ಪುಟ:ಮಿಂಚು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

71

ಜಾಣಪ್ಪನವರಿಂದ ಪತ್ರ ಬಂತು, ಮುದ್ದಾಂ.
“ನನ್ನ ಪ್ರಿಯ ಮಾತಾಜಿ ಸೌದಾಮಿನಿ ದೇವಿ,

ನಿವಾಸದ ಬಗ್ಗೆ ನಿಮ್ಮ ಸೂಚನೆ ಬಂದೊಡನೆ ತೆರವು ಮಾಡಲು ಸಿದ್ಧನಿದ್ದೇನೆ.
ರಾಜ್ಯಪಾಲ ಪದವಿಯನ್ನು ಕುರಿತು ದಿಲ್ಲಿಯಿಂದ ಏನೂ ಸಂದೇಶ ಬಂದಿಲ್ಲ.
ನಿಮಗೆ ತೊಂದರೆಯಾಗಬಾರದು.
ಒಂದು ಖಾಲಿ ಮನೆ ಬಾಡಿಗೆಗೆ ಕೊಡಿಸಿ. ಅಲ್ಲಿಗೆ ಹೋಗುತ್ತೇನೆ. ಮುಖ್ಯ ನಿಮಗೆ ತೊಂದರೆಯಾಗಲೇಬಾರದು.ಶುಭಾಶಯಗಳು

ಇತಿ ವಿಶ್ವಾಸದ

ಜಾಣಪ್ಪ
ಮಾಜಿ ಮುಖ್ಯಮಂತ್ರಿ


ಕಟ್ಟಡದ ನವೀಕರಣ ಆಗುತ್ತಿರುವ ಸುದ್ದಿ ತಿಳಿದು ಮುದುಕ ಕಾಗದ ಬರೆದಿ
ದ್ದಾನೆ-ಎಂದು ಸೌದಾಮಿನಿ ಸರಿಯಾಗಿಯೇ ಊಹಿಸಿದಳು.ಆಕೆಯಿಃದ ನಿರ್ದೇ
ಶಿತನಾಗಿ ರಂಗಧಾಮ ಜಾಣಪ್ಪನವರ ನಿವಾಸಕ್ಕೆ ಹೋದ.
“ರಂಗಧಾಮ ಅಲ್ವೆ ? ಬಾಪ್ಪ" ಎಂದರು ಜಾಣಪ್ಪ.
“ನೂತನ ಮುಖ್ಯಮಂತ್ರಿ ಕಳಿಸಿದ್ದಾರೆ.”
“ಮಾತಾಜಿ ಕಳಿಸಿದರೋ ? ಅವರಿಗೊಂದು ಕಾಗದ ಬರೆದಿದ್ದೆ."
“ಆ ವಿಷಯವೇ ಮಾತನಾಡಿ ಬಾ ಅಂದ್ರು, ತಾವು ಎಷ್ಟು ಕಾಲ ಬೇಕಾದರೂ
ಇಲ್ಲಿಯೇ ಇರಬಹುದಂತೆ."
“ಅದು ಹ್ಯಾಗಾಗುತ್ತೆ?”
“ತಮ್ಮ ವಸತಿ ಸೌಕರ್ಯ ಸರಕಾರದ ಜವಾಬುದಾರಿ ಅಂತೆ."
“ಹಿರಿಯರನ್ನ ಈ ರೀತಿ ಗೌರವದಿಂದ ಕಾಣೋದು ಸಂಸ್ಕೃತಿಯ ಲಕ್ಷಣ."
“ಬೇಕಾದರೆ, ತಮಗೆ ಇಷ್ಟವಾದ ವಿಸ್ತರಣದಲ್ಲಿ ದೊಡ್ಡ ನಿವೇಶನ
ಮುಜೂರು ಮಾಡ್ತಾರಂತೆ. ಮಕ್ಕಳ ಹೆಸರಿನಲ್ಲಿ ಬೇಕಾದರೂ ಅರ್ಜಿಗಳನ್ನ ಕಳಿಸ
ಬಹುದಂತೆ.”
"ಔದಾರ್ಯಕ್ಕಾಗಿ ಉಪಕೃತ.”
“ರಾಜ್ಯಪಾಲರ ಹುದ್ದೆ ಗ್ಯಾರಂಟಿ. ಇನ್ನು ನಾಲ್ಕು ತಿಂಗಳಲ್ಲಿ ಎರಡು ಸ್ಥಾನ
ಖಾಲಿಯಾಗುತ್ತಂತಲ್ಲ ? ಈ ಸಲ ದಿಲ್ಲಿಗೆ ಹೋದಾಗ ಪ್ರಧಾನಿಯವರ ಜತೆ
ಮಾತಾಡ್ಕೊಂಡು ಬರ್ತಾರಂತೆ.”
“ಮುಚ್ಚುಮರೆಯ ಮಾತು ನನಗೆ ಅಭಾಸವಿಲ್ಲ. ರಂಗಧಾಮ. ಈಗ ದಿಲ್ಲಿ
ಯಲ್ಲಿ ಮಾತನಾಡಿ ಆಗೋದು ಅಷ್ಠರಲ್ಲೆ ಇದೆ. ಚಾಡಿ ಹೇಳಿ ಅಡ್ಡಗಾಲಿಡದಿದ್ದರೆ
ಅಷ್ಟೇ ಸಾಕು. ಸಪ್ತರ್ಷಿಗಳು–ಮಹಾವ್ಯಾಧ-ಇಲ್ಲಿ ನಿರಾಂತಕವಾಗಿ ಚಲಿಸ