ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೧೭

ಮುವ್ವತ್ತು ಹುಡುಗರನ್ನು ಐದು ಐದರಂತೆ ಆರು ತಂಡಗಳಾಗಿ ಮಾಡಿ ಒಂದೊಂದು ತಂಡದವರು ಒಂದೊಂದು ವಾರ ಪಾಠಶಾಲೆಯನ್ನು ಚೊಕ್ಕಟವಾಗಿಡಬೇಕೆಂದೂ, ಇಬ್ಬರು ಸಹಯೋಪಾಧ್ಯಾಯರಲ್ಲಿ ಒಬ್ಬೊಬ್ಬರು ಒಂದೊಂದು ಬದಲಾಯಿಸಿಕೊಂಡು ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದೂ ಆ ಪಟ್ಟಿಯಲ್ಲಿ ಬರೆದಿತ್ತು; ಮತ್ತು ಒಂದೊಂದು ತಂಡದವರ ಕೆಲಸವನ್ನು ನೋಡಿ ಆಯಾ ತಂಡಕ್ಕೆ ನಂಬರುಗಳನ್ನು ದಾಖಲ್ಮಾಡಿತ್ತು. ಆ ಪಟ್ಟಿಯನ್ನು ನೋಡುತ್ತಲೂ ರಂಗಣ್ಣನಿಗೆ ಬಹಳ ಸಂತೋ ಷವಾಯಿತು, ಏರ್ಪಾಡು ಚೆನ್ನಾಗಿದೆ ; ರೇ೦ಜಿನ ಎಲ್ಲಾ ಪಾಠಶಾಲೆಗಳಲ್ಲೂ ಅದನ್ನು ಆಚರಣೆಗೆ ತರಬೇಕು ಎನ್ನಿಸಿತು, ಹೆಡ್ ಮಾಸ್ಟರು, ' ಸ್ವಾಮೀ ! ಈ ಸ್ಕೂಲಿನಲ್ಲಿ ನೂರಕ್ಕೆ ಮೇಲ್ಪಟ್ಟು, ಹುಡುಗರಿದ್ದಾರೆ. ಒಬ್ಬ ಜವಾನನ್ನು ಕೊಡಬೇಕೆಂದು ಈಗ ಎರಡು ವರ್ಷಗಳಿಂದ ಕೇಳುತ್ತಿದ್ದೇನೆ. ತಾವು ಕೊಟ್ಟಿಲ್ಲ' ಎಂದು ಹೇಳಿದನು.

'ಜವಾನನನ್ನು ಕೊಟ್ಟರೆ ಇಷ್ಟು ಚೆನ್ನಾಗಿ ವಾಠಶಾಲೆಯ ಕಟ್ಟಡವನ್ನು ಚೊಕ್ಕಟವಾಗಿಟ್ಟು ಕೊಳ್ಳುತ್ತಾನೆಯೆ ! ಕೊಡಬೇಕಾದು ನ್ಯಾಯ. ಆಲೋಚನೆ ಮಾಡುತ್ತೇನೆ. ಆದರೆ ನಿಮ್ಮ ಏರ್ಪಾಟು ಬಹಳ ಚೆನ್ನಾಗಿದೆ. ವೆಂಕಟಸುಬ್ಬಯ್ಯ ! '

'ನಾನು ಬಹಳ ಕಟ್ಟು ನಿಟ್ಟಿನ ಮನುಷ್ಯ ಸ್ವಾಮಿ ! ಜವಾನ ಇರಲಿ ಇಲ್ಲದೇ ಇರಲಿ, ಸ್ಕೂಲನ್ನು ಚೊಕ್ಕಟವಾಗಿಟ್ಟಿರುತ್ತೇನೆ. ಇನ್ ಸ್ಪೆಕ್ಟರವರು ತನಿಖೆಗೆ ಬರಲಿ ಬರದೇ ಇರಲಿ, ಕೆಲಸದಲ್ಲಿ ಪಾಲುಮಾರುವುದಿಲ್ಲ, ಸರಿಯಾಗಿ ಕೆಲಸ ಮಾಡಿ ಕೊಂಡು ಹೋಗುತ್ತೇನೆ.'

'ಹಾಗೆಯೇ ಇರಬೇಕು ವೆಂಕಟಸುಬ್ಬಯ್ಯ ! ಮನೆಗಳಲ್ಲಿ ನಮ್ಮ ನಮ್ಮ ಗೃಹಿಣಿಯ ಮೇಲೆ ಯಾವಾಗಲೂ ಕಾವಲಿರುವುದಕ್ಕಾಗುಇದೆಯೇ ? ಅವರು ಪತಿವ್ರತೆಯರು. ಹಾಗೆಯೇ ಮೇಷ್ಟರುಗಳೂ ಇರಬೇಕು.'

'ಒಳ್ಳೆಯ ಮಾತು ಹೇಳಿದಿರಿ ಸ್ವಾಮಿ !

ಇದಾದಮೇಲೆ ಪಾಠಶಾಲೆಯ ರಿಜಿಸ್ಟರುಗಳನ್ನೂ ಇತರ ದಾಖಲೆ