ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೧೫

ಕೊಂಡು ಅದಕ್ಕೆ ಪೀಠಿಕೆ ಹಾಕಿದಮೆಲೆ ಹುಡುಗರನ್ನು ಓದುವಂತೆ ಹೇಳಿದನು. ಆ ಹುಡುಗರು ಒಬ್ಬೊಬ್ಬರು ಒಂದೊಂದು ವಾಕ್ಯವನ್ನು ಮಾತ್ರ ಓದುತ್ತ ಪಾಠವನ್ನು ಮುಂದುವರಿಸಿದರು. ಹುಡುಗರು ಓದಿ ಮುಗಿಸಿದರೋ ಇಲ್ಲವೋ ಹೆಡ್ ಮಾಸ್ಟರು ಕೆರಳಿ, ನನ್ನ ಮಾನವನ್ನು ಇನ್‌ಸ್ಪೆಕ್ಟರ ಮುಂದೆ ತೆಗೆದೆಯಲ್ಲಾ ನೀನು ! ಶುದ್ಧ ಮುಟ್ಟಾಳ ಕೆಲಸ ಮಾಡಿದೆ ! ಒಂದು ವಾಕ್ಯ ಬೃಂದವನ್ನು ಒಬ್ಬ ಹುಡುಗ ಓದಬೇಕು ; ಒಂದೊಂದೇ ವಾಕ್ಯ ಓದಕೂಡದು- ಎಂದು ತಿಳಿಸಿರಲಿಲ್ಲವೇ ? ನಾನು ಮೆಮೊ ಪುಸ್ತಕದಲ್ಲಿ ಬರೆದಿಲ್ಲವೇ ? ಕ್ರಮ ಹಿಡಿದು ಪಾಠಮಾಡು'- ಎಂದು ಝಂಕಿಸಿದನು ಇನ್ ಸ್ಪೆಕ್ಟರ್ ಸಾಹೇಬರು ಏನು ಮಾಡಬೇಕು ? 'ಹೆಡ್ ಮಾಸ್ಟರೇ ಕೋಪ ಮಾಡಬೇಡಿ. ಕ್ರಮತಪ್ಪಿದ್ದರೆ ನಾನು ತಿಳಿಸುತ್ತೇನೆ. ಪಾಠದ ಮಧ್ಯದಲ್ಲಿ ಉಪಾಧ್ಯಾಯರನ್ನು ಗದರಿಸಬಾರದು' ಎಂದು ರಂಗಣ್ಣ ಹೇಳಿದನು.

'ನನಗೆ ಮುಟ್ಟಾ ಳ ಪಟ್ಟ ಬ೦ತಲ್ಲ ಸ್ವಾಮಿ ! ನಾನೇ ಕ್ರಮ ಹೇಳಿಕೊಟ್ಟಿದ್ದೇನೆ ; ಪಾಠಮಾಡಿ ತೋರಿಸಿದ್ದೇನೆ. ನನ್ನ ಕೈ ಕಳಗಿನ ಮೇಷ್ಟರನ್ನು ತಾವು ತಿದ್ದುವುದಾದರೆ ನಾನೇತಕ್ಕೆ ಹೆಡ್ ಮಾಸ್ಟರ್ ಕೆಲಸ ಮಾಡಬೇಕು ಸ್ವಾಮಿ ?'

'ಇರಲಿ, ನಡೆಯುವವರು ಎಡವುತ್ತಾರಲ್ಲದೆ, ಕುಳಿತವರು ಎಡಹುತ್ತಾರೆಯೆ? ನೀವೂ ಮೇಷ್ಟರನ್ನು ತಿದ್ದಬೇಕು. ನಾನೂ ಸಹ ತಿದ್ದಬೇಕು' ಎಂದು ರಂಗಣ್ಣನು ಸಮಾಧಾನ ಹೇಳಿ ತರಗತಿಯ ಉಪಾಧ್ಯಾಯರಿಗೆ 'ಪ್ರಶ್ನೆಗಳನ್ನು ಕೇಳಿ ಮೇಷ್ಟೆ' ಎಂದು ಸೂಚನೆ ಕೊಟ್ಟನು. ಪ್ರಶ್ನೆಗಳೂ, ಅವುಗಳನ್ನು ಹಾಕಿದ ಕ್ರಮವೂ, ಉತ್ತರ ಹೇಳದೆ ತಪ್ಪಿದಾಗ ಮಕ್ಕಳಿಂದಲೇ ಸರಿಯಾದ ಉತ್ತರಗಳನ್ನು ಹೇಳಿಸಿದ್ದೂ, ಕಡೆಗೆ ಕಪ್ಪು ಹಲಗೆಯ ಸಾರಾಂಶ- ಇವುಗಳೆಲ್ಲ ಚೆನ್ನಾಗಿದ್ದುವು. ಹೆಡ್ ಮಾಸ್ಟರು, ಭೇಷ್! ಹಾಗೆ ಮಾಡಬೇಕು ಲಿಂಗಪ್ಪ ! ನನ್ನ ಶಿಷ್ಯ ಆದ್ದಕ್ಕೆ ಈಗ ಸಾರ್ಥಕವಾಯಿತು. ಈಗ ನನ್ನ ಮಾನ ಉಳಿಯಿತು' ಎಂದು ಹೇಳುತ್ತಾ ಇನ್ ಸ್ಪೆಕ್ಟರವರ ಕಡೆಗೆ ತಿರುಗಿ, 'ಪರಾಂಬರಿಸಬೇಕು ಸ್ವಾಮಿ! ಆತನಿಗೆ ಪ್ರೈವೇಟಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಆಗಿದೆ. ನಾನೇ ಪಾಠ ಹೇಳಿ