ಪುಟ:ಮಿಂಚು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

30

ಮಿಂಚು



“ಇಲ್ಲ ಪುಟ್ಟಾ, ನೀವೇ ಬನ್ನಿ ಅಂದ ಹಾಗಾಯ್ತು ಇದು. ಅವಳಿಲ್ಲದೆ ಇಲ್ಲಿ
ಕೋಳಿ ಕೂಗ್ತದಾ ? ಸೂರ್ಯ ಮುಳುಗ್ತಾನ ?"
ಥೂ ಸ್ವಾರ್ಥಿ !–ಎಂದು ಹೀಗಳೆಯಬೇಕೆನಿಸಿತು. ಮಂಚದ ಕೆಳಗೆ ನಿಂತಿದ್ದ
ಪುಟ್ಟ ಸೂಟ್‌ಕೆಸು ಕಣ್ಣಿಗೆ ಬಿದ್ದು, ತಾನು ಕೃತಘ್ನೆಯಾಗಬಾರದು, ತನ್ನ ಗುರು
ಮೃದುಲಾಬೆನ್____ ಎಂದುಕೊಂಡಳು. ಅವಳು ಸಮರ್ಥೆ, ತನ್ನೊಬ್ಬಳಿಂದಲೆ
ಆಗುತ್ತಿತ್ತೆ ಈ ಸಂಗ್ರಹ ಕಾರ್ಯ? ಎರಡು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಒಂದಾ
ದರೂ ಕೊಟ್ಟಳಲ್ಲ? ಜಗಳಾಡಿ ಪಾಲು ಪಡೆಯಲು ಇದೇನು ಪಿತ್ರಾರ್ಜಿತ ಆಸ್ತಿಯೆ?
ಪುಟ್ಟವ್ವನಿಗೆ ಯೋಚನೆಗಳ ನಡುವೆ ನಗು ಬಂತು. ಬಾಪೂ ಹೆಸರಲ್ಲಿ ದೇಶ ಕಟ್ಟು
ತ್ತಿದ್ದೇವೆ; ತಂದೆಯ ಆಸ್ತಿಯೇ ಅಲ್ಲವೆ ಈ ದೇಶ ? ಭಾಷಣದಲ್ಲಿ ಬಳಸಿದರೆ ಹೇಗೆ
ಈ ಮಾತನ್ನು ? ಆದರೆ, ತಾನು ರಾಷ್ಟ್ರ ಪಕ್ಷದವಳು. ಆಳುವ ಪಕ್ಷದವರ ಭಾಷಣದ
ವೈಖರಿ ಬೇರೆಯೇ ಇರಬೇಕಲ್ಲ? ಆ ಕರುಣಾ ಮಾತ್ರ..... ಅಹಂಕಾರದ ಮೊಟ್ಟೆ,
ತಾನು ಯುವತಿ ಅಂತ ಅವಳಿಗೆ ಹೆಮ್ಮೆ.
(ಒಮ್ಮೆ ತಾನೂ ಹಾಗೆ ಹೆಮ್ಮೆ ಪಡುತ್ತಿದ್ದೆನಲ್ಲ?) ಇನ್ನು ದೇಶದಾದ್ಯಂತೆ ಇವರು ಮೆರೆಯುತ್ತಾರೆ, ಸಂಸಾರ
ವಂದಿಗರಲ್ಲ. ಮಕ್ಕಳಿಲ್ಲ. ನಂಬುತ್ತಾರೆ. ಹಣ ಕೊಡುತ್ತಾರೆ. ಪುಣ್ಯವಂತರಲ್ಲವೆ
ಭಾರತೀಯ ಅನಾಥ ಮಕ್ಕಳು?
ಕರುಣಾ, ಹಿತೈಷಿಯವರ ಮನೆಗೆ ಹೋಗಿದ್ದಳು ದೊಡ್ಡ ಪಟ್ಟಿಯೊಡನೆ.
ಫೋನ್ ಮಾಡಿ ನೂರಾರು ಜನರ ವೇಳೆ ಗೊತ್ತುಮಾಡಬೇಕು, ಹಿತೈಷಿ ಮಹಾನು
ಭಾವ ದಾನಿಗಳ ಪಟ್ಟಿಯಲ್ಲಿರುವ ಮೊದಲಿಗ, ತನ್ನನ್ನು ಕಂಡಿದ್ದ. ಕುತೂಹಲವಿರ
ಬಹುದು__ಎನಿಸಿತು ಪುಟ್ಟವ್ವನಿಗೆ.
ಮೃದುಲಾ ನುಡಿದಳು:
“ನಮ್ಮ ಮಹಾ ಹಿತೈಷಿ ಕೇಳಿದರು-ಕಿಷ್ಕಿಂಧೆಯವರು ವಾಪಸಾದರೆ ಅಂತ?”
“ನನ್ನನ್ನು ಯಾರು ನೆನಪಿಟ್ಕೋತಾರೆ ಮೃದುಲಾಬೆನ್?”
“ಧರ್ಮೇಂದ್ರ ಬಾಬಾ ಬಳಿ ಶಿಷ್ಯವೃತ್ತಿ ಮಾಡು. ಅವರ ಕಾಯಕಲ್ಪ ಚಿಕಿತ್ಸೆಗೆ
ಸಮನಾದದ್ದು ಲೋಕದಲ್ಲಿ ಬೇರೊಂದಿಲ್ಲ, ಭೇಟಿ ಸಿಗೋದೇ ಕಷ್ಟವಂತೆ. ನೀನು
ಭಾಗ್ಯಶಾಲಿ. ಅವರ ಮಠದ ಸ್ವಾಮಿಯೇ ಪತ್ರ ಕೊಟ್ಟಿದಾರಲ್ಲ? ದರ್ಶನ ಸುಲಭ
ವಾಗ್ತದೆ."
“ಯಾವಾಗ ಹೊರಡಲಿ ಮೃದುಲಾಬೆನ್ ?
“ನಾಳೆ ನೀನು ಮತ್ತು ಕರುಣಾಹೋಗಿ ಟಿಕೆಟ್ ಬುಕ್ ಮಾಡಿ. ನಾಳೆ ರಾತ್ರೆಯ
ಟ್ರೇನ್, ಇಲ್ಲವಾದರೆ ನಾಡದು.”
***