಗೆ
ಮೋಟರ್ ಸೈಕಲ್ ಸವಾರನೊಬ್ಬ ಬಂದು ಒಂದು ಪತ್ರವನ್ನಿತ್ತ. ಸರಕಾರಿ ಮೊಹರು
ಇದ್ದ ಲಕೋಟೆ. ಅದನ್ನು ನೀಡಿ ದೂತ ಹೊರಟೇ ಬಿಟ್ಟ,
ದೇವರನ್ನು ಸ್ಮರಿಸಿ ಸಾಹುಕಾರ ಲಕೋಟೆ ಒಡೆದ. ಒಳಗೆ ಕಾಗದವಿತ್ತು,
ರಾಜ್ಯದ ಮುಖ್ಯಮಂತ್ರಿಯಿಂದ, ಭೇಟಿಗೆ ಕರೆದಿದ್ದರು.
ಸೌದಾಮಿನಿದೇವಿ ಎಂಬಾಕೆ ಮುಖ್ಯಮಂತ್ರಿಯಾದ ಸುದ್ದಿ ಪತ್ರಿಕೆಗಳಲ್ಲಿ
ಬಂದಿತ್ತು. ನಾಲ್ಕಾರು ಬಾರಿ ಸ್ಪುಟವಾಗಿದ್ದ ಚಿತ್ರಗಳು ಅಚ್ಚಾದಾಗ, ಈಯಮ್ಮ
ನನ್ನು ಎಲ್ಲಿಯೋ ನೋಡಿದಂತಿದೆಯಲ್ಲ__ ಎನಿಸಿತ್ತು. ಮುಖ್ಯಮಂತ್ರಿಯಲ್ಲಿ ತಾನೆಲ್ಲಿ
ಎಂದುಕೊಂಡಿದ್ದ, ಈಗಲೋ ಈ ಕಾಗದ, 'ಮಹಾರಾಜರು ಬರ ಹೇಳಿದಾರೆ'
ಎಂದ ಹಾಗೆ, ಪತ್ರಕ್ಕೆ ಸಹಿ ಹಾಕಿದ್ದವನು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ
ಜಿ. ಪಿ. ಪರಶುರಾಮ್, ಸ್ಥಳ ಗೃಹಕಾರಾಲಯ, ವೇಳೆಯನ್ನೂ ನಮೂದಿ
ಸಿತ್ತು. ಅದೇ ದಿನ ಅಪರಾಹ್ನ, 'ತಾವು ಮುಖ್ಯಮಂತ್ರಿಯವರ ಭೇಟಿಗೆ ಬರ
ಬೇಕೆಂದು ಕೋರಲಾಗಿದೆ.'
ಧನಂಜಯಕುಮಾರ ಆರೇಳು ಬಾರಿ ಪತ್ರವನ್ನು ಓದಿದ, ಅವನಿಗೇ
ಬಂದುದು. ಸಂದೇಹವಿರಲಿಲ್ಲ. ಮನೆಗೆ ಧಾವಿಸಿ, ಹೆಂಡತಿಗೆ ಹೇಳಿ, ಉಂಡು,
ಒಳ್ಳೆಯ ಉಡುಪು ತೊಟ್ಟು, ' ಟೋಪಿ ಧರಿಸಿ, ಕೈ ಗಡಿಯಾರ ನೋಡಿ ನೋಡಿ
ಬೇಸತ್ತು, ಆಟೋರಿಕ್ಷಾ ಹತ್ತಿದ. ಇಪ್ಪತ್ತು ಮಿನಿಟು ಮುಂಚಿತವಾಗಿ ಮುಖ್ಯ
ಮಂತ್ರಿಯ ಗೃಹ ಕಾರೈಾಲಯ ತಲಪಿದ, ಉದ್ಯಾನದಲ್ಲಿ ಹೊತ್ತು ಕಳೆದ ಐದು
ಮಿನಿಟು ಇದ್ದಂತೆ ಪರಶುರಾಮನ ಮೇಜಿನ ಮುಂದೆ ಹಾಜರಾಗಿ ಮುಖ್ಯಮಂತ್ರಿಯ
ಪತ್ರ ಮುಂದಿಟ್ಟ.
ಪರಶುರಾಮ ಸಂದರ್ಶಕರ ಕೊಠಡಿ ತೋರಿಸಿ “ಅಲ್ಲಿ ಕೂಳಿ ನಾನು
ಬಂದು ಕರೀತೀನಿ,” ಎಂದ. ಕೊಠಡಿಯಲ್ಲಿ ಎಲ್ಲ ಆಸನಗಳೂ ಭರ್ತಿಯಾಗಿದ್ದುವು.
ಒಂದು ಬಡ ಬೆಂಚೂ ಅಲ್ಲಿತ್ತು. ಸ್ವಲ್ಪ ಖಾಲಿ ಸ್ಥಳವಿತ್ತು. ಅಲ್ಲಿ ಕುಳಿತುಕೊಂಡು,
ಇವರದೆಲ್ಲ ಸಂದರ್ಶನ ಮುಗೀಬೇಕಾದರೆ ಸಂಜೆಯೇ ಆದೀತು ಎಂದು ಯೋಚಿಸುತ್ತ