ಪುಟ:ಮಿಂಚು.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿ೦ಚು 191

 ಅಂಗರಕ್ಷಕರನ್ನು ಸೌದಾಮಿನಿ ಕರೆದಳು:
 "ಈ ಸಲ ಬಂದ ಕೆಲಸ ನಾಳೆ ಮುಗೀತದೆ. ನಾಡದು ಸಂಜೆ ವಾಪಸು.. ನೀವು
ಬೆಳಗ್ಗೆ ಪರಶುರಾಮ ಸಾಹೇಬರಿಗೆ ತಿಳಿಸಿ ನಿಮ್ಮ ಮನೆಗೆ ಹೋಗಿ, ನಾಡದು ಬೆಳಗ್ಗೆ 
ಡ್ಯೂಟಿಗೆ ಬಂದ್ದಿಡಿ, ಈಗ ಊಟ ಮಾಡಿ ಮಲಗಿ.”
 ಮಲಗಿದ ಸೌದಾಮಿನಿಗೆ ನಡುವಿರುಳು ದಾಟಿದರೂ ನಿದ್ದೆ ಬರಲಿಲ್ಲ. ನಾಳೆ
ಫೋನಿನ ಬಳಕೆ. ನಕುಲದೇವ್ಜಿ ಇಲ್ಲಿಗೆ ಬರಬಹುದು. ಪ್ರಧಾನಿಯನ್ನು ಕಾಣಲೇ 
ಬೇಕು. ಆ! ಲೇಹ್ಯ ಮರೆತೆ...
 ಎದ್ದಳು. ದೀಪ ಹಾಕಿ ಲೇಹ್ಯ ತಿಂದು, ಗುಟುಕು ನೀರು ಕುಡಿದು ಮತ್ತೆ 

ಹಾಸಿಗೆ ಸೇರಿದಳು.

 ನಿಧಾನವಾಗಿ, ಬಹಳ ನಿಧಾನವಾಗಿ, ನಿದ್ದೆ ಬ೦ತು.
 ಬೆಳಗ್ಗೆ ಎದ್ದವಳೇ ಮುಖಕ್ಕಿಷ್ಟು ನೀರು ಹನಿಸಿ ನಕುಲದೇವ್ಜಿಗೆ ತಾನೇ 

ಫೋನ್ ಮಾಡಿದಳು.

 “ನಮಸ್ತೆ, ಆಣ್ಣ.”
 “ಎಲಾ! ಯಾವಾಗ ಬರೋಣವಾಯು ?"
 “ನಿನ್ನೆ ಸಂಜೆ ಫ್ಲೈಟಿನಲ್ಲಿ."
 “ತಿಳಿಸದೆ ಬ೦ದಿರಲ್ಲ?"
 “ಯಾಕೆ ದ್ರಿ ಬಹುವಚನ ?"

"ಬೇರೆ ಮುಖ್ಯಮಂತ್ರಿಗಳನ್ನು ಹೀಗೆ ಮಾತನಾಡಿಸಿ ಮಾತನಾಡಿಸಿ ರೂಢಿ ಯಾಗಿದೆ."

 “ನಿಮ್ಮಿಷ್ಟ ಯಾವಾಗ ಸಿಗ್ರಿಡ್ತೀರಾ? ಅಲ್ಪ ಕಾಣಿಕೆ ತಂದಿದ್ದೇನೆ. ವೈಯಕ್ತಿಕ, 

ನನ್ನಿಂದ ನಿಮಗೆ.”

 “ನಾನೀಗ ಶ್ರೀನಗರಕ್ಕೆ ಹೊರಟಿದ್ದೆ ನೆ,”
 “ನೀನೂ ಬಾ ಅಂತ ಹೇಳೋಲ್ವ ?” 
 “ಈ ಪ್ರವಾಸ ಪ್ರಧಾನಿಯ ಪರವಾಗಿ. ನಾನೊಬ್ಬನೇ ಮಾಡಬೇಕಾದ್ದು....
ಒಂದು ಕೆಲಸ ಮಾಡ್ರೀನಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಕುಟೀರಕ್ಕೆ ಬರ್ತೀನಿ.”
 “ಇಲ್ಲಿ ಉಪಾಹಾರ ತಗೊಳ್ಳಿ.” 
 “ಕ್ಷಮಿಸಬೇಕು, ನಾನು ಬದ್ರಿರೋದು ಮುಖದರ್ಶನಕ್ಕೆ, ಕಾಣಿಕೆ ಸ್ವೀಕರಿಸೋ
ದಕ್ಕೆ ಅಷ್ಟೆ"
 “ನಿಮ್ಜತೆ ಮಾತಾಡಬೇಕಲ್ಲ..."
 “ನನಗೆ ಎಲ್ಲ ಗೊತ್ತಿದೆ, ಮಿನಿ, ನೀನು ಚಿಂತಿಸ್ಬೇಡ, ಎಲ್ಲ ಸರಿಹೋಗುತ್ತೆ.”
 “ಮಿನಿ ಅಂತಾದರೂ ಕರೆದಿರಲ್ಲ...ನೀವು ಕಾಶ್ಮೀರದಿಂದ ವಾಪಸಾಗೋದು?”
 “ಎರಡು ಮೂರು ದಿನ ಬಿಟ್ಟೊಂಡು."

ದಕ್ಕೆ