ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ರಂಗಣ್ಣನ ಕನಸಿನ ದಿನಗಳು

“ನೀನು ಅವರ ವಿರೋಧಗಳನ್ನೆಲ್ಲ ಕಟ್ಟಿಕೊಳ್ಳಬಾರದು ರಂಗಣ್ಣ! ಅವರು ಯಾವುದಕ್ಕೂ ಹೇಸುವವರಲ್ಲ. ನಿನಗೆ ಪ್ರಪಂಚ ಇನ್ನೂ ತಿಳಿಯದು.

ನಾನು ವಿರೋಧ ಕಟ್ಟಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದೇನೆಯೇ? ಇದೇನು ನಿನಗೆ ಹುಚ್ಚು ತಿಮ್ಮರಾಯಪ್ಪ ? ಕೇಳು. ಮಿಡಲ್ ಸ್ಕೂಲಿನಲ್ಲಿ ಸ್ಕಾಲರ್ ಷಿಪ್ಪುಳ ಹಂಚಿಕೆ ಹಿಂದುಳಿದ ಪಂಗಡಗಳಿಗೆ ಇವೆಯಲ್ಲ. ಹಿಂದಿನ ಇನ್ ಸ್ಪೆಕ್ಟರ ಕಾಲದಲ್ಲಿ ಅವುಗಳ ಹಂಚಿಕೆ ಆಯಿತು. ಕಮಿಟಿಯಲ್ಲಿ ಕರಿಯಪ್ಪನೂ ಒಬ್ಬ ಸದಸ್ಯ. ಸ್ಕಾಲರ್ ಷಿಪ್ಪು ಕೊಟ್ಟಿರುವ ವಿಚಾರದಲ್ಲಿ ತಕರಾರು ಅರ್ಜಿಗಳು ಬಂದಿವೆ. ನನಗೆ ಬಂದಿವೆ ಎಂದು ತಿಳಿಯಬೇಡ, ಡೈರಕ್ಟರಿಗೆ, ದಿವಾನರಿಗೆ ಎಲ್ಲರಿಗೂ ಅರ್ಜಿಗಳು ಹೋಗಿ ತನಿಖೆ ಬಗ್ಗೆ ನನ್ನ ಹತ್ತಿರ ಬಂದಿವೆ. ಒಬ್ಬ ಹುಡುಗ ಬಡವ ; ಅವನು ಎರಡನೆಯ ತರಗತಿಯಿಂದ ಮೂರನೆಯ ತರಗತಿಗೆ ತೇರ್ಗಡೆ ಪಡೆದಿದ್ದಾನೆ. ನಂಬರುಗಳು ಚೆನ್ನಾಗಿ ಬಂದಿವೆ. ಹಿಂದೆ ಅವನಿಗೆ ಸ್ಕಾಲರ್ ಷಿ ಷ್ಟು ಬರುತ್ತಿತ್ತು, ಮೂರನೆಯ ತರಗತಿಯಲ್ಲಿ ಅವನಿಗೆ ಸ್ಕಾಲರ್ ಷಿಪ್ಪು ಕೊಟ್ಟಿಲ್ಲ. ಅದಕ್ಕೆ ಬದಲು ಫೈಲಾಗಿ ಅದೇ ಮೂರನೆಯ ತರಗತಿಯಲ್ಲಿರುವ ಹುಡುಗನೊಬ್ಬನಿಗೆ ಸ್ಕಾಲರ್ ಷಿಪ್ಪು ಕೊಟ್ಟಿದ್ದಾರೆ- ಹೀಗೆ ಅನ್ಯಾಯ ನಡೆದಿದೆ ಸ್ವಾಮಿ ! ಆ ಫೈಲಾದ ಹುಡುಗ ನೆಮ್ಮದಿ ಕುಳ ; ಅವನ ತಂದೆ ಮುನ್ನೂರು ರೂಪಾಯಿ ಕಂದಾಯ ಕಟ್ಟುತ್ತಾನೆ ; ಮತ್ತು ಕರಿಯಪ್ಪನವರ ಖಾಸಾ ಅಣ್ಣನ ಮಗ ಆ ಹುಡುಗ ! ನಮ್ಮ ಹುಡುಗನಿಗೆ ಸ್ಕಾಲರ್ ಷಿಪ್ ತಪ್ಪಿಸಿ ಬಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಬೊಬ್ಬೆ ಹಾಕಿದ್ದಾನೆ ಆ ತಂದೆ !

ಶಿವನೇ ! ಎಂಥಾ ಜನ ನಮ್ಮವರು ! ?

ಸುಮ್ಮನೆ ನಮ್ಮವರು ಎಂದು ಎಲ್ಲರನ್ನೂ ಏತಕ್ಕೆ ದೂರುತ್ತೀಯ ? ಮುಖಂಡರು ಎಂದು ಹೇಳಿಕೊಳ್ಳುತ್ತ ಸಭೆಗಳಲ್ಲಿ ಬಂದು ಮಾತನಾಡುತ್ತಾರಲ್ಲ, ದಿವಾನರಿಗೆ ಔತಣಗಳನ್ನು ಕೊಡುತ್ತಾರಲ್ಲ-ಅವರನ್ನು ದೂರು. ಹಳ್ಳಿಗಳ ಕಡೆ ನಾನೇ ನೋಡಿದ್ದೇನಲ್ಲ. ಚಿನ್ನದಂಥ ಜನ ! ಏನೊಂದೂ