ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ










ಹರಕೆ ಬಯಲಾಟ ಮತ್ತು ಕಲಾರೂಪ
(ಹರಕೆ ಬಯಲಾಟಗಳ ಆಡಿಸುವಿಕೆಯ ಕುರಿತ ಚರ್ಚೆಯಲ್ಲಿ ಒಂದು ಪ್ರತಿಕ್ರಿಯೆ)

ಯಕ್ಷಗಾನದ ಕಲಾರೂಪ ಕುರಿತು, ಮುಖ್ಯವಾಗಿ ಹರಕೆ ಬಯಲಾಟಗಳ ಸಂದರ್ಭದಲ್ಲಿ ಕಲಾರೂಪದ ಸಂರಕ್ಷಣೆಯ ಕುರಿತು, ಒಂದು ಗಂಭೀರವಾದ ಚರ್ಚೆ ಆಗಬೇಕಾಗಿದೆ. ಇಲ್ಲಿ, ಸದ್ಯ ಇರುವ ಸ್ಥಿತಿಯ ಸಮರ್ಥನೆಯಾಗಲಿ, ಟೀಕೆಯಾಗಲಿ ಉದ್ದೇಶವಾಗಬಾರದು. ಕಲೆಗಳ, ಕಲಾ ವಿಮರ್ಶೆಯ ತತ್ತ್ವಗಳನ್ನು, ಮಾನದಂಡಗಳನ್ನು ಒಪ್ಪಿಕೊಂಡು ಚರ್ಚೆ ಜರಗಬೇಕಾಗಿದೆ. ಆತ್ಮಶೋಧನಾ ಪೂರ್ವಕ ಚಿಂತನೆ ಆಗಬೇಕಾಗಿದೆ.

ಹರಕೆ ಬಯಲಾಟವೆಂಬುದು, ಭಕ್ತಿಯ ಒಂದು ಅಭಿವ್ಯಕ್ತಿ ಹೌದು. ಭಕ್ತಿಗೆ ಅಲ್ಲಿ ಪ್ರಾಶಸ್ತ್ರವೂ ಇದೆ. ಇದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಆದರೆ, ಇಲ್ಲಿ ಭಕ್ತಿಯ ಸೇವೆ ಯಾವುದು? ಎಂಬುದು ಪ್ರಶ್ನೆ. ಹರಕೆ ಬಯಲಾಟದ ಮೂಲ ಕಲ್ಪನೆಯಂತೆ, ಆಟವನ್ನು ಆಡಿಸಿ, ಅದನ್ನು ಜನರಿಗೆ ತೋರಿಸುವುದೇ ಒಂದು ಪೂಜೆ. ಆಟವೇ ಆರಾಧನೆ. ಅದರ ಸುತ್ತ ಮತ್ತೊಂದು ಆರಾಧನಾ ಸಂಕೀರ್ಣ ಅಥವಾ ಜಾತ್ರೆಯ ವಾತಾವರಣವನ್ನು ಸೃಷ್ಟಿಸುವುದು.

'ಆಟದ ಮೂಲಕ ಭಕ್ತಿ ಪ್ರದರ್ಶನ'ವೆಂಬ ತತ್ತ್ವಕ್ಕೆ ವಿರುದ್ಧವಾದುದು. ಹರಕೆ ಎಂಬುದು

• ಡಾ. ಎಂ. ಪ್ರಭಾಕರ