ಪುಟ:ಮಿಂಚು.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೨೪ ಜೀಪು, ಕಾರು, ಕಾರು, ಕಾರು, ಜೀಪು...... ಜನ ನೆರೆದಿದ್ದರು, ಸಹಸ್ರ ಜನ, ಸೌದಾಮಿನಿಗೆ ಅನಿಸಿತು : ತಾನು ಜನ ಪ್ರಿಯ ನಾಯಕಿ ಎನ್ನುವುದರಲ್ಲಿ ಏನು ಸಂದೇಹ ? ఒಳ್ಳೆ ಬಟ್ಟೆ ಧರಿಸಿದ ಅನಾಥ ಮಕ್ಕಳಿಂದ ಗೌರವರಕ್ಷೆ. (ಇಲ್ಲಿ, ಆ ಹುಡುಗರು ಯಾರೂ ಇಲ್ಲ. ಇವರು ಭಿಕ್ಷುಕರಲ್ಲ, ಭಕ್ಷಕರು,) ಹತ್ತಕ್ಕೂ ಹೆಚ್ಚು ಛಾಯಾ ಚಿತ್ರಗ್ರಾಹಕರು. ತಳಿರು ಸಿಂಗಾರ, ಹಸಿರು ಬಿಸಿಲು. ಕಪ್ಪು ಕನ್ನಡಕ ಧರಿಸಿ ಕೊಂಡರೆ ಛದ್ಮವೇಷವಾಗುತ್ತಿತ್ತು. ಈಗ ತಾನು ನಸು ನಗುತ್ತ ನೆಟ್ಟದೃಷ್ಟಿಯಿಂದ ಎಲ್ಲರನ್ನೂ ನೋಡುವವಳು. ಗತಕಾಲದ ಪುಟ್ಟವ್ವನಲ್ಲ, ಆಧುನಿಕ ಸೌದಾಮಿನಿ. ವಿಶ್ವಂಭರನ ಹಿ೦ಬಾಲಕರು ಹಲವರು ಬಂದಿದ್ದಾರೆ-ತನ್ನ ఎದೆగారిಜಕೆ ಎಷ್ಟು ಎಂದು ನೋಡಲು. ತನ್ನ ಕಡೆಯವರಲ್ಲಾ ಹೆಚ್ಚಿನವರಿದ್ದಾರೆ. ಯಾವ ಶಿಬಿರಕ್ಕೂ ಸೇರದವರದೇ ದೊಡ್ಡ ಸಂಖ್ಯೆ. ಭಾನುವಾರ ಬೆಳಗ್ಗೆ ವಿಪರೀತ ಕೆಲಸವಾದರೂ ಮಹಿಳೆಯರು ತಮ್ಮ ಮುಖ್ಯಮಂತ್ರಿಯನ್ನು ನೋಡಲು ಹಲವು ದಾರಿಗಳಿ೦ದ ಬಂದಿದ್ದಾರೆ. ಸೌದಾಮಿನಿ ಕೇಳಿದಳು : “ಮಕ್ಕಳಿಗೆ ತಿಂಡಿಕೊಟ್ಟಿರಾ ?” “ನಿತ್ಯದಂತೆ ಉಪಾಹಾರ ಆಗಿದೆ." ಕಮಲಮ್ಮ ಇರಬಹುದು. ಲಕ್ಷ್ಮೀನರಸಿಂಹಯ್ಯ ? ಸುಲೋಚನಾಬಾಯಿಯ ಪ್ರೊಫೆಸರ್ ಗಂಡ ? ರಂಗಸ್ವಾಮಿ ಬಂದಿಲ್ಲ. ಮತದಾರರ ಪಟ್ಟಿಯ ಪ್ರಕರಣ ತೀರ್ಮಾನವಾಗಲು ಹಲವು ವರ್ಷ ಹಿಡಿದೀತು, ಹಿಡಿದೀತು. ವಿಶ್ವಂಭರ ಮತ್ತು ನಕುಲದೇವ್ ಬಂದಿದ್ದರೆ ಚೆನ್ನಾಗಿತ್ತು. ಆದರೆ ದೂತರಿಂದ ವರದಿ ಹೋಗುತ್ತದೆ. (ಅಷ್ಟೇನೂ ಜನ ಇರಲಿಲ್ಲ. 'ಜಾತ್ರೆ ಮರುಳೋ, ಜನಮರುಳೊ' ಅಂತ ನೆರೆದಿದ್ದರು.) ಸತ್ಯ ಯಾವುದು ? అದೊ ? ఇದೊ ? ಸತ್ಯ ಎಂಬುದೇ ಇಲ್ಲವೇನೊ ಕಡೆಗೆ ? ಶಿಲಾಫಲಕವನ್ನು ಮುಚ್ಚಿದ್ದ ರೇಷ್ಮೆ ಹೊದಿಕೆ. ಆತುರ ಮಾಡದೆ ನಿಧಾನ ವಾಗಿ ಅರಿವೆಯನ್ನು ಸರಿಸಿದಳು. ಕಿವಿಗೆ ಹಬ್ಬವಾಯಿತು ಕರತಾಡನ. ಫಲಕವನ್ನು