ತಾವು ಬೆರಗಾಗಿಹೋದುದನ್ನು ದಾಖಲಿಸಿದರು! ಸಾಹಿತ್ಯ ವಿಮರ್ಶಕ
ರೊಬ್ಬರು ಮೌಖಿಕ ಪರಂಪರೆಯ ಕಲಾವಿದರೊಬ್ಬರ ಪ್ರತಿಭೆಯನ್ನು ಕೇಳಿ
ವಿಸ್ಮಯಗೊಂಡ ದಾಖಲೆ ಅದು. ಈಚೆಗೆ, ಶಂಕರಾಚಾರ್ಯರ ಕುರಿತು
ತಾವು ಬರೆದ ಪುಸ್ತಕದಲ್ಲಿ, ಬಲಿಯೊಡನೆ ವಾದಿಸುವ ಶುಕ್ರಾಚಾರ್ಯನ
ಪಾತ್ರದಲ್ಲಿ, ತಾಳಮದ್ದಲೆಯೊಂದಲ್ಲಿ, ಪ್ರಭಾಕರ ಜೋಶಿಯವರು ಆಡಿದ
ಮಾತುಗಳನ್ನು ತಾಳಮದ್ದಳೆಯ ಮಾತುಗಾರಿಕೆಯ ಚೌಕಟ್ಟನ್ನೇ
ವಿಸ್ತರಿಸಬಲ್ಲ ಮಾತುಗಳನ್ನು ದಾಖಲಿಸಿ- ಇದನ್ನು ಯಾವತ್ತೂ
ಮರೆಯಲಾರೆನೆಂದಿದ್ದಾರೆ!-ಶ್ರೀ. ಕೆ.ವಿ. ಅಕ್ಷರ ಅವರು.
ಗುರುವಿನ ಮಾತುಗಳಂತೇ ಶಿಷ್ಯನ ಮಾತುಗಳೂ ಸಾಹಿತ್ಯ
ವಿಮರ್ಶಕರಿಗೆ ನೆನಪಾಗತೊಡಗಿವೆ. ಇದು ತುಂಬ ಸಂತೋಷದ ಸಂಗತಿ.
ಶಂಕರ ವಿಜಯದ ಶಂಕರಾಚಾರ್ಯರ ಪಾತ್ರದಲ್ಲಿ ಪ್ರಸಿದ್ಧರಾದ
ಶೇಣಿಯವರು ಮಂಡನಮಿಶ್ರನ ಪಾತ್ರದಲ್ಲಿ ಜೋಶಿಯವರನ್ನೇ
ಬಯಸುತ್ತಿದ್ದರಂತೆ. ಇನ್ನೇನು ಬೇಕು? ಜೋಶಿಯೇ ಸೂಕ್ತ - ಅವನು
ದಾರ್ಶನಿಕ ಚರ್ಚೆಯ ವಿಷಯಗಳನ್ನು ಎತ್ತಿ ಹಾಕುತ್ತಾನೆ.(ಅವಂ
ವಿಷಯಗಳ ಚರ್ಚೆಗೆ ಇಡುತ್ತಂ...)
ಮಿತ್ರ ಜೋಶಿಯವರ ಈ ಮಿಶ್ರಮಂಡನೆಯ ವೈಖರಿಗಳನ್ನು ನೆನಪುಮಾಡಿಕೊಳ್ಳುವುದು ಸಂತಸದ ಸಂಗತಿ, ಅಭಿನಂದನೆಗಳು,