ಪುಟ:ಮಿಂಚು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

38

ಮಿಂಚು

“ಛೇ ! ಛೇ !” ಎಂದು ಪುಟ್ಟವ್ವ ಆಕ್ಷೇಪಿಸಿದಳು,
ಬಾಬಾಜಿ ಅಂದರು :
“ಇದೆಲ್ಲ ಅವನಿಗೆ ರೂಢಿ, ಮಠಕ್ಕೆ ಯೋಗಿನಿಯರೋ ಮಾತೆಯರೋ ಬಂದರೆ
ಅವರ ಸತ್ಕಾರ ಆತನ ಜವಾಬ್ದಾರಿ,”
ಬಾಬಾಜಿ, ಮಾಜಿ ಶಿಷ್ಯ ಮಠದತ್ತ ಹೆಜ್ಜೆ ಇಟ್ಟಂತೆ ಮತ್ತು ಧರ್ಮ
ಶಾಲೆಯಲ್ಲಿದ್ದವರೆಲ್ಲ ಜಯಕಾರ ಮಾಡಿದರು : ಕೆಲ ಪಾವಟಿಗೆಗಳನ್ನು ಏರಿ, ಧರ್ಮ
ಶಾಲೆಯತ್ತ ಮುಖಮಾಡಿ, ಬಲಗೈಯನ್ನೆತ್ತಿ ಬಾಬಾ ಆಶೀರ್ವದಿಸಿದರು,
“ನನ್ನ ಮಕ್ಕಳೇ, ನಿಮಗೆ ಶುಭವಾಗಲಿ !”
“ಪೂಜೆಯಾದಮೇಲೆ ಬಾಬಾ ಹೇಳಿ ಕಳಿಸ್ತಾರೆ. ಪ್ರಸಾದಕ್ಕೆ ಬನ್ನಿ.”

***

ಆ ದಿನವನ್ನು ಅಲ್ಲಿ ಕಳೆದ ಬಳಿಕ ಮಾರನೆಯ ಬೆಳಗ್ಗೆ ಭಕ್ತಾದಿಗಳ ಬಸ್
ಪ್ರಯಾಣ, ರಾಯಪುರದತ್ತ, ಪೂಜೆ, ಹರಕೆ, ಕಾಣಿಕೆ ಸ್ವೀಕಾರ, ಪ್ರಸಾದ ವಿನಿ
ಯೋಗ, ರಾತ್ರಿ ಪ್ರವಚನ, ನಿದ್ದೆ ಹೋಗುವುದಕ್ಕೆ ಮುನ್ನ ಬೇರೆ ಬೇರೆ ಊರುಗಳಿಂದ
ಬಾಬಾಜಿಗೆ ಟೆಲಿಫೋನ್ ಕರೆಗಳು. ಇಲ್ಲಿಂದ ದೇಶದ ನಾನಾ ಭಾಗಗಳಿಗೆ, ಭಾರತದ
ರಾಜಧಾನಿ ದಿಲ್ಲಿಗೆ, ಒಮ್ಮೊಮ್ಮೆ ವಿದೇಶಗಳಲ್ಲಿರುವ ಭಕ್ತರಿಂದಲೂ ಆರ್ತ ಕರೆ.
....ಭಕ್ತಾದಿಗಳಿಗೆ ಪ್ರಸಾದ ನೀಡಿದ ಬಳಿಕ ಪುಟ್ಟವ್ವನಿಗೆ ಕರೆ ಬಂತು, ಚಿಕ್ಕ
ಬೀಫ್‌ಕೇಸಿನೊಡನೆ ಅಕೆ ಬಾಬಾನ ಬಳಿಗೆ ಸಾಗಿದಳು.
“ಹಣ ? ಒಂದು ಲಕ್ಷ ?” ಎಂದರು ಬಾಬಾ, ಬೀಫ್‌ಕೇಸಿನತ್ತ ಬೊಟ್ಟು
ಮಾಡಿ.
ಅಪ್ರತಿಭಳಾಗಿ ಪುಟ್ಟಪ್ಪ “ಹೌದು” ಎಂದಳು ; ಪಾದಗಳಿಗೆ ಎರಗಿದಳು.
“ಇಲ್ಲಿ ಕೋಟಿ ಹಣದ ಗಂಟು ಬಿದ್ದಿದ್ದರೂ ಚೋರರು ಬರುವುದಿಲ್ಲ,
ಸೌದಾಮಿನಿ.”
ಪುಟ್ಟವ್ವ ಚಕಿತಳಾದಳು, ಬಾಬಾಜಿ ಏನೆಂದು ಸಂಬೋಧಿಸಿದರು ತನ್ನನ್ನು -
ಸೌದಾಮಿನಿ ಎಂದೆ ? ಈಗ ಏನು ಹೇಳಬೇಕು ತಾನು ? ಏನು ಮಾಡಬೇಕು ?
ಬಾಬಾಜಿಯೇ ಅಂದರು :
“ನೀನು ಅಗ್ನಿ, ನೀನು ಮಿಂಚು -ಸೌದಾಮಿನಿ, ಹಳೆಯ ಪುಟ್ಟ ನನ್ನಲ್ಲಿ
ಲೀನವಾಗಿದ್ದಾಳೆ. (ಅವಳ ತಲೆಯ ಮೇಲೆ ತನ್ನ ಹಸ್ತವಿರಿಸಿ) ಸೌದಾಮಿನಿಯನ್ನು
ನಾನು ಸೃಷ್ಟಿಸಿದ್ದೇನೆ.”
ಸಾದಾಮಿನಿಯನ್ನು ಬಾಬಾ ಹಿಡಿದು ನಿಲ್ಲಿಸಿದರು. ನೆಟ್ಟ ನೋಟದಿಂದ ಅವಳ
ಕಣ್ಣುಗಳನ್ನು ನೋಡಿದರು. ಬಾಬಾನ ನೇತ್ರಗಳಿಂದ ಅತ್ಯಂತ ಪ್ರಖರ ಬೆಳಕು ತನ್ನ