ಪುಟ:ಮಿಂಚು.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

154




೧೭

ಚೆನ್ನೈಯಿಂದ ಸ್ವಾಮೀಜಿ ಬಂದು ಕಲ್ಯಾಣನಗರದ ಧರ್ಮಪೀಠದ ಅಧಿಪತಿ
ಯಾದರು. ಅವರೆಂದುಕೊಂಡರು : ಮುಖ್ಯಮಂತ್ರಿ ಮಠದ ಭಕ್ತ ಎಂದ ಮೇಲೆ,
ಒಂದು ವರ್ಷ ಹಿಡಿಯುವುದನ್ನು ಒಂದು ತಿಂಗಳಲ್ಲಿ ಸಾಧಿಸಬಹುದು. ಅವರು
ಚೆನ್ನೈಯಿಂದ ಬರುತ್ತ ಹದಿನೆಂಟರ ಹರೆಯದ ಶಿಷ್ಯನನ್ನು ಕರೆತಂದಿದ್ದರು. ಅವನೂ
ಅವರಂತೆಯೇ ಸ್ಪುರದ್ರೂಪಿ,
“ಮರಿಸ್ವಾಮಿ, ಮುಖ್ಯಮಂತ್ರಿ ಇದ್ದಲ್ಲಿಗೆ ಹೋಗಿ ನಾವು ಬಂದಿದ್ದೇವೆ ಅಂತ
ತಿಳಿಸಿ ಬರ್ತೀಯಾ ?"
“ಅಪ್ಪಣೆ, ಸ್ವಾಮೀಜಿ,”
ಊರಿಗೆ ಹೊಸಬರು, ಮಠದ ಚಾಕರ ಗೃಹಕಾರ್ಯಾಲಯವನ್ನು ದೂರದಿಂದ
ನೋಡಿದ್ದ.
ಅವನ ಜತೆಯಲ್ಲಿ ಮರಿಸ್ವಾಮಿ ಆಟೋರಿಕ್ಷಾ ಏರಿ ಕಿಷ್ಕಿಂಧೆಯ ರಾಜಧಾನಿಯ
ಹೆದ್ದಾರಿಗಳಲ್ಲಿ ಕಿರುದಾರಿಗಳಲ್ಲಿ ಸಾಗಿದ.
"ಆಟೊ ಒಳಗೆ ಬಿಡಾಕಿಲ್ಲ. ನೋಡಿ ಅಲ್ಲಿ, ಬಂದೂಕು ಹಿಡಿದು ಪೋಲೀಸ್
ಪೇದೆ ನಿಂತವ್ನೆ.”
ಆಟೋದವನನ್ನು ಅಲ್ಲಿಯೆ ಬೀಳ್ಕೊಟ್ಟು, ಮರಿಸ್ವಾಮಿ ಚಾಕರನೊಂದಿಗೆ
ಮಹಾದ್ವಾರದತ್ತ ಹೆಜ್ಜೆ ಇಟ್ಟ. ಕಾವಿ ನಿಲುವಂಗಿಯ ಯುವಕ, ಪೋಲೀಸನಿಂದ
ನಮಸ್ಕಾರ ದೊರೆಯಿತು.
“ಧರ್ಮಮಠದಿಂದ ಬಂದಿದ್ದೇವೆ, ಮುಖ್ಯಮಂತ್ರಿಯವರಿಗೆ ಒಂದು ಸಂದೇಶ
ತಂದಿದ್ದೇವೆ. ಅವರನ್ನು ಒಂದು ನಿಮಿಷ ಕಾಣಬೇಕು.”
ರಕ್ಷಣಾ ಪೊಲೀಸ್ ಪೇದೆ ಕಣ್ಣಿಗೆ ಬಿದ್ದ ಗೃಹ ಜವಾನನೊಬ್ಬನನ್ನು ಸನ್ನೆ
ಮಾಡಿ ಕರೆದು, ವಿಷಯ ತಿಳಿಸಿ, “ಪ್ರೈವೆಟ್ ಸೆಕ್ರೆಟರಿ ಸಾಹೇಬರಿಗೆ ತಿಳಿಸು,”
ಎಂದ.
ಪರಶುರಾಮ ಸ್ನಾನ ಮಾಡುತ್ತಿದ್ದ. ಗೃಹ ಜವಾನ ಮರಿಸ್ವಾಮಿಯ
ಕಾಷಾಯದುಡುಗೆಗೆ ಗೌರವವಿತ್ತು ಹಜಾರದಲ್ಲಿದ್ದ ಒಂದು ಕುರ್ಚಿಯತ್ತ ಅವನನ್ನು
ಒಯ್ದ.
“ಯೋಗಾಸನ ಮುಗಿಸಿ, ಮೇಲಂಗಿ ತೊಟ್ಟು, ಕಿಟಿಕಿಯ ಬಳಿ ಸ್ವಚ್ಛಗಾಳಿಯನ್ನು