ಪುಟ:ಮಿಂಚು.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




242 ಮಿಂಚು ನಾನೊಬ್ಬಳು ಢಾಕಿನಿ, ಅವರೆಲ್ಲ ದೇವತೆಗಳು ಅಂದುಕೊಂಡಿರಾ ?! ಅರ್ಧರ್ಧ ಲಕ್ಷಕ್ಕೆ ವ್ಯವಹಾರ ಕುದುರಿಸೋಕೆ ಕೆಲ ಶಾಸಕರು ಸಿದ್ಧವಾಗಿದ್ದರು. ಇದೇನಾ ನೀತಿ, ಧರ್ಮ ? ನಾನು ಅವರನ್ನು ಕೊಳ್ಳಲಿಲ್ಲ ! (ಅವರು ಯಾರು ? “ಹೆಸರು ಹೇಳಿ!”) ಮುರಬದ ಶಾಸಕ!”

         ನಕುಲದೇವ್   ಎದ್ದು  ಧ್ವನಿವರ್ಧಕವನ್ನು   ಬಳಿಗೆ  ಎಳೆದ.  ಸೌದಾಮಿನಿ  

ಕೂಗಾಡಿದಳು ;

         “ತುಂಬಿದ   ಸಭೆಯಲ್ಲಿ  ವಸ್ತ್ರಾಪಹರಣವೇನ್ರಿ?   ಮಾನಭಂಗ    ಮಾಡ್ತೀ 

ರೇನ್ರಿ ?....(ಧ್ವನಿ ಏರಿಸಿ) ಧ್ವನಿವರ್ಧಕವಿಲ್ಲದೆಯೇ ಮಾತಾಡ್ತೀನಿ ! ಇನ್ನು ಹತ್ತು ನಿಮಿಷ ಕೊಟ್ಟರೆ ನಿಮ್ಮ ಅಂಕೆ ಸಂಖ್ಯೆಗಳು ಅಡಿಮೇಲಾಗ್ತವೆ."

         “ಸೌದಾಮಿನಿ ! ಇದು ಮೂರ್ಖತನ ! ನಿಲ್ಲಿಸಿ !”
         -ನಕುಲದೇವ್ ಕಿರಿಚುತ್ತಿದ್ದಂತೆ ಎಡಬಲ ಎರಡೂ ಕಡೆಗಳಿಂದ ಜನ ಧಾವಿಸಿ 

ಬಂದು ವೇದಿಕೆಯನ್ನು ಸುತ್ತುವರಿದರು.

         ವಿಶ್ವಂಭರ ನಿಂತು ಕೈಜೋಡಿಸಿ ಎಲ್ಲರಿಗೂ ಪ್ರಾರ್ಥಿಸಿದ :
         “ದಯವಿಟ್ಟು ಕುಳಿತುಕೊಳ್ಳಿ ! ;ಎಲ್ಲರೂ ಕುಳಿತುಕೊಳ್ಳಿ !"
         ಸದ್ದು ಕ್ರಮೇಣ ಅಡಗಿತು.  ಎದ್ದು  ನಿಂತಿದ್ದಲ್ಲೆ  ಜನ  ಜಮಖಾನ  ಹಿಡಿದರು.
         ಸೌದಾಮಿನಿ ವೇದಿಕೆಯಿಂದಿಳಿದು  ಸಭಾಂಗಣದ  ಮಧ್ಯೆ  ಶಾಸಕರೊಂದಿಗೆ 

ಕುಳಿತಳು,

         “ಲಕ್ಷ್ಮೀಪತಯ್ಯನವರನ್ನು ಕರೀರಿ. ಅವರು ಪ್ರಪೋಸ್ ಮಾಡಲಿ.”
         ಹೆಸರು   ಹಿಡಿದು   ಕರೆದೊಡನೆ  ಲಕ್ಷ್ಮೀಪತಯ್ಯ  ಬ೦ದರು. “ರಾಷ್ಟ್ರಸಭಾ 

ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಶ್ರೀ ವಿಶ್ವಂಭರರನ್ನು ಸಂತೋಷದಿಂದ ಸೂಚಿಸ್ತೇನೆ” ಎಂದರು. ಅವರ ಪಕ್ಕದಲ್ಲಿ ಇದ್ದ ಶಾಸಕರದ್ದು, “ನಾನು ಅನು ಮೋದಿಸ್ತೇನೆ,” ಎಂದರು.

          ನಕುಲದೇವ್ ಭರತವಾಕ್ಯ ನುಡಿದ :
          “ಕಿಷ್ಟಿಂಧೆ ರಾಜ್ಯದ ರಾಷ್ಟ್ರಸಭಾ  ಶಾಸಕಾಂಗ  ಪಕ್ಷದ  ನಾಯಕನಾಗಿ  ಶ್ರೀ 

ವಿಶ್ವಂಭರ್ ಜಿಯವರು ಸರ್ವಾನುಮತದಿಂದ ಆಯ್ಕೆಯೂಗಿದ್ದಾರೆ. ಅವರಿಗೆ ನನ್ನ ಮತ್ತು ತಮ್ಮ ಹಾರ್ದಿಕ ಅಭಿನಂದನೆ!"

           ಕೊನೆಯ ಬಾರಿಗೆ ಚಪ್ಪಾಳೆ,
           “ವಿಶ್ವಂಭರ್ ! ರಾಜ್ಯಪಾಲರಲ್ಲಿಗೆ ಹೋಗಿ ನಿಮ್ಮ ಪಟ್ಟಾಭಿಷೇಕವನ್ನೊಂದು 

ಮಾಡಿಸಿಬಿಟ್ಟರೆ ನನ್ನ ಕೆಲಸ ಮುಗಿಯಿತು.”

           “ಈಗ ಅವರ ವಿಶ್ರಾಂತಿಯ ಹೊತ್ತು.”
           “ಇವತ್ತು ಸ್ವಲ್ಪ ಕಾದಿರ್ತಾರೆ. ನಡೀರಿ.”
           ಅದೆಲ್ಲಿಂದ ಬಂದಿದ್ದುವೊ ಹಾರಗಳು ! ಯಾರು ಗೆದ್ದರೂ ಸರಿ  ಅಲoಕರಿಸ