ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಬುದ್ಧಿವಾದ

೧೦೯

ಕೋಮುವಾರು ಭಾವನೆ ಇಲ್ಲ. ಎಂತಹ ಸರಳ ಪ್ರಕೃತಿ, ಎಂತಹ ಪ್ರೀತಿ ಅವರದು

ಸರಿ ರಂಗಣ್ಣ! ಕರಿಯಪ್ಪನ ವಿಚಾರ ತಿಳಿಸು ನೋಡೋಣ.”

` ಹೇಳುವುದನ್ನು ಕೇಳು. ಆ ಅರ್ಜಿಗಳ ಮೇಲೆ ತನಿಖೆ ನಡೆಸಬೇಕಾಗಿ ಬಂತು. ಮಿಡಲ್ ಸ್ಕೂಲ್ ಹೆಡ್ ಮಾಸ್ಟರಿಗೆ ಕಾಗದ ಬರೆದು ದಾಖಲೆ ಪತ್ರಗಳನ್ನೆಲ್ಲ ತರಿಸಿದೆ. ಆ ಕರಿಯಪ್ಪ - ತನ್ನ ಅಣ್ಣನ ಮಗ ಬಹಳ ಬಡವನೆಂದು ತಾನೇ ಸರ್ಟಿಫಿಕೇಟ್ ಬರೆದು ರುಜುಮಾಡಿದ್ದಾನೆ. ಮತ್ತು ಆ ಹುಡುಗನ ತಂದೆ ರೈಲ್ವೆಯ ಗ್ಯಾಂಗ್ ಕೂಲಿ, ತಿಂಗಳಿಗೆ ಆರು ರೂಪಾಯಿ ಸಂಬಳ- ಎಂದು ಅರ್ಜಿಯಲ್ಲಿ ನಮೂದಿಸಿದೆ. ಈಗ ನಾನೇನು ಮಾಡಬೇಕು ? ಹೇಳು.

ಇನ್ನೊಂದು ಲೋಟ ಹಾಲು ಕುಡಿ ರಂಗಣ್ಣ ! ತಂದು ಕೊಡುತೇನೆ. ಉದ್ವೇಗ ಬೇಡ, ಸಮಾಧಾನ ಮಾಡಿಕೊ' ಎಂದು ತಿಮ್ಮ ರಾಯಪ್ಪ ಎದ್ದು ಹೋಗಿ ಮತ್ತಷ್ಟು ಬಾಳೆಯ ಹಣ್ಣು, ಬಿಸ್ಕತ್ತುಗಳು ಮತ್ತು ಹಾಲನ್ನು ತಂದು ಮುಂದಿಟ್ಟನು.

ಒಳ್ಳೆಯ ಘಾಟಿ ಇಸಂ ಕರಿಯಪ್ಪ !?

" ನೋಡಪ್ಪ ! ಇವರೇ ನಮ್ಮ ದೇಶವನ್ನು ಉದ್ಧಾರ ಮಾಡುವ ಮುಖಂಡರು ! ಸತ್ಯ ಹರಿಶ್ಚಂದ್ರರು !?

ರಂಗಣ್ಣ ! ನಮ್ಮವರ ಕೈಯಾಟಗಳನ್ನೆಲ್ಲ ನಾನು ನೋಡಿದ್ದೇನೆ. ಇದೇನೂ ಹೊಸದಲ್ಲ.'

ಈಗ ನಾನು ಮುಂದೆ ಏನನ್ನು ಮಾಡಬೇಕು ? ತಿಳಿಸು.'

ನೀನಾಗಿ ಏನನ್ನೂ ಮಾಡ ಬೇಡ, ಆ ಕಾಗದಪತ್ರಗಳನ್ನೆಲ್ಲ ಸಾಹೇಬರಿಗೆ ಹೊತ್ತು ಹಾಕು. ಅಪ್ಪಣೆ ಆದಂತೆ ನಡೆದುಕೊಳ್ಳುತ್ತೇನೆ -ಎಂದು ಸಲಹೆ ಕೇಳು, ತೆಪ್ಪಗೆ ಕುಳಿತುಕೋ. ಮೇಲಿಂದ ಏನು ಹುಕುಂ ಬರುತ್ತದೆಯೋ ನೋಡೋಣ. ಆಮೇಲೆ ಆಲೋಚನೆ ಮಾಡೋಣ.

ಸರಿ, ನೋಡಿದೆಯಾ ನನ್ನ ಇನ್ಸ್ಪೆಕ್ಟರ್ ಗಿರಿ.ನೀನು ಆ ದಿನ ಹೇಳಿದ ಉಪ್ಪಿಟ್ಟು ಮತ್ತು ದೋಸೆಗಳ ವರ್ಣನೆಗಳನ್ನು ಕೇಳಿ ಬಾಯಲ್ಲಿ