ವಿಷಯಕ್ಕೆ ಹೋಗು

ಪುಟ:ಮುಡಿ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

76

ಮುಡಿ

ಸ್ಪಷ್ಟ. ಹಾಗಾದಲ್ಲಿ ಮಾತ್ರ 'ಗಿಲೀಟಿನ ಆಧುನಿಕತೆ'ಗಿಂತ ಭಿನ್ನವಾದ ನೈಜ, ಬುದ್ದಿಪೂರ್ವಕ ಆಧುನಿಕತೆ ನಮ್ಮ ರಂಗಕ್ಕೆ ದಕ್ಕಿತು.
ಎರಡು ದಾರಿಗಳು
ಬದಲಾಗುವ ಅಭಿರುಚಿಗಳು, ವಿಫುಲವಾಗಿ ಬಂದಿರುವ ಹೊಸ ಮನೋರಂಜನೆಗಳು, ನವೀನ ಸಾಂಸ್ಕೃತಿಕ ಪ್ರವೃತ್ತಿಗಳಲ್ಲಿ ನಮ್ಮ ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ಪಂಥಾಹ್ವಾನಗಳಿವೆ; ನಿರ್ಣಾಯಕ ಮುಖಾಮುಖಿಗಳಿವೆ. ಇದರ ಫಲಿತಾಂಶ - ಎರಡು ರೀತಿಯಲ್ಲಾಗಬಹುದು. ಒಂದು: ಈ ಹೊಡೆತಕ್ಕೆ ಸಿಕ್ಕಿ ನಮ್ಮ ಕಲೆಗಳು ದಿಕ್ಕಾಪಾಲಾಗಿ, ಛಿದ್ರವಾಗಿ, ವಿಕೃತವಾಗಿ, ಅವಸಾನಗೊಳ್ಳಬಹುದು. ಹೀಗಾದರೆ ಅದು ದೊಡ್ಡ ಸಾಂಸ್ಕೃತಿಕ ನಷ್ಟವಾಗುತ್ತದೆ. ಎರಡು : ಹೊಡೆತದಿಂದ ಪಾಠ ಕಲಿತು, ಪಂಥಾಹ್ವಾನ ಸ್ವೀಕರಿಸಿ, ಕಲೆಯು ಶುದ್ದೀಕರಣ - ಉನ್ನತೀಕರಣ - ಆಧುನಿಕೀಕರಣದ ಕಾವ್ಯವನ್ನು ಹಟದಿಂದ ಕೈಗೊಂಡು, ಕಲೆಯ ಗಂಭೀರವಾದ ಸುಧಾರಣೆ ಮತ್ತು ಪುನಾರಚನೆ ಆಗಬಹುದು.
ಈಯೆರಡು ಸಾಧ್ಯತೆಗಳು ನಮ್ಮ ಕಲೆಗಳ ಒಳಗೆ, ಇರುವವರ, ಅವುಗಳನ್ನು ಆಡುವ ನೋಡುವ ಪ್ರೀತಿಸುವ ಜನರ ವಿವೇಕ, ಸಾಮರ್ಥ್ಯ, ಅಂತಸ್ಸತ್ವಗಳನ್ನು ಅವಲಂಬಿಸಿವೆ. ಮಂಥನ, ಅಲುಗಾಟ, ಸಂಘರ್ಷ, ರೂಪಭಂಗಗಳ ಕೋಲಾಹಲದ ಮಧ್ಯೆಯೂ, ಸ್ವ- ರೂಪಗಳನ್ನು ಹೇಗೋ ಉಳಿಸಿಕೊಳ್ಳುವ ಜಿಗುಟುತನ ನಮ್ಮ ಸಂಸ್ಕೃತಿಗೆ ಇದೆ ಎನ್ನುವರು. ಯಕ್ಷಗಾನದ ವಿಷಯದಲ್ಲೂ ಅದು ನಿಜವಾಗಿ, ಸಾರ್ಥಕವಾಗಲೆಂದು ಅಪೇಕ್ಷಿಸಬಹುದು.

0 ಡಾ. ಎಂ. ಪ್ರಭಾಕ್ಟರ ಜೋಶಿ