ಪುಟ:ಮಿಂಚು.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

90

ಮಿಂಚು

ಸೌದಾಮಿನಿ ಗುಡುಗಿದಳು :
“ಯಾರೊ ಆತ ?”
ಪರಶುರಾಮನೆಂದ :
“ಈ ಕುಟೀರದ ಉಸ್ತುವಾರಿ ಅಧಿಕಾರಿ.”
“ಹತ್ತೂವರೆ ಘಂಟೆಗೆ ಬರೋ ಬಡಾಸಾಹೇಬ ಅಂತ ಕಾಣುತ್ತೆ. ಮುಖ್ಯ
ಮಂತ್ರಿ ದಿಲ್ಲಿಯಲ್ಲಿ ಇರುವಾಗಲೇ ಇಂಥ ಅವಸ್ಥೆ !”
“ಜೀಪು ಕೆಟ್ಟಿದೆಯಂತೆ, ಫಟ್ ಫಟೀಲಿ ಬಾನಂತೆ.”
ಒಂದು ಬಡಕಲು ಕುದುರೆ ಮತ್ತು ಜಟಕಾ ಕೊಡಬೇಕು ಈ ನನ್ಮಗನಿಗೆ !”
ಪರಶುರಾಮ ನಗೆ ತಡೆಯಲಾರದೆ, ಸರಕ್ಕನೆ ಪಕ್ಕಕ್ಕೆ ತಿರುಗಿದ.
“ನಡಿ, ಅಡುಗೆಮನೆ ಹ್ಯಾಗಿದೆ ನೋಡೋಣ.”
ಅಡುಗೆಯಾತ ನಡುಬಾಗಿ ವಂದಿಸಿದ,
ಜವಾನ ಎಲ್ಲಿ ?”
“ತರಕಾರಿ ತರೋದಕ್ಕೆ ಹೋಗಿದ್ದಾನೆ.”
“ನಮ್ಮ ರಾಜ್ಯದವನೊ ?”
“ಅಲ್ಲ. ಬಿಹಾರಿನವನು,”
ಪರಶುರಾಮ ಬಟ್ಟೆ ತುಂಡು ತಂದು ಸೋಫಾದ ಧೂಳು ಒರೆಸಿದ ಮುಖ್ಯ
ಮಂತ್ರಿ ಕುಳಿತಳು. ಅಂಗರಕ್ಷಕರನ್ನು ಕರೆದಳು.
“ನಿಮ್ಮ ಮನೆಗಳಿಗೆ ಹೋಗಿ ಬಂಧು ಬಳಗದ ಜತೆ ಸುಖವಾಗಿರಿ. ಇವತ್ತು
ಚುಟ್ಟಿ, ನಾಳೆ ಬೆಳಗ್ಗೆ ಡ್ಯೂಟಿ ಮೇಲಿರಬೇಕು. (ಸೆಲ್ಯೂಟ್‌ಗಳಿಗೆ ಉತ್ತರವಾಗಿ)
ಠೀಕ್.”
ಸೌದಾಮಿನಿಯ ಹೊಟ್ಟೆ ಚುರುಚುರು ಎನ್ನುತ್ತಿತ್ತು. ಆ ಗೆಸ್ಟ್ ಹೌಸ್‌ನಲ್ಲೆ
ಬ್ರೇಕ್ ಫಾಸ್ಟ್ ಮುಗಿಸಿ ಹೊರಟಿದ್ದರೆ ಆ ಪ್ರಧಾನ ಕಾರ್ಯದರ್ಶಿಯದೇನು ಕೊಳ್ಳೆ
ಹೋಗಿತ್ತು ? ಈ ಅಡುಗೆಯವನು ಉಪಾಹಾರ ತಯಾರಿಸಿದಂತೆಯೇ ಇದೆ ಎಂದು
ಗೊಣಗಿ ಆಪ್ತ ಕಾರ್ಯದರ್ಶಿಗೆ ಅನುಜ್ಞೆ ಇತ್ತಳು :
“ಒಳಗಡೆ ಟಿಫಿನ್, ಕ್ಯಾರಿಯರ್, ಫ್ಲಾಸ್ಕ್ ಇದ್ದ ಹಾಗಿತ್ತು. ಹತ್ತಿರ ಒಳ್ಳೇ
ಹೋಟೆಲು ಯಾವುದಿದೆ ಅಂತ ಕೇಳು, ಏನಾದರೂ ತಗೊಂಡ್ವಾ, ಹಸಿವು: ಅಲ್ಲಿ
ಉಪಾಹಾರಕ್ಕೆ ಕೂಟ್ಟಯೆ ಎಲ್ಲಾದರೂ! ನನಗೆ ತಂದ್ರೂಟ್ಟು ಆಮೇಲೆ ನೀನು
ಹೋಗು.”
ಪರಶುರಾಮ ಕಾರ್ಯೋನ್ಮುಖನಾದ,
'ಟಿಫಿನ್' ಬರುವುದಕ್ಕೂ ಉಸ್ತುವಾರಿ ಅಧಿಕಾರಿ ಫೆರ್ನಾಂಡೀಸ್ ಆಗಮಿಸು
ವುದಕ್ಕೂ ತಾಳೆ ಬಿತ್ತು,
“ಗುಡ್‌ಮಾಕ್ಸಿಂಗ್ ಸರ್__ಮದಾಮ್.”