ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ರಂಗಣ್ಣನ ಕನಸಿನ ದಿನಗಳು

'ರಜಾ ಏತಕ್ಕೆ ಸಾರ್ ! ಎರಡೇ ಮೈಲಿ, ಸೈಕಲ್ ಇದೆ. ತಮ್ಮ ಊಟ ಆಗುವುದರೊಳಗಾಗಿ ಬಂದು ಹಾಜರಾಗುತ್ತೇನೆ.'

'ಭೇಷ್ ! ಬಹಳ ಸಂತೋಷ ಮೆಷ್ಟ್ರೇ! ಮನೆಯಿಂದ ಬರುವಾಗ ನನಗೂ ಒಂದು ಇಷ್ಟಲಿಂಗ, ಒಂದಿಷ್ಟು ಪ್ರಸಾದ ತನ್ನಿ, ನೀವು ಗುರುಗಳು, ನನಗೂ ಲಿಂಗ ಕಟ್ಟಿ ಬಿಡಿ !' ಎಂದು ನಗುತ್ತಾ ರಂಗಣ್ಣನು ಆ ಮೇಷ್ಟರನ್ನು ಬೀಳ್ಕೊಟ್ಟನು.

ಇಷ್ಟೆಲ್ಲ ಫಜೀತಿ ಗಂಡುಮೇಷ್ಟ್ರುಗಳಿಂದ ಆಯಿತಲ್ಲ. ಇನ್ನು ಆ ನಾಲ್ಕು ಹೆಣ್ಣು ಮೇಷ್ಟ್ರುಗಳ ವಿಚಾರ ಏನೋ ಎಂತೋ ? ಸ್ವಲ್ಪ ತಿಳಿದು ಕೊಳ್ಳೋಣ ಎಂದು ಸುತ್ತಲೂ ನೋಡಿದರೆ ಅವರು ಪತ್ತೆಯೇ ಇರಲಿಲ್ಲ. ಅವರು ಎಲ್ಲಿಗೆ ಹೋದರೋ ಎಂದುಕೊಂಡು ಅಡಿಗೆಯ ಮನೆಯ ಕಡೆಗೆ ಬಂದರೆ ಅವರು ಅಲ್ಲಿ ಹಾಜರಿದ್ದರು. ಅವರೆಲ್ಲ ಬಾಹ್ಮಣರೇ ಆಗಿದ್ದರು; ಸಾಲದುದಕ್ಕೆ ತಮ್ಮ ಸೇವೆ ಸ್ವಲ್ಪ ನಡೆಯಲೆಂದು ತಟ್ಟೆಗಳಲ್ಲಿ ಅನ್ನ, ಪಾತ್ರೆಗಳಲ್ಲಿ ಹುಳಿ ತುಂಬಿಕೊಂಡು ಬಡಿಸುವುದಕ್ಕೆ ಸಿದ್ಧವಾಗಿ ನಿಂತಿದ್ದರು! ಅವರು ಹಾಗೆ ಸಿದ್ಧವಾಗಿದ್ದುದನ್ನು ನೋಡಿ ರಂಗಣ್ಣನಿಗೆ ಪರಮಾನಂದವಾಯಿತು. ಆದರೆ ಅವರನ್ನು ಊಟಕ್ಕೆ ಕುಳ್ಳಿರಿಸಿ ಬಡಿಸುವ ಕೆಲಸವನ್ನು ಗಂಡಸರು ಮೇಷ್ಟರ ಕೈಯಿಂದ ಮಾಡಿಸುವುದು ಒಳ್ಳೆಯದೆಂದು ಅವನಿಗೆ ತೋರಿತು. ಆ ಮಾತನ್ನೇ ಅವರಿಗೆ ಹೇಳಿದನು : " ನೀವುಗಳೆಲ್ಲ ಅಬಲೆಯರು, ಆಗಲೇ ಆಯಾಸಪಟ್ಟಿದ್ದೀರಿ. ಈ ಮೇಷ್ಟರುಗಳು ಬಡಿಸುತ್ತಾರೆ. ನೀವುಗಳೆಲ್ಲ ಪಾತ್ರೆ ಮತ್ತು ಸೌಟುಗಳನ್ನು ಕೆಳಗಿಟ್ಟು ಊಟಕ್ಕೆ ಕುಳಿತುಕೂಳ್ಳಿ.' ಅವರು ಒಪ್ಪಲಿಲ್ಲ. ಬೇಡ ಸಾರ್ ! ಸಂಸಾರದಲ್ಲಿ ಅಬಲೆಯರದೇ ಆಡಳಿತ, ಇದೂ ಒಂದು ಮೇಷ್ಟರ ಸಂಸಾರ. ಈ ಸಂತೋಷ ನಮಗೆಲ್ಲಿ ಲಭ್ಯವಾಗುತ್ತದೆ. ತಾವು ಊಟಕ್ಕೆ ಕುಳಿತು ಕೊಂಡರೆ ನಾವು ಇದನ್ನೆಲ್ಲ ನಿರ್ವಾಹ ಮಾಡುತ್ತೇವೆ' ಎಂದರು.

'ನಾನು ಮೇಲ್ವಿಚಾರಣೆ ನೋಡಿಕೊಳ್ಳಬೇಕು. ನಾನು ಈಗಲೇ ಊಟಕ್ಕೆ ಕುಳಿತು ಕೊಳ್ಳುವುದಿಲ್ಲ. ಇದರ ಮೇಲೆ ಸ್ವಲ್ಪ ಚರ್ಚೆಗೆ ಪ್ರಾರಂಭವಾಯಿತು. ಇನ್ ಸ್ಪೆಕ್ಟರ್ ಸಾಹೇಬರು ಮೊದಲನೆಯ ಪಂಕ್ತಿಯಲ್ಲೇ ಕುಳಿತು ಊಟ ಮಾಡಬೇಕೆಂದು ಹಲವರು ಉಪಾಧ್ಯಾಯರು