ವಿಷಯಕ್ಕೆ ಹೋಗು

ಪುಟ:ಮುಡಿ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ










ಕಲೆ : ಮೂಲ ಶೋಧನೆಯ ವಿಧಾನ


ಸಾಂಸ್ಕೃತಿಕ ಪ್ರಕಾರ, ವಸ್ತು, ವಿದ್ಯಮಾನ, ಪದ್ಧತಿ ಮೊದಲಾದವುಗಳ ಕುರಿತು ಅವುಗಳ ಮೂಲ, ಉಗಮ, ಪ್ರಸರಣಗಳ ಕುರಿತು ನಮ್ಮಲ್ಲಿ ಸದಾ ಒಂದು ಕುತೂಹಲವು ಕೆಲಸ ಮಾಡುತ್ತಿರುತ್ತದೆ. ಈ ಸಂಗತಿಯ ಮೂಲ ಎಲ್ಲಿ ಎಲ್ಲಿಂದ ಬಂತು ? ಎಂಬ ಪ್ರಶ್ನೆಗಳನ್ನು ಆಗಾಗ ಕೇಳುತ್ತ ಇರುತ್ತೇವೆ. ಸಂಸ್ಕೃತಿ ಪ್ರಕಾರಗಳ ಮೂಲ ವಿಕಾಸಗಳ ಕುರಿತು ಅಪಾರವಾದ ಶೋಧನೆ, ಸಂಶೋಧನೆ, ವಿಶ್ಲೇಷಣೆಗಳು ನಡೆದಿವೆ, ಈಗಲೂ ನಡೆಯುತ್ತಿವೆ. ಕೇವಲ ಕುತೂಹಲ ಶಮನಕ್ಕಿಂತ ಆಚೆಗೂ ಈ ಶಾಸ್ತ್ರಕ್ಕೆ ಪ್ರಯೋಜನವಿದೆ.ನಮ್ಮ ಇರವನ್ನು ಅರ್ಥೈಸಲು, ಸಂಸ್ಕೃತಿಯು ನೈಜ ಚಿತ್ರಣವನ್ನು ಬಿಂಬಿಸಲು, ಅಗ್ರಹಗಳನ್ನು ದೂರೀಕರಿಸಲು, ಮುಂದಿನ ದಾರಿಯನ್ನು ರೂಪಿಸಲು 'ಮೂಲ' ಜ್ಞಾನವು ಸಹಕಾರಿ, ಕಲಾ ಪ್ರಕಾರ, ಆರಾಧನಾ ವಿಶೇಷ, ಸಾಹಿತ್ಯ ರೂಪ ಮೊದಲಾದವುಗಳ ಮೂಲದ ಕುರಿತೂ ಈ ಮಾತು ಸಲ್ಲುತ್ತದೆ.
ಮೂಲ ಶೋಧ ಬೇಕೆ?
"ಒಂದು ಪ್ರಕಾರ ಮೂಲ ಎಲ್ಲಾದರೆ ನಮಗೇನು ? ಈ ಬಗೆಯ ಹುಡುಕಾಟವೆ ಅನವಶ್ಯ ಶ್ರಮ. ಅದು ಈಗ ಹೇಗಿದೆ, ಹೇಗಿರಬೇಕು ಎಂದು ಯೋಚಿಸುವತ್ತ ಗಮನ

ಹರಿಸಬೇಕಾದುದು ಮುಖ್ಯ" ಎಂಬ ಒಂದು ವಾದವೂ ಉಂಟು. ಈ ವಾದದಲ್ಲೂ ಒಂದು

• ಡಾ. ಎಂ. ಪ್ರಭಾಕರ ಜೋಶಿ