ವಿಷಯಕ್ಕೆ ಹೋಗು

ಪುಟ:ಮುಡಿ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

80

ಮುಡಿ

ಆ'ಮೂಲ'ದಲ್ಲಿಲ್ಲ. ಅಥವಾ ಮೂಲಕ್ಕೆ ಸೇರಿದ ತೊರೆಗಳು, ಅದಕ್ಕಿಂತ ದೊಡ್ಡದಾಗಿದ್ದರೆ, ಅದನ್ನೆ ಪ್ರಧಾನ ನದಿ ಎನ್ನಲೂ ಬಹುದು. ಇಲ್ಲಿ ಮೂಲನದಿ ಎಂಬುದು ಕೇವಲ, ಅನುಕೂಲಕ್ಕಾಗಿ ಹೇಳುವ ಒಂದು ಮಾತು ಅಷ್ಟೆ.
ಇನ್ನೊಂದು ಅಂಶವನ್ನು ಗಮನಿಸಬೇಕಾದುದಿದೆ. ಸಾಮಾನ್ಯ (Universal) ಸಾಮ್ಯಗಳು ಮತ್ತು ವಿಶಿಷ್ಟ ಸಾಮ್ಯಗಳ ವಿಚಾರ. ಉದಾ. ಕಿರೀಟವು ಉರುಟಾಗಿರುತ್ತದೆ. ಮತ್ತು ಅದನ್ನು ತಲೆಯ ಮೇಲೆ ಇಡುತ್ತಾರೆ ಎಂಬುದು ಸರ್ವತ್ರ ಇರುವ ವಿಷಯ. ಇದು ಒಂದು ಜನಾಂಗವು ಇನ್ನೊಂದರಿಂದ ಕಲಿತುದಲ್ಲ. ಅದು ಸಹಜ ಸಾಮ್ಯ. ಚಿತ್ರಕಲೆಯಲ್ಲಿ ಕಾಣುವ ಕೆಲವು ಆಕೃತಿಗಳೂ (ಉದಾ: ಗೋಪುರಾಕೃತಿ. Dome) ಹಾಗೆಯೇ, ವಿಶ್ವವ್ಯಾಪಿ. ಅವು ಸ್ವಂತ್ರವಾಗಿ ಹುಟ್ಟಿ ಬೆಳೆದಿರಬಹುದು. ಒಂದೆಡೆಯಿಂದ ಇನ್ನೊಂದೆಡೆ ಹೋದುದೆಂದು ಹೇಳಲಾಗುವುದಿಲ್ಲ. ಆದುದರಿಂದ, ತೀರ ಸಾಮಾನ್ಯ, ಜನರಲ್ ಆದ ಸಮಾನತೆಯನ್ನು ಹಿಡಿದುಕೊಂಡು ಅದರ ಮೂಲ ಇದು' ಎಂಬಂತೆ ಹೇಳಲು ಸಾಧ್ಯವಿಲ್ಲ. ಹೆಚ್ಚು ನಿಕಟವಾದ, ಖಚಿತವಾದ ಸಮಾನತೆ ಇರಬೇಕು. ಆಗ ಮಾತ್ರ 'ಕ' ಕಲೆಗೆ, 'ಖ' ಎಂಬುದು ಒಂದು ಮೂಲ ಎನ್ನಬಹುದಷ್ಟೆ.
ಮಿಶ್ರಣ ಪ್ರವಾಹ
ಅಲ್ಲದೆ ಕಲೆಯ ಬಗ್ಗೆ ಮಾತಾಡುವಾಗ 'ಅ' ಎಂಬವನು 'ಆ'ನ ತಂದೆ ಎಂಬಂತೆ, 1ರಿಂದ 2 ಎಂಬ ನೇರ ಸಂಬಂಧ, ಜನ್ಮ ಜನಕ ಭಾವ ಇರುವುದಿಲ್ಲ. ಎಷ್ಟೆಷ್ಟೋ ವಿಷಯಗಳು ಸೇರಿ ಒಂದು ಕಲಾಪ್ರಕಾರ ರೂಪುಗೊಳ್ಳುತ್ತದೆ. ಅದು ಒಂದು ಪ್ರವಾಹದಂತೆ. ಯಾವ್ಯಾವುದೋ ಅಂಶಗಳನ್ನು, ಕಾಲ, ದೇಶಗಳಲ್ಲಿ ಕೂಡಿಸಿಕೊಳ್ಳುತ್ತ ಸಾಗುತ್ತದೆ. ಅದರ ಗತಿ ಚಿತ್ರವಿಚಿತ್ರ, ಓರೆ ಕೋರೆ, ಹಿಮದ ಗಡ್ಡೆಯ ಹಾಗೆ ಉರುಳುತ್ತ ದೊಡ್ಡದಾಗುವಂತೆ ವಿಶಿಷ್ಟ, ಸರಳತರ್ಕಕ್ಕೆ ಅದು ಸಿಕ್ಕುವುದಿಲ್ಲ.
ಯಕ್ಷಗಾನದ ಕುರಿತ
ಮೇಲೆ ಹೇಳಿದ ತಾತ್ತ್ವಿಕ ಚಿಂತನೆ ನೆಲೆಯಿಂದ ನೋಡಿದಾಗ ಯಕ್ಷಗಾನವೆಂದು ನಾವಿಂದು ಕರೆಯುವ ಕಲೆ (ಹಿಂದೆ ಬಯಲಾಟ, ದಶಾವತಾರ ಆಟ)ಯ ಮೂಲ ವಿಕಾಸದ ಕುರಿತೂ, ಹಲವು ನಿಟ್ಟಿನಲ್ಲಿ ಯೋಚಿಸಬಹುದೆಂದು ಸ್ಪಷ್ಟ, ಮೊದಲಾಗಿ ಹೆಸರೇ ನಮ್ಮನ್ನು

ಗೊಂದಲಗೊಳಿಸುತ್ತದೆ. 'ಯಕ್ಷಗಾನ'ದ 'ಗಾನ'ವನ್ನು ಹಿಡಿದು ಇದು ಗಾನವಿಧಾನ, ಗಾನಶೈಲಿ

• ಡಾ. ಎಂ. ಪ್ರಭಾಕರ