ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦

ರಂಗಣ್ಣನ ಕನಸಿನ ದಿನಗಳು

ನೀರೂರಿತು. ಈಗ ನಾಲ್ಕು ಕಡೆಯಿಂದಲೂ ಗೂಟಗಳು, ಮಾತೆತ್ತಿದರೆ ಮೇಲಿನವರು, 'ಟ್ಯಾಕ್ಟ್' ಉಪಯೋಗಿಸಬೇಕು ಎಂದು ಬುದ್ಧಿವಾದ ಹೇಳುತ್ತಾರೆ.'

ಹೀಗೆ ಮಾತುಕತೆಗಳು ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ಆಗಿ ಹೋಯಿತು. 'ರಂಗಣ್ಣ! ಇಲ್ಲೇ ಬಿದ್ದುಕೋ, ಹಾಸಿಗೆ ಕೊಡುತ್ತೇನೆ. ಎಂದು ತಿಮ್ಮರಾಯಪ್ಪ ಹೇಳಿ ಹಾಸಿಗೆಯನ್ನು ಹವಣಿಸಿಕೊಟ್ಟನು. ತಾನೂ ತನ್ನ ಹಾಸಿಗೆಯನ್ನು ಪಕ್ಕದಲೇ ತಂದು ಹಾಕಿಕೊಂಡನು. ನಿದ್ರೆ ಹತ್ತು ವವರೆಗೂ ಇಬ್ಬರೂ ಹರಟೆ ಹೊಡೆಯುತ್ತಿದ್ದರು.