ಪುಟ:ಮಿಂಚು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

57

ಮಾತಾಜಿಯೇ ಬಂದು, “ಸಾಕೀ, ದಯವಿಟ್ಟು ಸಾಕು. ಒಂದು ಸಲ ಸರಿ,
ಎರಡು ಸಲ ಸರಿ: ಈ ರೀತಿ ! ?”
ತರಿಸಿಟ್ಟಿದ್ದ ಪೇಢ ತುಂಬಿದ ಬುಟ್ಟಿಗಳು ಹೊರಬಂದುವು.
....ನಿರೀಕ್ಷೆಗೂ ಮಾರಿ ಸ್ಪುಟವಾಗಿತ್ತು ಬೆಳಗ್ಗೆ ಕಾಣಿಸಿದ ಚಿತ್ರ,
ಬೆಳಗಾಗುತ್ತಿದ್ದಂತೆ ಬಂದ ಕರೆ ಮುಖ್ಯಮಂತ್ರಿಯ ಮನೆಯಿಂದ :
“ಸೌದಾಮಿನಿ ದೇವಿ, ಇದು ನಿಮ್ಮ ವಿಜಯ !”
“ನಾನು ಕೇವಲ ಕಾರಕರ್ತೆ, ಇದು ಪಕ್ಷದ ವಿಜಯ.”
“ಏನೇ ಅನ್ನಿ, ಇದು ಪವಾಡ, ರಾಜಿನಾಮ ಯಾವಾಗ ಕೊಡಲಿ ?”
“ಜಾಣಪ್ಪಾಜಿ, ಏನು ಹಾಗೆಂದರೆ ?”
“ನೀವು ಬಂದು ಕಿಷ್ಕಿಂಧೆಯ ರಾಜಕೀಯ ಸ್ವಚ್ಛವಾಯಿತು. ಪುನಃ ಕಲ್ಮಷ
ಸೇರಿಕೊಳ್ಳದ ಹಾಗೆ ಹುಷಾರಾಗಿರೋಕು, ರಾತ್ರಿ ಊಟಕ್ಕೆ ಬನ್ನಿ.”
“ಸಂಜೆ ಏಳು ಗಂಟೆಗೆ ವಿಜಯೋತ್ಸವದ ಮೆರವಣಿಗೆ ಶುರುವಾಗ್ತದೆ, ನೀವು
ಮೆರವಣಿಗೆಯ ಕೇಂದ್ರ ವ್ಯಕ್ತಿ, ತೆರೆದ ಜೀಪಿನಲ್ಲಿ. ಅದು ಮುಗಿದ ಮೇಲೆ ತುತ್ತು
ಉಂಡರಾಯಿತು.”
“ಪಚನ ಶಕ್ತಿ ಇಲ್ಲದ ನನಗೂ ತುತ್ತು, ಕಲ್ಲು ತಿಂದು ಜೀರ್ಣಿಸಿಕೊಳ್ಳುವ
ಸಾಮರ್ಥ ಇರುವ ನಿಮಗೂ ತುತ್ತು !”
“ಐದೂವರೆಗೆ ಕಾದ್ಯಾಲಯಕ್ಕೆ ಬನ್ನಿ, ಕಾರಕರ್ತರಿಗೆ ಕಾಫಿ ತಿಂಡಿ ಆದ
ಮೇಲೆ ನಿಮ್ಮ ಭಾಷಣ, ಅನಂತರದ ಕಾರ್ಯಕ್ರಮ ಮೆರವಣಿಗೆ,”
“ಆಗಲಿ, ಮಾತಾಜಿ, ಅಪ್ಪಣೆ.”
ಸೌದಾಮಿನಿ ನಕ್ಕಳು.
ಅಭೂತಪೂರ್ವವಾಗಿರಬೇಕು ಮೆರವಣಿಗೆ, ಸೇವಾದಳದ ಹುದ್ದರಿಗಳು,
ವಿದ್ಯುಚ್ಛಕ್ತಿ ಎಂಜಿನಿಯರಿಂಗ್ ಪರಿಣತರು ಸಮಾಲೋಚನೆಗೆ ನೆರೆದರು. ಆ ಸಭೆಗೆ
ಅಡ್ಡಿ ಉಂಟು ಮಾಡಿತು ಒಂದು ಪುಟ್ಟ ಗದ್ದಲ, ಇಷ್ಟು ದಿನ ಸದ್ದಿಲ್ಲದೆ ಬೆಂಬಲಿ
ಸುತ್ತಿದ್ದವರು ಇಂದು ಕೂಗಾಡಿದರು :
“ಮುಖ್ಯಮಂತ್ರಿ ಮರವಣಿಗೆಯ ಕೇಂದ್ರ ವ್ಯಕ್ತಿ ಆಗುವುದು ಸಾಧ್ಯವಿಲ್ಲ.”
“ಅವರು ಪಕ್ಷದ ಹಿರಿಯರು, ನಾವು ಗೌರವ ಸೂಚಿಸಬೇಕು,” ಎಂದು
ಸೌದಾಮಿನಿ ಸಂತೈಸಿದಳು,
“ತೆರೆದ ಜೀಪಿನಲ್ಲಿ ನೀವೊಬ್ಬರೇ. ಇದು ನಿಮ್ಮ ವಿಜಯೋತ್ಸವ !”
“ಕೈಮುಗಿದು ಕೇಳೊತೇನೆ. ಈ ಹಟ ಬೇಡಿ, ಪಕ್ಷದ ವಿರೋಧಿಗಳು ಇದರ
ಲಾಭ ಪಡೀತಾರೆ.”
“ಹಾಗಾದರೆ ನೀವಿಬ್ಬರೂ ಅಲಂಕೃತ ಜೀಪಿನಲ್ಲಿ ಕೂತ್ಕಳ್ಳಿ,”