ಪುಟ:ಮಿಂಚು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

160

ಮಿಂಚು

ಆಪ್ತ ಕಾರ್ಯದರ್ಶಿಗೆ ಆಕೆ ಅಂದಳು :
“ಶಾಸಕರ ಭವನದಲ್ಲಿ ತಂಡದ ಮುಖ್ಯಸ್ಥೆ ಕರುಣಾಬೆನ್ ಕನೆಕ್ಷನ್ ಕೊಡಿ.
ಮೃದುಲಾಬೆನ್ ಮಾತಾಡ್ತಾರೆ_ಅಂತ ತಿಳಿಸಿ. (ದೀದಿಜಿಗೆ) ಎಲ್ಲ ಅನುಕೂಲ
ವಾಗಿದೆಯೆ ? ಅಂತ ಒಂದ್ಸಲ ಕೇಳಿ ಬಿಡಿ.”
“ಈ ಕ್ಷಣ ನಾನೂ ಅದೇ ಯೋಚನೆ ಮಾಡ್ತಿದ್ದೆ.”
ಒಂದೆರಡು ಮಿನಿಟುಗಳ ಬಳಿಕ ಶಾಸಕರ ಭವನ ಸಿಕ್ಕಿತು.
ದೀದಿಜಿಯ ಪ್ರಶ್ನೆಗೆ
ಕರುಣಾ ಉತ್ತರವಿತ್ತಳು:
“ದೀದಿಜಿ, ಹುಡುಗಿಯರಿಗೆಲ್ಲ ಖುಶಿಯಾಗಿದೆ. ಸ್ನಾನ, ಊಟ ಎಲ್ಲದಕ್ಕೂ
ಅನುಕೂಲವಾಗಿದೆ. ನಾವು ಹೋದಲ್ಲೆಲ ಒಬ್ಬ ಕ್ಯಾಮರಾಮನ್ ಬೇಕು, ದೀದಿಜಿ.
ಬೇರೆ ರಾಜಧಾನಿಗಳಲ್ಲಿ ಮಾಡಿದ ಹಾಗೆ.”
“ಊಟ ಆದಮೇಲೆ ಚೆನ್ನಾಗಿ ನಿದ್ದೆ ಮಾಡಿ. ಮುಖ್ಯಮಂತ್ರಿ _ ಸೌದಾಮಿನಿದೇವಿ
ನಿಮಗೆಲ್ಲ ಗುಡ್‍ನೈಟ್ ಹೇಳಿದ್ದಾರೆ. ನಾನೂ ಹೇಳ್ತೀನಿ_ಗುಡ್‍ನೈಟ್ ಕರುಣಾ.”
“ಗುಡ್‍ನೈಟ್ ದೀದಿಜಿ."
ಕ್ಯಾಮರಾಮನ್ ಬಗ್ಗೆ ಮೃದುಲಾ ಹೇಳಿದಾಗ ಮುಖ್ಯಮಂತ್ರಿ ಹೇಳಿದಳು :
“ಒಬ್ಬನಲ್ಲ ಇಬ್ಬರನ್ನು ಕೊಡ್ತೀನಿ."
ಆಗಲೆ ಸ್ನಾನ ಮುಗಿಸಿದ್ದ ಜುಮ್ಕಿ ಮುಖ ತೋರಿಸಿದಳು, “ನೀರು ಹದ
ವಾಗಿದೆ" ಎಂದು ಹೇಳಿ ತನ್ನ ಮಾಜಿಯನ್ನು ಕರೆದೊಯ್ದಳು.
ಮೃದುಲಾ ಸ್ನಾನಮಗ್ನಳಾದ ಮೇಲೆ ಸೌದಾಮಿನಿ ಜುಮ್ಕಿಯನ್ನು ಕರೆದಳು.
“ಬಾ ಕೂತ್ಕೊ... ಅಲ್ಲಿ ಅಲ್ಲ. ನನ್ನ ಪಕ್ಕದಲ್ಲಿ.”
"ನೀವು ಚೀಫ್ ಮಿನಿಸ್ಟರ್. ಭಯವಾಗುತ್ತೆ."
“ಕಳ್ಳಿ ! ನಗ್ತಾ ಇದೀಯ. ಭಯವಂತೆ. ಬಾ.”
“ಜುಮ್ಕಿ ಕುಳಿತಮೇಲೆ ಬರಸೆಳೆದು ಸೌದಾನಿಮಿ ಆಲಿಂಗಿಸಿದಲು. ಮಗುತನ
ಹಿಂದೆ ಉಳಿಯಿತು. ಹದಿಹರೆಯದ ಸೊಕ್ಕು ಪುಟಿಯುತ್ತಿದೆ ಅಂಗಾಂಗಗಳಿಂದ.
“ವಿನೋದ ಚೆನ್ನಾಗಿದಾನಾ ಜುಮ್ಕಿ ?”
"ಇದಾನೆ. ಅವನಿಗೆನಾಗಿದೆ ?”
“ಮನೆಗೆ ಆಗಾಗ ಬರ್ತಾನಾ?”
“ಬರದೆ ? ಇದಾರಲ್ಲ ಕರುಣಾಬೆನ್ ?”
“ನಿನಗೆ ಅವನು ಇಷ್ಟ ಇಲ್ಲವಾ ?”
“ಖಂಡಿತ ಇಲ್ಲ. ಅವನನ್ನು ಕಂಡರಾಗೋದಿಲ್ಲ ನನಗೆ.
"......."
“ನೀವು ಬೇಕಾದರೆ ವಿಮಾನದಲ್ಲಿ ಮುಂಬಯಿಗೆ ಬರಬಹುದಂತೆ.”
“ಹೌದು. ನಿನ್ನ ಮದುವೆಗೆ ಬರ್ತೇನೆ ಅಂದಿದ್ದೆ. ವರಗೊತ್ತಾಯ್ತೆ ?"