ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ರಂಗಣ್ಣನ ಕನಸಿನ ದಿನಗಳು

ಗಳನ್ನೂ ನೋಡಿದ್ದಾಯಿತು. ದೊಡ್ಡ ತಪ್ಪುಗಳೇನೂ ಇರಲಿಲ್ಲ. ತರುವಾಯ ರಂಗಣ್ಣ ಹೊರಡುವುದಕ್ಕಾಗಿ ಎದ್ದು ನಿಂತು,

'ಹೆಡ್ ಮಾಸ್ಟರೇ, ವಿಸಿಟರ್ ಬುಕ್ ಕೊಡಿ. ಅದರಲ್ಲಿ ತನಿಖೆಯ ರಿಪೋರ್ಟನ್ನು ಬರೆದು ಕೊಟ್ಟು ಕಳುಹಿಸುತ್ತೇನೆ' ಎಂದು ಹೇಳಿದನು.

'ಹಾಗೆ ಆಗೋದಿಲ್ಲ ಸ್ವಾಮಿ ! ಬಿಸಿ ಬಿಸಿಯಲ್ಲೇ ಕೆಲಸ ಆಗಿಹೋಗಬೇಕು ! ತಾವು ಇಲ್ಲೇ ರಿಪೋರ್ಟನ್ನು ಬರೆದು ಮುಗಿಸಿಬಿಡಬೇಕು ! !

ಇನ್ಸ್ಪೆಕ್ಟರ್ ಸಾಹೇಬರಿಗೆ- ಇದೇನು ? ಈ ಹೆಡ್ ಮಾಸ್ಟರು ತನಗೇನೇ ಆಜ್ಞೆ ಮಾಡುತ್ತಾನಲ್ಲ ಕೇಳಿದಂತೆ ಪುಸ್ತಕ ಕೊಡದೆ ತನಗೆ ಬುದ್ಧಿ ಹೇಳುವುದಕ್ಕೆ ಹೊರಟನಲ್ಲ ಎಂದು ಸ್ವಲ್ಪ ಕೆರಳಿತು. ಆದರೆ ಹುಡುಗರೆದುರಿಗೆ ಹೆಡ್ ಮಾಸ್ಟರನ್ನು ಏನೂ ಅನ್ನಬಾರದು ಎಂದು ಸೈರಿಸಿಕೊಂಡು , ' ಹೆಡ್‌ಮೇಷ್ಟರೇ ! ಈಗ ಹತ್ತೂವರೆ ಗಂಟೆ ಆಯಿತು ; ಹುಡುಗರನ್ನೆಲ್ಲ ಬಿಟ್ಟು ಬಿಡಿ. ಬೆಲ್ ಹೊಡಿಸಿ' ಎಂದು ಹೇಳಿದನು, ಅದರಂತೆಯೇ ಹುಡುಗರನ್ನು ಬಿಟ್ಟಿದ್ದಾಯಿತು.

'ಕುಳಿತು ಕೊಳ್ಳಿ ಸ್ವಾಮಿ ! ಎಷ್ಟು ಹೊತ್ತಿನ ಕೆಲಸ ! ಕಾಲುಗಂಟೆಯಲ್ಲಿ ತಾವು ಬರೆದ. ಬಿಡಬಹುದು. ಕೋಪ ಮಾಡಿಕೊಳ್ಳಬೇಡಿ! ? ಎಂದು ಹೆಡ್ ಮಾಸ್ಟರು ಹೇಳಿದನು.

ರಂಗಣ್ಣನಿಗೆ ತನ್ನ ಅಧಿಕಾರದ ದರ್ಪ ತೋರಿಸೋಣವೇ ? ಆಥವಾ ಆ ಮನುಷ್ಯ ಹೇಳಿದ ಹಾಗೆ ವರದಿಯನ್ನು ಬರೆದು ಕೈತೊಳೆದುಕೊಂಡು ಹೊರಟುಹೋಗೋಣವೇ ? ಎಂದು ಮನಸ್ಸು ಇಬ್ಬಗೆಯಾಯಿತು. ಒಂದು ನಿಮಿಷ ಹಾಗೆಯೆ : ಆಲೋಚಿಸಿ, ಒಳ್ಳೆಯದು ; ಬರೆದು ಬಿಟ್ಟೆ ಹೊರಡೋಣ.--- ಎಂದು ಕುಳಿತುಕೊಂಡು ತನಿಖೆಯ ವಿಚಾರವನ್ನೆಲ್ಲ ಬರೆದು ರೇ೦ಜಿನಲ್ಲೆಲ್ಲ ಈ ಪಾಠ ಶಾಲೆ ಎಲ್ಲಾ ವಿಚಾರಗಳಲ್ಲಿ ಮೊದಲನೆಯದಾಗಿ ನನಗೆ ತೋರುತ್ತದೆ; ಹೆಡ್‌ಮಾಸ್ಟರು ಬಹಳ ಶಿಸ್ತಿನ ಮನುಷ್ಯರು, ಕರ್ತವ್ಯಪರಾಯಣರು, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ-ಎಂದು ಪ್ರಶಂಸೆಮಾಡಿ ಬರೆದನು. ವರದಿಯನ್ನು ಬರೆಯುತಿದ್ದಾಗ ಆ ಕೊಟಡಿಯಲ್ಲಿ ಹೆಡ್ ಮಾಸ್ಟರಾಗಲಿ, ಇತರಲಾಗಲಿ ಇರಲಿಲ್ಲ.