ಪುಟ:ಮಿಂಚು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

74



೧೦

ನೂತನ ಶಾಸಕರ ಪ್ರತಿಜ್ಞಾ ಸ್ವೀಕಾರಕ್ಕಾಗಿ ವಿಧಾನಮಂಡಲದ ಸಭೆ ಜರಗಿತು.
ಲಕ್ಷ್ಮೀಪತಿ ವಿಧಾನಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು,
ನಾಯಕರು ಪ್ರತಿಪಕ್ಷದ ನಾಯಕರಾದರು.

***

ಮುಖ್ಯಮಂತ್ರಿಯ ಗೃಹನಿವಾಸದ ನವೀಕರಣ ಕಾರ್ಯ ಮುಗಿಯುತ್ತ ಬಂತು.
ಸೌದಾಮಿನಿ ರಂಗಧಾಮನನ್ನು ಕೇಳಿದಳು :
ಒಳಗಿನ ಅಲಂಕರಣಕ್ಕೆ ಏನು ವ್ಯವಸ್ಥೆ ಮಾಡಿದ್ದೀರಿ ರಂಗಧಾಮ್ ?”
“ಆ ಕೆಲಸವನ್ನ ಫಾರೀನ್ ರಿಟರ್ನ್ದ್ ಇಂಟೀರಿಯರ್ ಡೆಕರೇಟರ್ ಒಬ್ಬರಿಗೆ
ವಹಿಸಿಕೊಟ್ಟಿದೆ. ಸಮರ್ಥೆ. ಹೆಸರು ಶ್ಯಾಮಲಾ ಅಂತ.”
"ಇವರು ಬಹಳ ಸಮಯದಿಂದ ನಿಮಗೆ ಗೊತ್ತೊ ?”
“ಅವರನ್ನು ನಾನಿನ್ನೂ ಕಂಡಿಲ್ಲ. ಅವರ ಕೆಲಸವನ್ನು ಮಾತ್ರ ಆರೇಳು ಜನ
ಹೊಗಳೋದು ಕೇಳಿದೇನೆ.”
“ಒಳ್ಳೇದು. ಚಿಲ್ಲರೆಯವರ ಜತ ನಾವು ಸಂಪರ್ಕ ಇಟ್ಟುಕೊಳ್ಳಬಾರದು.
ಕಂಟ್ರಾಕ್ಟರರ ಮೂಲಕ ಮಾಡಿಸಬೇಕು.”
“ಮತ್ಸರದ ಮೊಟ್ಟೆ' ಎಂದು ರಂಗಧಾಮ ಮನಸ್ಸಿನೊಳಗೆ ಗೊಣಗಿದ,
ಅವನ ತುಟಿಗಳ ಮೇಲೆ ಮೂಡಿದ ಕಿರುನಗೆಯನ್ನು ಗಮನಿಸದೆ ಸೌದಾಮಿನಿ
ಅಂದಳು :
“ಹೂರಗಿನ ಅಲಂಕರಣಕ್ಕೆ ? ನಮ್ಮ ಕ್ರಿಕೆಟ್ ಲಾನ್ ?”
“ನಾಳೆ ಸಂಜೆ ಹೋಗೋಣ, ಗೋಡೆಗಳಿಗೆ ಬಣ್ಣ ಬಳೆದದ್ದಾಯ್ತು. ಲಾನ್
ಇಪ್ಪತ್ತೇಳು ಅಡಿ ಅಗಲ; ಎಪ್ಪತ್ತೆಂಟು ಅಡಿ ಉದ್ದ, ಹುಲ್ಲು ಕತ್ತರಿಸಿದರಾಯಿತು.”
“ಮೊವರ್ ಇದೆಯ ?”
“ತೋಟಗಾರಿಕೆ ಇಲಾಖೆಯಿಂದ ಬರದೆ, ಹೂ-ಗಿಡ ಇರೋ ಕುಂಡಗಳನ್ನು
ಜೋಡಿಸಿ ಪುಷ್ಪೋದ್ಯಾನ ರಚಿಸ್ತಾರೆ, ಮುಂದೆ ನೀಲಿ ನಕಾಶೆ ತಯಾರಿಸಿ ಖಾಯಂ
ಹೂ ತೋಟ ಮಾಡ್ತಾರೆ.”