ಪುಟ:ಮಿಂಚು.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

121

ಸಾಹುಕಾರ ವ್ಯಾಕುಲಗೊಂಡ. ಎರಡು ಮೂರು ಮಿನಿಟು ಕಳೆಯುವುದಕ್ಕಿಲ್ಲ
ಪರಶುರಾಮ್ ಬಂದ.
“ನೀವು ಬನ್ನಿ.”
ನಾಲ್ವರು ಎದ್ದರು, ವಿದೇಶೀಯರಂತೆ ಉಡುಪು. ಅವರನ್ನು ನೋಡುವುದೇ
ಒಂದು ಚಂದ, ಪರಶುರಾಮ ಮತ್ತೆ ಅಂದ :
“ನೀವಲ್ಲ ಧನಂಜಯಕುಮಾರರೆ, ನೀವು ಬನ್ನಿ.”
ಸಾಹುಕಾರ ಎದ್ದ, ಚಳಿ ಚಳಿ ಎನಿಸಿತು. ಪರಶುರಾಮನನ್ನು ಹಿಂಬಾಲಿಸಿದ.
ಮುಖ್ಯಮಂತ್ರಿಯ ಕೊಠಡಿ, ಅರ್ಧ ಚಂದ್ರಾಕಾರವಾಗಿ ಮತ್ತೆ ಕುರ್ಚಿಗಳಿ
ದ್ದುವು. ಸಾಹುಕಾರ ಕೈ ಜೋಡಿಸಿ ನಿಂತ. ಪರಶುರಾಮ ನಿರ್ಗಮಿಸಿದ್ದ.
ಮುಖ ತಗ್ಗಿಸಿ ಫೈಲನ್ನು ನೋಡುತ್ತಿದ್ದ (ನೋಡುವಂತ ನಟಿಸುತ್ತಿದ್ದ) ಸೌದಾಮಿನಿ
ತಲೆ ಎತ್ತಿದಳು.
“ಕೂತ್ಕೊಳ್ಳಿ.”
ಎರಡನೇ ಸಾಲಿನ ಒಂದು ಕುರ್ಚಿಯ ಅಂಚಿನಲ್ಲಿ ಸಾಹುಕಾರ ಕುಳಿತ.
“ನಮ್ಮ ಪತ್ರ ಸಿಕ್ಕಿತಾ ?”
“ಹೌದು, ಹೌದು.”
“ನಿಮ್ಮ ವಿಳಾಸ ನಮಗೆ ಹ್ಯಾಗೆ ಗೊತ್ತಾಯ್ತು ?
“......"
ಸೌದಾಮಿನಿ ಡ್ರಾಯರಿನಿಂದ ಕಿವಿ ಮಡಚಿದ್ದ ಒಂದು ವಿಸಿಟಿಂಗ್ ಕಾರ್ಡನ್ನು
ಎತ್ತಿ ತೋರಿಸಿದಳು.
“ನೆನಪಾಯ್ತ ? ನಮ್ಮ ಗುರುತು ಸಿಕ್ತ ? ರೈಲು ಪ್ರಯಾಣ ಮುಗಿದಾಗ
ಯಾರಿಗೋ ಈ ಕಾರ್ಡು ಕೊಟ್ಟಿದ್ದಿಲ್ವ ?”
ಸಾಹುಕಾರ ಥಟ್ಟನೆದ್ದು ಕೈ ಜೋಡಿಸಿದ, ಗಟ್ಟಿಯಾಗಿ ಮತ್ತೊಮ್ಮೆ ಅಂದ:
“ನಮಸ್ಕಾರ, ಖಾವಂದಿರಿಗೆ ನಮಸ್ಕಾರ.”
“ಖಾವಂದರಲ್ಲ, ಮಾತಾಜಿ, ಈಚೆಗೆ ಬನ್ನಿ, ಇಲ್ಲಿಗೆ.”
ಸಾಹುಕಾರ ಮುಖ್ಯಮಂತ್ರಿಯ ಸಮೀಪಕ್ಕೆ ಸಾಗಿದ. ಆಕೆ ಬೊಟ್ಟು ಮಾಡಿದ
ಹತ್ತಿರದ ಕುರ್ಚಿಯ ಮೇಲೆ ಕುಳಿತು, ಶ್ರೀಗಂಧದ ತಳು ಹಾಳೆಯ ಮೇಲೆ ಮುದ್ರಿ
ಸಿದ್ದ ತನ್ನ ಹೊಸ ವಿಸಿಟಿಂಗ್ ಕಾರ್ಡನ್ನು ಕೋಟಿನ ಒಳ ಜೇಬಿನಿಂದ ತೆಗೆದು,
ಸಣ್ಣನೆ ನಗುತ್ತ, ಅತಿ ವಿನಯದಿಂದ ಮುಖ್ಯಮಂತ್ರಿಯ ಮೇಜಿನ ಮೇಲಿರಿಸಿದ.
“ಹೀಗೆ ಮಾಡೂಂತ ತಾವು ಹೇಳಿದ್ದಿರಿ.”
“ನೆನಪಿದೆ. ಹಳೇ ಕಾರ್ಡು ತಗೊಳ್ಳಿ, ಹೊಸದು ನಾವು ಇಟ್ಕೊಳ್ತೀವಿ,
ಹಾಗೆಯೇ ಹಳೇ ಸಹ ಪ್ರಯಾಣವನ್ನು ನೀವು ಮರೆಶ್ಚಿಡಿ, ಇವತ್ತಿನ ಈ ಸಂಬಂಧ