ಪುಟ:ಮಿಂಚು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

55

ಬುದ್ದಿ ಜೀವಿಗಳದೊಂದು ಸಭೆಯನ್ನು ಸೌದಾಮಿನಿ ಏರ್ಪಡಿಸಿದಳು. “ಅರ್ಥ
ಶಾಸ್ತ್ರ'ದಿಂದ ಇಲ್ಲಿಯ ತನಕ ಪ್ರಜೆ ಆಳುವವರ ಕೈಯಲ್ಲಿ ಹೇಗೆ ಆಟಿಕೆಯಾಗಿದ್ದ ಎಂದು
ಅಸ್ಕಲಿತ ವಾಣಿಯಲ್ಲಿ ಬಣ್ಣಿಸಿದಳು. ಪ್ರಾಚೀನ ಭಾರತದಲ್ಲಿ ಗ್ರಾಮಸಭೆಗಳಿದ್ದುವು,
ಗಣರಾಜ್ಯಗಳಿದ್ದುವು. ಆ ಕಾಲಕ್ಕೆ ಅವು ಅರ್ಥಪೂರ್ಣವಾಗಿಯೇ ಇದ್ದುವು. ಇಂದಿನ
ಪ್ರಜಾಪ್ರಭುತ್ವದಲ್ಲಿ ನಾವು ಚೈತನ್ಯ ತುಂಬಬೇಕು. ಇದು ಬುದ್ದಿ ಜೀವಿಗಳಿಂದ ಆಗ
ಬೇಕಾದ ಕೆಲಸ.”
ಮಾರನೆಯ ದಿನದ ಪತ್ರಿಕೆಗಳಲ್ಲಿ ಬುದ್ದಿಜೀವಿಗಳಿಗೆ ಪ್ರಥಮ ಪುಟ ದೊರೆ
ಯಿತು. ಸಚಿತ್ರ ವರದಿ
ನಾಯಕರು ತಮ್ಮ ಹಿಂಬಾಲಕರೊಡನೆ ಅಂದರು :
“ನಂಗೊತ್ತಿಲ್ವಾ? ಅಧಿಕಾರ ಇದ್ದವರ ಹಿಂದೆ 'ಬುದ್ದಿ' 'ಬುದ್ದಿ' ಅಂತ ಹಲ್ಲು
ಗಿಂಜಿಕೊಂಡು ಓಡಾಡೋ ಜನ ಈ ಬುದ್ದಿ ಜೀವಿಗಳು. ಮತದಾರರಿಗೆ ಚಾಲಕ
ಶಕ್ತಿಗಳು-ಹಣ, ಹೆಂಡ, ಜಾತಿ.... ಲೇ ಕಾಣಿಸ್ತಿಲ್ವೇನೊ... ರಸ್ತೇಲಿ ಗಿರಿಯಪ್ಪ
ತನ್ನ ಪಟಾಲಂ ಜತೆ ಹೋಗ್ತಾ ಅವನೆ, ಹಿಡಕೊಂಬನ್ನಿ ಅವರ್ನ....”
ಸೌದಾಮಿನಿ ತನ್ನ ಮತಕ್ಷೇತ್ರಕ್ಕೆ ಶ್ರೀಕ್ಷೇತ್ರಕ್ಕೆ ಒಮ್ಮೆ ಹೋದದ್ದು ಎಷ್ಟೋ
ಅಷ್ಟೆ. ಕಲ್ಯಾಣನಗರದ ಹೆಚ್ಚಿನ ಕ್ಷೇತ್ರಗಳಲ್ಲಿ, ಇದು ತನ್ನ ಪ್ರತಿಷ್ಠೆಯ ಪ್ರಶ್ನೆ ಎನ್ನು
ವಂತೆ ಅವಳು ದುಡಿದಳು,
ಭಾರತದಲ್ಲಿ ಮಹಾಚುನಾವಣೆಯ ದಿನ ಸೂರ್ಯ ಮೂಡಿದ, ಅವನೇ
ಕಿಷ್ಕಿಂದೆಯಲ್ಲೂ ಕಾಣಿಸಿಕೊಂಡ, ಕೆಲವರು ಬೇಗನೆ ಕೆಲವರು ತಡವಾಗಿ ಮತಗಟ್ಟೆ
ಗಳಿಗೆ ಹೋದರು. ಕಡೆಯ ಘಳಿಗೆಯವರೆಗೂ ರಜಾ ಸುಖ ಅನುಭವಿಸಿ, “ಹೋಗಲಿ,
ಮುಂದಿನ ಸಲ ಬೇಗನೆ ವೋಟು ಮಾಡಿದರಾಯಿತು” ಎಂದವರೂ ಇದ್ದರು. ಅವರ
ಹೆಸರಲ್ಲಿ ಇವರು, ಇವರ ಹೆಸರಲ್ಲಿ ಅವರು-ಇಂಥ ಮಾಮೂಲು ಸಂಗತಿಗಳೆಲ್ಲ
ಇದ್ದು ಬೆನ್ನಿ,
ಅಂತೂ ಚುನಾವಣೆ ಮುಗಿಯಿತು,