ಪುಟ:ಮಿಂಚು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

59

ಗೊತ್ತು ? ದಿವ್ಯಚಕ್ಷುವಿನಿಂದ ಈ ಮೆರವಣಿಗೆಯನ್ನು ಅವರೀಗ ನೋಡುತ್ತಿರಲೂ
ಬಹುದು.
ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಪಕ್ಷದ ಕಾದ್ಯಾಲಯಕ್ಕೆ ಮೆರವಣಿಗೆ ಮರಳಲು
ಹಿಡಿದ ವೇಳೆ ಮೂರು ಘಂಟೆ, ಬಳಿಕ ಜಾಣಪ್ಪನವರ ಅಪೇಕ್ಷೆಯಂತೆ ಅವರ ಕಾರ
ನೈರಿ, ಮುಖ್ಯಮಂತ್ರಿಯ ನಿವಾಸಕ್ಕೆ ಸೌದಾಮಿನಿ ಹೊರಟಳು.
ತುಂಟನೊಬ್ಬ ಅಂದ :
“ಒಳ್ಳೇ ಒಸ ವಧೂವರರ ಅಂಗೆ ಕುಂತಿದ್ರು. ಈಗ ಒಂಟೇ ಬಿಟ್ರಲ್ಲ !”
ಮಾತು ಮುಗಿಯುತ್ತಿದ್ದಂತೆ ಫಟೀರನೆ ಅವನ ಕೆನ್ನೆಗೆ ಏಟು ಬಿತ್ತು. ಬಾರಿಸಿ
ದವನು ಸೌದಾಮಿನಿಯ ಅಂಗರಕ್ಷಕರಲ್ಲೊಬ್ಬ,
ಜಾಣಪ್ಪನವರಿಗೆ ಅವತ್ತಿನ ಮಟ್ಟಿಗೆ ಖುಶಿಯಾಗಿತ್ತು, ವಯೋವೃದ್ಧರು,
ಜ್ಞಾನವೃದ್ಧರು-ನೀವೇ ಮುಖ್ಯಮಂತ್ರಿಯಾಗಿ ಯುವಕರಿಗೆ ಮಾರ್ಗದರ್ಶನ ನೀಡ
ಬೇಕು ಎಂದು ದಿಲೀಶ್ವರರು ಒತ್ತಾಯಿಸಿದರೆ ?
ಉಮೇದುವಾರರ ಪಟ್ಟಿಯ ಇತ್ಯರ್ಥಕ್ಕೆಂದು, ಇತ್ಯರ್ಥದ ನಾಟಕಕ್ಕೆಂದು,
ಸೌದಾಮಿನಿ ಹಿಂದೆ ಎರಡು ಬಾರಿ ಈ ಮನೆಗೆ ಬಂದಿದ್ದಳು. ಆದರೆ ಊಟ ಇದೇ
ಮೊದಲನೆಯದು.
ಫೋನ್ ಟ್ರಿಣ್ ಗುಟ್ಟಿತು:
ಜಾಣಪ್ಪನವರ ಆಪ್ತ ಸಹಾಯಕ “ದಿಲ್ಲಿಯಿಂದ” ಎನ್ನುತ್ತ ಬಂದ, ಮುಖ್ಯ
ಮಂತ್ರಿ ಕುಳಿತಿದ್ದಲ್ಲಿಂದ ಏಳತೊಡಗಿದರು. ಆಪ್ತ ಸಹಾಯಕ ಅವರ ಕಿವಿಯಲ್ಲಿ
ಏನನ್ನೋ ಉಸುರಿದ. ಜಾಣಪ್ಪ ಮತ್ತೆ ಕುಳಿತು, ಸೌದಾಮಿನಿಯ ಕಡೆ ನೋಡಿ
“ನಿಮಗೆ” ಎಂದರು. ವಿಜಯೋತ್ಸವದ ಉತ್ಕರ್ಷ ಇದು ಎನಿಸಿತು ಅವಳಿಗೆ
ಫೋನಿನ ಬಳಿ ಹೋದಳು. ಅವಳ ಮಾತು ಕೇಳಿಸುತ್ತಿತ್ತು : “ಹ್ಮ. ಸೌದಾಮಿನಿ.
ನಮಸ್ತೆ. ವಿಜಯೋತ್ಸವದ ಮೆರವಣಿಗೆ ಈಗ ಮುಗೀತು. ಮಂತ್ರಿಮಂಡಲದ
ಔಪಚಾರಿಕ ರಾಜಿನಾಮೆ.... ಹೇಳೇನೆ, ಆಯ್ಕೆಗೆ ನೂತನ ಶಾಸಕರ ಸಭೆ ಕರೆಯಲು
ಶುಕ್ರವಾರ ಪ್ರಶಸ್ತ ಅನ್ಸಾರೆ.... ಕಳಿಸ್ತೀರಾ... ? ಕಾಯ್ತಿವೆ.. ಇಲ್ಲ.. ಇಲ್ಲ....
ಹೇಳೀನಿ... ಅಣ್ಣಾಜಿಯವರಿಗೆ ನಮಸ್ತೆ ತಿಳಿಸಿಬಿಡಿ.”
ಭೋಜನದ ಮೇಜಿನ ಬಳಿಗೆ ಬಂದ ಸೌದಾಮಿನಿ ಜಾಣಪ್ಪನವರ ಕಪ್ಪಿಟ್ಟ
ಮುಖವನ್ನು ಕಂಡಳು.
“ಪಕ್ಷದ ಅಧ್ಯಕ್ಷರು ಜಾಣಪ್ಪನವರ ಸಲಹೆ ಪಡೆಯದೆ ಏನೂ ಮಾಡಬೇಡಿ
ಎಂದರು. 'ಇಲ್ಲ', 'ಇಲ್ಲ' ಎಂದ (ವಾಸ್ತವವಾಗಿ ಆ ಅಧ್ಯಕ್ಷರು ಅಂದದ್ದು :
'ಜಾಣಪ್ಪನವರ ಮನಸ್ಸಿಗೆ ನೋವಾಗುವಂಥಾದ್ದೇನನ್ನೂ ಹೇಳಬೇಡಿ.') ಸಂಪುಟದ
ರಾಜಿನಾಮ ವಿಷಯ ಕೇಳಿದ್ರು.”
ಜಾಣಪ್ಪನವರು ತನ್ನ ವಿಜಯದ ಘಳಿಗೆ ಎಂದು ತೊಡೆ ತಟ್ಟಿದರು.