ಪುಟ:ಮಿಂಚು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

172 ಮಿಂಚು

  ಕಲ್ಯಾಣನಗರದ ಅನಾಥಾಶ್ರಮದ ಅಧ್ಯಕ್ಷೆ ಸುಲೋಚನಾಬಾಯಿ ಆಡಳಿತ ಮಂಡಲದ ಮಿಸೆಸ್ ಐ.ಜಿ.ಪಿ. ಮತ್ತಿತರರೊಡನೆ ಬಂದು, ಮುಖ್ಯಮಂತ್ರಿಗೆ ವಂದಿಸಿದರು. ಮೃದುಲಾಬೆನ್‍ಗೆ ನಮಸ್ಕರಿಸಿ ತಾವು ತಂದಿದ್ದ ಹೂ ಹಣ್ಣುಗಳ ಪೊಟ್ಟಣವನ್ನು ಸುಲೋಚನಾಬಾಯಿ ಅವರ ಕೈಗಿತ್ತಳು. ಮೃದುಲಾ ಅಂದಳು:
 “ಸುಲೋಚನಾ ಬಹೆನ್, ನೀವು ಪ್ರತಿಷ್ಠಾನದ ಧರ್ಮದರ್ಶಿ ಮಂಡಲದಲ್ಲಿರಬೇಕು. ಮುಂದಿನ ಸಭೆಯಲ್ಲಿ ಕೋಆಪ್ಟ್ ಮಾಡ್ಕೊಳ್ತೇವೆ. ನಿಮ್ಮ ಮುಖ್ಯಮಂತ್ರಿ ಇದಕ್ಕೆ ಖಂಡಿತ ಒಪ್ಪಿಯಾರು,”
 “ಸಂತೋಷದಿಂದ," ಎಂದಳು ಸೌದಾಮಿನಿ.
  ವಾರ್ತಾ ಇಎಾಖೆಯ ನಿರ್ದೆಶಕ ಭಾರದ ಆಲ್ಬಮನ್ನು ಎದೆಗವಚಿಕೊಂಡು ಬಂದು, ಅದನ್ನು ಮುಖ್ಯಮಂತ್ರಿಗೆ ఒಪ್ಪಿಸಿ ತಾನು ಸರಾಗವಾಗಿ ಉಸಿರಾಡಿ ನಿವೇದಿಸಿದ :
 “ಪ್ರತಿಷ್ಟಾನದವರು ಕಲ್ಯಾಣನಗರಕ್ಕೆ ಆಗಮಿಸಿದ್ದ ಕ್ಷಣದಿಂದ ಇವತ್ತಿನ ವಿದಾಯ ಭೋಜನದವರೆಗೆ ಎಲ್ಲ ಚಿತ್ರಗಳಿವೆ."
  "ವೆರಿ ಗುಡ್.ಇಲಾಖೆಯ ಸೀಲು ಹಾಕಿದೀರೊ?" 
  “ಹಾಕಿದೇನೆ. 'ಮುಖ್ಯಮಂತ್ರಿಯ ಶುಭಾಶಯಗಳೊಂದಿಗೆ' ಅಂತ ಟೈಪ್ ಮಾಡಿ ಅಂಟಿಸಿದ್ದೇನೆ.”
  "ಫೈನ್. ದೀದಿಜಿ, ಕೊನೆಯದಾಗಿ ಇದೊಂದು ಕಾಣಿಕೆ ತಗೊಳ್ಳಿ.”
  ಮೃದುಲಾಬೆನ್ ಆಲ್ಬಮನ್ನು ತೆರೆದು, ನೋಡಿ, ಮುಚ್ಚಿದಳು. “ರಾತ್ರೆಯೇ ಎಲ್ಲ ಚಿತ್ರ ನೋಡಿ, ನಾಳೆ ಬೆಳಗ್ಗೆ ಮಕ್ಕಳಿಗೆ ಕೊಡ್ತೇನೆ. ನೋಡಿ ಸಂತೋಷ ಪಡ್ತಾರೆ ಎಂದಳು.” 
  ಕ್ಯಾಮರಾಮನ್ ಇರಲಿಲ್ಲ. (ಅವನ ಡ್ಯೂಟಿ ಮುಗಿದಿತ್ತು) ದೀಪಗಳು ಬೆಳಗಿದುವು. ರೈಲು ಎಂಜಿನ್ ಕೂ ಎಂದಿತು. ಸೌದಾಮಿನಿ ಮೃದುಲಾಬೆನ್‍ಳ ಕೈ ಕಲುಕಿದಳು. ಜುಮ್ಕಿಗೆ "ಟಾಟಾ" ಎಂದಳು.
  ತಾನು ಹೊರಿಸಿದ ಋಣಭಾರದಿಂದ ಮೃದುಲಾ ಕೊನೆಯ ಕ್ಷಣ ಜಗ್ಗಬಹುದು ಎಂದು ಭಾವಿಸಿದ್ದಳು ಸೌದಾಮಿನಿ ದೇವಿ. ಹಾಗೇನೂ ಆಗಲಿಲ್ಲ. ಅವಳ ಮುಖದ ಉದ್ದಗಲವನ್ನು ಹರ್ಷೋಲ್ಲಾಸ ವ್ಯಾಪಿಸಿತ್ತು.