ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ರಂಗಣ್ಣನ ಕನಸಿನ ದಿನಗಳು

ನನ್ನ ಮೇಲೆ ಬೀಳೋದಕ್ಕೆ ಬಂದರು. ನಮಗೋ ಮೇಲಿಂದ ತಗಾದೆ ಆ ಮನುಷ್ಯ ಮಾಡಿಕೊಡೋದಿಲ್ಲ. ಏನು ಮಾಡಬೇಕು ? ಹೇಳು, ಆ ಕಟ್ಟಡವನ್ನು ಬಿಟ್ಟು ಬಿಟ್ಟು ಬೇರೊಂದನ್ನು ಬಾಡಿಗೆಗೆ ಗೊತ್ತುಮಾಡ ಬೇಕೆಂದಿದ್ದೇನೆ.'

'ಸರಿ, ಆ ಮಾರಾಯ ನಿನಗೆ ಎದುರು ಬಿದ್ದಿದ್ದಾನೋ ! ಅವನ ತಂಟೆಗೆ ಹೋಗಬೇಡ ರಂಗಣ್ಣ, ಇಷ್ಟು ವರ್ಷವೂ ನಡೆದುಕೊಂಡು ಹೋದಂತೆ ಮುಂದಕ್ಕೂ ಹೋಗಲಿ.'

'ಈಗೆಲ್ಲ ಸಾಹೇಬರುಗಳು ಹೊಸಬರು ಬಂದಿದ್ದಾರೆ ತಿಮ್ಮರಾಯಪ್ಪ, ನಾನು ಮುಟ್ಟಾಳ ಪಟ್ಟ ಕಟ್ಟಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ದೊಡ್ಡ ರಸ್ತೆಯಲ್ಲಿರುವ ಕಟ್ಟಡ, ದಿನ ಬೆಳಗಾದರೆ ಯಾರಾದರೂ ದೊಡ್ಡ ಅಧಿಕಾರಿಗಳು ಭೇಟಿ ಕೊಡುತ್ತಾರೆ.'

'ನಿನಗೆ ಆ ಊರಲ್ಲಿ ಬೇರೆ ಕಟ್ಟಡ ಯಾರೂ ಕೊಡುವುದಿಲ್ಲ. ಕಲ್ಲೇಗೌಡನಿಗೆ ವಿರುದ್ಧವಾಗಿ ನಿಲ್ಲೋ ಗಂಡಸು ಆ ಊರಲ್ಲಿಲ್ಲ. ನೀನು ಲೌಕಿಕ ತಿಳಿಯದ ಸಾಚಾ ಮನುಷ್ಯ ; ಬೆಂಗಳೂರು ಮೈಸೂರುಗಳಲ್ಲೇ ಬೆಳೆದ ಪ್ರಾಣಿ. ಹಳ್ಳಿಯ ಹುಲಿಗಳ ಪ್ರಭಾವ ನಿನಗೆ ತಿಳಿಯದು.'

'ಹಾಗಾದರೆ ಅಪಮಾನ ಪಟ್ಟು ಕೊಂಡು, ಆತ ಹಂಗಿಸಿದರೆ ಸೈರಿಸಿಕೊಂಡು ನಾನು ಅಲ್ಲಿರಲೋ ?”

'ಹಾಗಾದರೆ ಒಂದು ಕೆಲಸ ಮಾಡು, ಕಲ್ಲೇಗೌಡನಿಗೆ ಮರ್ಯಾದೆಯಾಗಿ ಒಂದು ಕಾಗದ ಬರೆ. ಅವನನ್ನು ಚೆನ್ನಾಗಿ ಹೊಗಳು. ಕಡೆಯಲ್ಲಿ ಕಟ್ಟಡದ ರಿಪೇರಿ ಮಾಡಿಸಿಕೊಟ್ಟು ಉಪಕಾರ ಮಾಡಿದರೆ ಬಹಳ ಕೃತಜ್ಞನಾಗಿರುತ್ತೇನೆ" ಎಂದು ವಿನಯದಿಂದ ತಿಳಿಸು,”

'ಒಳ್ಳೆಯದಪ್ಪ ! ಆವನ ಕಾಲಿಗೆ ಹೋಗಿ ಬೀಳು, ದಮ್ಮಯ್ಯ ಗುಡ್ಡೆ ಹಾಕು ಎಂದು ಹೇಳುತ್ತೀಯೋ ನನಗೆ ?

'ಅಯ್ಯೋ ಶಿವನೆ! ಅದೇಕೆ ಹಾಗೆ ರೇಗಾಡ್ತೀ? ಕೆಲಸ ಆಗಬೇಕಾದರೆ ಕತ್ತೆಯ ಕಾಲಾದರೂ ಕಟ್ಟಬೇಕು. ಸ್ವಲ್ಪ ನಿಧಾನವಾಡಿ ಕೇಳು ರಂಗಣ್ಣ : ಹಾರಾಡಬೇಡ. ಹಾಗೆ ಮೊದಲು ಒಂದು ಕಾಗದ ಬರೆದು ಹಾಕು, ಅವನು ಮಹಾ ಜಂಬದ ಮನುಷ್ಯ. ಅವನಿಗೆ ಈ ಭೂಲೋಕದಲ್ಲಿ