ಪುಟ:ಮಿಂಚು.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

15

“ನೀವು ನನ್ನನ್ನು ಟೆನ್ನಿಸ್‌ನಲ್ಲಿ ಸೋಲಿಸೋದು ಭ್ರಮೆ, ಧ್ರುವ, ಅವತ್ತು
ಮಾತಾಜಿ ಅಮೃತಹಸ್ತದಿಂದ ಲಾನ್‌ನ ಉದ್ಘಾಟನೆ ಮಾತ್ರ. ಒಬ್ಬ ದರ್ಜಿ
ಜತ ಶಾಸಕರ ಭವನದ ನನ್ನ ಕೊಠಡಿಗೆ ಸಂಜೆ ಬನ್ನಿ, ಫ್ರಾಕ್ ಚೆನ್ನಾಗಿರುತ್ತೆ.
ಆದರೆ ಪತ್ರಿಕೆಯವರು ಎಷ್ಟು ರಗಳೆ ಮಾಡ್ತಾರೊ? ಇಬ್ಬರಿಗೂ ಬ್ರೌಸರ್ ಮತ್ತು
ಶರ್ಟುಗಳನ್ನು ಹೊಲಿಸೋಣ.”
“ಆಗಬಹುದು. ಅಂತೂ ಶಿಷ್ಯ ಕೈಯಲ್ಲಿ ಗುರುವಿಗೆ ಪರಾಜಯ !”
“ಯಾರ್ರೀ ಶಿಷ್ಯ ? ನಾನೇ ಅಲ್ವೇನ್ರಿ ನಿಮಗೆ ಹೇಳ್ಕೊಟ್ಟದ್ದು ?”
“ಮರೆತೇಬಿಟ್ಟಿದ್ದೆ ! ನನ್ನ ಗುರುವಿಗೆ ನಾನು ಕಾಣಿಕೆ ಸಲ್ಲಿಸೋದು ಬೇಡವ ?”

***

ಮುಖ್ಯಮಂತ್ರಿಯವರಿಂದ ಟೆನ್ನಿಸ್ ಲಾನ್‌ನ ಉದ್ಘಾಟನೆ ; ಬಳಿಕ ಗೃಹ
ಕಾರ್ಯಾಲಯದ ಪ್ರವೇಶ, ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಯಿತು.”
ಹೊಸದಾಗಿ ಮುಖ್ಯಮಂತ್ರಿಯವರ ಆಪ್ತ ಸಹಾಯಕರ ಬಣವನ್ನು ಸೇರಿದ
ವನು ಪಕ್ಷದ ಕಾರ್ಯಾಲಯದಲ್ಲಿ ಮಾತಾಜಿಗೆ ನಿಷ್ಠೆ ತೋರುತ್ತಿದ್ದ ಪರಶುರಾಮ್.
ಆತನನ್ನು ಕರೆದು ಸೌದಾಮಿನಿ ಹೇಳಿದಳು :
“ನನ್ನ ಜತೆ ಈಗ ಇರುವವರೆಲ್ಲ ಹಳೆಯ ಹುಲಿಗಳು, ಹುಷಾರಾಗಿರಬೇಕು,
ಅವರ ಮೇಲೆ ಕಣ್ಣಿಡಿ, ವಾಸ್ತವವಾಗಿ ನೀವೇ ಮುಖ್ಯಮಂತ್ರಿಯ ಆಪ್ತ ಕಾರ್ಯ
ದರ್ಶಿ, ಮುಂದಿನ ವಾರದಿಂದ ಹೊಸ ಕಟ್ಟಡದಲ್ಲಿ ನನ್ನ ವಾಸ, ಕಾರ್ಯಾಲಯವೂ
ಅಲ್ಲಿಯೇ, ಅಂಗರಕ್ಷಕರ ಜತ ನೆರಳಾಗಿರಬೇಕು.”
"ಇದು ನನ್ನ ಅದೃಷ್ಟ ಅಂತ ಭಾವಿಸ್ತೇನೆ, ಮಾತಾಜಿ."
“ಪಕ್ಷದ ಕಚೇರಿಯಲ್ಲಿ ನೀವು ತೋರಿಸ್ತಿದ್ದ ಶಿಸ್ತಿನ ವರ್ತನೆಗೆ ಇದು ಪ್ರತಿಫಲ,
ನಮ್ಮ ವಿಜಯೋತ್ಸವ ಆದಮೇಲೆ, ಮೆಚ್ಚಿದ ಕಾರ್ಯಕರ್ತೆಯನ್ನು ನೀವು ಮದುವೆ
ಯಾಗೀರಿ ಅಂಡ್ಕೊಂಡಿದ್ದೆ.”
“ನಮ್ಮದು ದೊಡ್ಡ ಕುಟುಂಬ, ನಾನು ಆರನೆಯವನು. ನನಗೆ ಒಬ್ಬಳು
ಅವಿವಾಹಿತ ತಂಗಿ ಇದ್ದಾಳೆ, ಮೊದಲು ಅವಳದಾಗಬೇಕು.”
“ಸರಿ, ಅದು ಬೇಗನೆ ಆಗಲಿ, ಅದಾದ ಮೇಲೆ ನಿಮ್ಮದು, ವಿವಾಹಿತ
ಆಪ್ತ ಕಾರ್ಯದರ್ಶಿಯ ಸಕುಟುಂಬ ವಾಸಕ್ಕೆಂತ ಹೊಸ ಬಂಗಲೆಯ ಆವರಣದಲ್ಲಿ
ಹೊರಮನೆ ಇದೆ.”
“ದೈವಕೃಪೆಯಿಂದ ಹೊರಮನೆಗೆ ಬೇಗನೆ ಬಂದೇನು.”
ವಾಸ್ತವ ಸಂಗತಿ ಎಂದರೆ ಪರಶುರಾಮನಿಗೆ ಮದುವೆಯಾಗಿತ್ತು, ಆದರೆ
ಅವಳು ಅವಿದ್ಯಾವತಿ, ಕುರೂಪಿ, ಮಕ್ಕಳಾಗಿರಲಿಲ್ಲ ಸದ್ಯಃ ! ಹುಡುಗಿಯ ತಂದೆ
ವರದಕ್ಷಣೆ ಕೊಡಲು ಒಪ್ಪಿದ್ದ.