ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೧೩

ಹುಡುಗರು ಆರ್ಧಜನ ಬಂದಿದ್ದರು, ಇತರರು ಬರುತ್ತಲಿದ್ದರು. ಒಳಗೆ ಇಬ್ಬರು ಉಪಾಧ್ಯಾಯರಿದ್ದರು. ಆ ಹೊತ್ತಿಗೆ ಗ೦ಟಿಯನ್ನು ಬಾರಿಸಿದರು. ಪಕ್ಕದಿಂದ ಹೆಡ್ ಮಾಸ್ಟರ್ ಬಂದು ಕೈ ಮುಗಿದನು. ಆತನ ಹೆಸರು ವೆಂಕಟಸುಬ್ಬಯ್ಯ ; ಮುಳ್ಳು ಮುಖ, ಮೆಳ್ಳೆಗಣ್ಣು, ಸ್ವಲ್ಪ ಕಪ್ಪು ಮೈ ಬಣ್ಣ.. ಸುಮಾರಾಗಿ ಒಳ್ಳೆಯ ಬಟ್ಟೆಗಳನ್ನೆ ಹಾಕಿಕೊಂಡಿದ್ದ ನು. ಹಣೆಗೆ ದಟ್ಟವಾಗಿ ವಿಭೂತಿ ಪಟ್ಟಿಗಳಿದ್ದು ವು. ಸ್ವಲ್ಪ ನಿಷ್ಠಾವಂತನೆಂದು ಕಂಡಿತು. ಪಾಠಶಾಲೆಯ ಒಳಗಡೆ ದೇವರ ಪ್ರಾರ್ಥನೆಯ ಮೇಲೆ ಪುನಃ ಗಂಟೆಯನ್ನು ಬಾರಿಸಿದರು.

ಹೆಡ್ ಮಾಸ್ಟರೊಡನೆ ರಂಗಣ್ಣ ಒಳಕ್ಕೆ ಪ್ರವೇಶಿಸಿದನು. ಒಳಗೆ ಅಚ್ಚುಕಟ್ಟಾಗಿದ್ದಿತು ; ಕಶ್ಮಲಗಳೇನೂ ಇರಲಿಲ್ಲ. ವೇಳಾ ಪತ್ರಿಕೆ, ಪಾಠಗಳ ಹಂಚಿಕೆ ಪಟ್ಟಿ, ವಿದ್ಯಾಭಿವೃದ್ಧಿಯ ತಃಖ್ತೆ, ಮೊದಲಾದುವನ್ನೆಲ್ಲ ಆಯಾ ಸ್ಥಳಗಳಲ್ಲಿ ಗೋಡೆಗೆ ತಗಲು ಹಾಕಿದ್ದರು. ರಂಗಣ್ಣ ಹೆಡ್ ಮಾಸ್ಟರವರ ಕೊಟಡಿಯಲ್ಲಿ ಕುಳಿತುಕೊಂಡು, 'ಏನು ಹೆಡ್ ಮಾಸ್ಟ್ರರೇ ! ನಿಮ್ಮ ಪಾಠ ಶಾಲೆಯ ತನಿಖೆ ಮಾಡೋಣವೊ? ನಿಮಗೆ ಮುಂದಾಗಿ ವರ್ತಮಾನ ಕೊಡದೆ ಬಂದಿದ್ದೇನೆ. ಸಿದ್ಧ ಪಡಿಸಿಕೊಳ್ಳುವುದಕ್ಕೆ ನಿಮಗೆ ವಿರಾಮ ದೊರೆತಿಲ್ಲ' ಎಂದು ಮುಗಳುನಗೆಯಿಂದ ಹೇಳಿದನು.

'ಇನ್ ಸ್ಪೆಕ್ಷನ್ ಮಾಡಿ ಸ್ವಾಮಿ ! ನಾನೇನೂ ಹೆದರೋದಿಲ್ಲ ! ನಿಮಗ್ಯಾಕೆ ಸ್ವಾಮಿ ನಾವು ಹೆದರಬೇಕು ?'

'ನಾನೇನು ಹುಲಿಯೆ ? ಕರಡಿಯೆ ? ನೀವೇತಕ್ಕೆ ಹೆದರ ಬೇಕು ??'

'ನಾನು ಸ್ವಲ್ಪ ಒರಟು ಮನುಷ್ಯ, ಖಂಡಿತವಾದ ಸ್ವಾಮಿ ! ತಾವೇನೂ ತಿಳಿದುಕೊಳ್ಳಬೇಡಿ. ಮುಚ್ಚು ಮರೆ ನನಗೆ ಸರಿಬೀಳೋದಿಲ್ಲ, ನನಗೆ ಹೆದರಿಕೆ ಏಕೆ ಸ್ವಾಮಿ ? ತಾವು ಬರುವಾಗ ನಾನು ಗದ್ದೆ ಹತ್ತಿರ ಇದ್ದೆ, ತಮ್ಮ ಆಗಮನ ದೂರದಿಂದಲೇ ನನ್ನ ಕಣ್ಣುಗಳಿಗೆ ಬಿತ್ತು. ನನ್ನ ಗಡಿಯಾರ ನೋಡಿದೆ. ಏಳೂ ಕಾಲು ಗಂಟೆ ಆಗಿತ್ತು, ಸ್ಕೂಲ್ ಹತ್ತಿರ ಬರೋ ಹೊತ್ತಿಗೆ ನಾನೂ ಬಂದು ಸೇರಬಹುದು; ಕರಾರು ವಾಕ್ ಏಳು ಗಂಟೆ ಇಪ್ಪತ್ತು ನಿಮಿಷಕ್ಕೆ ನಾನು ಸ್ಕೂಲ್ ಹತ್ತಿರ ಇದ್ದರೆ ಆಯಿತಲ್ಲ ' - ಎಂದು ಕೊಂಡು ಹೊರಟು ಬಂದೆ. ಇದರಲ್ಲಿ ತಪ್ಪೇನು