ಪುಟ:ಮಿಂಚು.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

253

ಬೆರಳಿಗೆ ಉಸಿರಿನ ಸ್ವರ್ಶವಾಗುತ್ತಿಲ್ಲವಲ್ಲ... ಅಯ್ಯಯ್ಯೊ! ಪರಶುರಾಮ ಸೋಫಾದ ಮೇಲೆ ಕುಸಿಕುಳಿತ.. ತಾನು ಮಾಡಬೇಕಾದುದೇನೆಂದು ಯೋಚಿಸಿದ. ಫೋನ್ ಕಾಣಿಸಿತು. ಪ್ಲಗ್ ಹಾಕಿದ. ಮೊದಲು ತಿಳಿಸಬೇಕಾದ್ದು ಮುಖ್ಯಮಂತ್ರಿಗೆನೂತನ ಮುಖ್ಯಮಂತ್ರಿಗೆ. VISH ಸಿಕ್ಕಿತು. ತಡವಾಗಿ ಯಾರೋ ಎತ್ತಿದರು. ಹೆಣ್ಣು ಧ್ವನಿ,

      “ಹಲ್ಲೋ ಹಲ್ಲೋ ಯಾರು ಮಾತಾಡ್ತಿರೋದು?”
      “ನೀವು ಯಾರು ?” -
      “ಚೀಫ್' ಮಿನಿಸ್ಟರ ಮನೆಯಿಂದ."
      “ತಲೆ ಸರಿ ಇದೆಯ ? ಇದೇ ಚೀಫ್ ಮಿನಿಸ್ಟರ ಮನೆ."
      “ಹೌದು, ಇದು ಮಾಜಿ ಚೀಫ್ ಮಿನಿಸ್ಟರ ಮನೆ. ಅವರ ಮೈ ತಣ್ಣ
ಗಾಗಿದೆ. ಮಲಗಿದವರು ಏಳ್ತಾ ಇಲ್ಲ."
      “ಅದಕ್ಕೆ ನಾವೇನ್ಮಾಡೋಣ?” -
      “ನಾನು ಸಾಹೇಬರಿಗೆ ತಿಳಿಸ್ಬೇಕು. ಎಲ್ಲರಿಗೂ ಅಪಾಯ! ದಮ್ಮಯ್ಯ 

ಎಬ್ಬಿಸಿ!”

      ವಿಶ್ವಂಭರ ಎದ್ದ 
      “ಏನ್ರೀ ಪರಶುರಾಮ್ ?”
      “ಬೆಳಗ್ಗೆ ಪ್ರವಾಸ ಹೊರಡ್ಬೇಕು. ನಸುಕಿನಲ್ಲಿ ಎಬ್ಬಿಸು ಅಂದಿದ್ರು. ಈಗ
ಅವರು ಏಳ್ತಾ ಇಲ್ಲ. ಮೈ ತಣ್ಣಗಿದೆ."
      “ಏನ್ರಿ ಹಾಗಂದ್ರೆ?”
      “ಏನೋ ಆಗಿದೆ ಸಾರ್ ,"
      “ಬರ್ತಿನಿ.. ಐಜಿಪಿಗೆ ಫೋನ್ ಮಾಡಿ ತಕ್ಷಣ ಬಾ ಅನ್ನಿ, ಡಾಕ್ಟರನ್ನೂ
ಅವರೇ ಕರಕೊಂಡ್ಡರ್ಲಿ.”
      "ಹೇಳ್ತೀನಿ."
      ನಿವಾಸದ ಆವರಣದಲ್ಲಿದ್ದ ದೀಪಗಳೆಲ್ಲ ಉರಿದುವು. ಜನ ಕಣ್ಣುಜ್ಜಿ ಕೊಂಡು ಎದ್ದರು. ಎಲ್ಲರಿಗೂ ದಿಗ್ಬ್ರಮೆ.
    ವಿಶ್ವಂಭರ, ಐజిಪಿ, ಡಾಕ್ಟರು, ಗುಪ್ತಚಾರದ ದಳದ ಮುಖ್ಯಸ್ಥ ಬ೦ದರು.
    ಪ್ರಶಾಂತ ಮುಖ, ಮುಗಳ್ನಗೆ-ಇನ್ನೊಂದು ಕ್ಷಣದಲ್ಲಿ ಎದ್ದೇ ಬಿಡುವ 

ಳೇನೋ ಎನ್ನುವಂತಿತು. ಡಾಕ್ಟರು ವಿವರವಾಗಿ ಪರೀಕ್ಷಿಸಿದರು. ನಾಲಗೆಯಲ್ಲಿ ಯಾವ ಗುರುತೂ ಇರಲಿಲ್ಲ.

    “ತೀವ್ರ ಹೃದಯಾಘಾತ. ನಿದ್ದೆಯಲ್ಲೇ ಹೊರಟುಹೋಗಿದ್ದಾರೆ, ಯಾವ 

ಬಗೆಯ ನರಳಾಟವೂ ಇಲ್ಲದ ಸುಖ ಮರಣ" ಎಂದರು ಅವರು.

    “ಅಸ್ವಾಭಾವಿಕ ಸಾವು ಅಲ್ಲವಲ್ಲ ?" ಎಂದು ವಿಶ್ವಂಭರ ಕೇಳಿದ.