ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ರಂಗಣ್ಣನ ಕನಸಿನ ದಿನಗಳು

ಸ್ವಾಮಿ? ನಿಮಗೆ ಏತಕ್ಕೆ ಹೆದರಬೇಕು ? ನಾನು ದಿನಾಗಲೂ ಹೊಲಗದ್ದೆಗಳ ಕಡೆ ಹೋಗೋದುಂಟು ಸ್ವಾಮಿ ! ಆದರೆ ಸ್ಕೂಲ್ ಹೊತ್ತಿಗೆ ಈ ಹೊಸ್ತಿಲೊಳಗಿರುತ್ತೇನೆ, ಅದನ್ನು ಮಾತ್ರ ತಪ್ಪೋದಿಲ್ಲ. ಇದನ್ನು ಈ ದಿನ ತಮ್ಮೆದುರಿಗೆ ಮಾತ್ರ ಕಲ್ಪಿಸಿ ಕೊಂಡು ನಾನು ಹೇಳುತ್ತಿಲ್ಲ. ಬೇಕಾದನರನ್ನು ತಾವು ಕೇಳಬಹುದು. ನಿಮಗೇಕೆ ಸ್ವಾಮಿ ಹೆದರಿ ಕೊಂಡು ಸುಳ್ಳು ಹೇಳ ಬೇಕು ??

ಆ ಮೇಷ್ಟು ಒಂದು ವಿಚಿತ್ರ ಪ್ರಾಣಿ ಎಂದು ರಂಗಣ್ಣನಿಗೆ ತೋರಿತು. ಕೆಳ ನೌಕರ ಖ೦ಡಿತವಾದಿಯಾಗಿ ಒರಟು ಮಾತಡಿದರ ಮೇಲಿನವರು ಸೈರಿಸುವುದು ಅಪರೂಪ. ಮೇಲಿನವರಿಗೆಲ್ಲ ಬೇಕಾಗಿರುವುದು : “ಅಪ್ಪಣೆ ಮಹಾಸ್ವಾಮಿ ತನದ ಗುಲಾಮಗಿರಿ. ಎರಡನೆಯದಾಗಿ, ತಾನು ಕೆಲಸದಲ್ಲಿ ಕಟ್ಟು ನಿಟ್ಟಾಗಿ ಪ್ರಾಮಾಣಿಕನಾಗಿದ್ದ ಮಾತ್ರಕ್ಕೇನೆ ತನ್ನ ಒರಟು ಮಾತಿನಿಂದ ಮೇಲಿನವರನ್ನು ಕೆರಳಿಸುವುದು ವಿವೇಕವೇನೂ ಅಲ್ಲ. ಆದರೆ ರಂಗಣ್ಣನಿಗೆ ಕೋಪವಾಗಲಿ ಅಸಮಾಧಾನವಾಗಲಿ ಉಂಟಾಗಲಿಲ್ಲ. ಮೇಷ್ಟಗಳಲ್ಲಿ ಎಷ್ಟೋ ಬಗೆ; ಈ ಮೇಷ್ಟ್ರರನ್ನು ಮನಶ್ಶಾಸ್ತ್ರದ ಚಿಕಿತ್ಸಕ ದೃಷ್ಟಿಯಿಂದ ನೋಡೋಣ ಎಂದು ನಿರ್ಧರಿಸಿಕೊಂಡು ಸ್ವಲ್ಪ ಮುಗುಳು ನಗೆಯನ್ನು ಮಾತ್ರ ಸೂಸಿದನು.

ಕ್ರಮವಾಗಿ ಮೊದಲನೆಯ ತರಗತಿಯಿಂದ ತನಿಖೆ ಪ್ರಾರಂಭವಾಯಿತು. ಆ ಪಾಠಶಾಲೆಯಲ್ಲಿ ಮೊದಲನೆಯ ತರಗತಿಯಲ್ಲಿ ಎರಡೇ ತಂಡಗಳಿದ್ದುವು. ನಲವತ್ತು ಹುಡುಗರಲ್ಲಿ ಮುವ್ವತ್ತು ಹುಡುಗರು ಒತ್ತಕ್ಷರದ ಪಾಠಗಳನ್ನೆಲ್ಲ ಮುಗಿಸಿದ್ದರು ; ಉಳಿದ ಹತ್ತು ಮಂದಿ ಒತ್ತಕ್ಷರದ ಪಾಠಗಳನ್ನು ಪ್ರಾರಂಭಿಸಿದ್ದರು, ಇತರ ಪಾಠ ಶಾಲೆಗಳಲ್ಲಿ ಸಾಮಾನ್ಯವಾಗಿ ಮೊದಲನೆಯ ದರ್ಜೆಯಲ್ಲಿ ಆರು - ಏಳು ತಂಡಗಳಿರುವುದು ರಂಗಣ್ಣನ ಅನುಭವಕ್ಕೆ ಬಂದಿದ್ದಿತು. ಈ ತರಗತಿಯ ತನಿಖೆ ಮುಗಿದಮೇಲೆ ಎರಡನೆಯ ತರಗತಿಯದು ಪ್ರಾರಂಭವಾಯಿತು. ಆದರಲ್ಲಿ ಇಪ್ಪತ್ತೈದು ಹುಡುಗರಿದ್ದರು. ಗದ್ಯ ಪಾಠವನ್ನು ಮಾಡಬೇಕೆಂದು ರಂಗಣ್ಣ ಆ ತರಗತಿಯ ಉಪಾಧ್ಯಾಯರಿಗೆ ಹೇಳಿದನು. ಆತನು, 'ದೊರೆ ಮತ್ತು ಬಂದಿವಾನರು ' ಎಂಬ ಪಾಠವನ್ನು ತೆಗೆದು