ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೧೯

ವರದಿ ಮುಗಿದಮೇಲೆ, 'ಹೆಡ್ ಮಾಸ್ಟರೆ ! ಬನ್ನಿ, ನಿಮ್ಮ ವಿಸಿಟರ್ಸ್ ಪುಸ್ತಕ ತೆಗೆದುಕೊಳ್ಳಿ' ಎಂದು ರಂಗಣ್ಣ ಕರೆದನು, ಹೆಡ್ಮಾಸ್ಟರು ಪುಸ್ತಕವನ್ನು ತೆರೆದು ನೋಡಲೇ ಇಲ್ಲ! ನೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಬಿಟ್ಟನು !

'ಸ್ವಾಮಿ ! ನಾನು ಅದನ್ನು ಇನ್ನೊಂದು ವಾರ ನೋಡುವುದಿಲ್ಲ. ತಮ್ಮ ಇನ್ ಸ್ಪೆಕ್ಟರ್ ಕೆಲಸ ತಾವು ಮಾಡಿ ಮುಗಿಸಿಬಿಟ್ಟಿರಿ. ನನಗೂ ತಮಗೂ ನಿಶ್ಚಿಂತೆಯಾಯಿತು. ಎರಡು ನಿಮಿಷ ಕುಳಿತುಕೊಳ್ಳಿ' ಎಂದು ಹೇಳಿದನು. ಆ ಹೊತ್ತಿಗೆ ಹೆಡ್ ಮಾಸ್ಟರ ಹುಡುಗ ಬೆಳ್ಳಿಯ ತಟ್ಟೆಯಲ್ಲಿ ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು ಮತ್ತು ದೊಡ್ಡ ಬೆಳ್ಳಿಯ ಲೋಟದಲ್ಲಿ ಕಾಫಿ-- ಇಷ್ಟನ್ನು ತಂದು ಒಳಗಿಟ್ಟನು.'

'ತೆಗೆದು ಕೊಳ್ಳಬೇಕು ಸ್ವಾಮಿ ! ತಾವು ವರದಿಯನ್ನು ಬರೆದು ಆಗಿ ಹೋಗಿದೆ, ಏನಾದರೂ ಬರೆದಿರಿ, ನನಗೆ ಅದರ ಆಲೋಚನೆಯೇನೂ ಇಲ್ಲ. ಒಳ್ಳೆಯ ವರದಿ ಬರೆಯಬೇಕೆಂದು ನಾನೇನೂ ತಮಗೆ ಈ ಲಂಚವನ್ನು ಕೊಡುವುದಿಲ್ಲ.'

'ಈ ಸಣ್ಣ ಪುಟ್ಟ ಲಂಚಕ್ಕೆಲ್ಲ ಒಳ್ಳೆಯ ವರದಿ ಬರೆಯುತ್ತಾರೆಯೇ? ಪ್ರಮೋಷನ್ ಕೊಡಿಸುತ್ತಾರೆಯೇ ? ಅವಕ್ಕೆಲ್ಲ ಬೇರೆ ವಿಧವಾದ ಲಂಚ ಕೊಡಬೇಕು ಹೆಡ್ಮೇಷ್ಟೆ !” ನಗುನಗುತ್ತ ಉಪಾಹಾರ ಸ್ವೀಕಾರಕ್ಕೆ ಇನ್ ಸ್ಪೆಕ್ಟ ರು ಕುಳಿತರು.'

'ಆ ಲಂಚಗಿ೦ಚಗಳ ಮಾತು ಸ್ವಾಮಿಯವರ ಹತ್ತಿರ ಸಾಗೋದಿಲ್ಲ ! ಆ ಜನ ಬೇರೆ ಸ್ವಾಮಿ ! ನಾನೂ ಹಿಂದೆ ನೋಡಿದ್ದೇನೆ. ನನಗೂ ಇಪ್ಪತ್ತು ವರ್ಷ ಸರ್ವಿಸ್ ಆಯಿತು. ಹತ್ತಾರು ಹಳ್ಳಿಗಳ ನೀರು ಕುಡಿದದ್ದಾಯಿತು.'

'ನನಗೊಬ್ಬನಿಗೇನೆ ಈ ವಿನಿಯೋಗ ಆಗುತ್ತಿದೆಯಲ್ಲ ! ನೀವೂ ತೆಗೆದುಕೊಳ್ಳಿ.?'

'ನಾನು ದೇವರ ಪೂಜೆ ಮಾಡಬೇಕು ಸ್ವಾಮಿ ! ಆದ್ದರಿಂದ ತೆಗೆದುಕೊಳ್ಳುವುದಿಲ್ಲ. ನಮ್ಮ ಹುಡುಗ ತೆಗೆದು ಕೊಳ್ಳುತ್ತಾನೆ. ಅವನಿಗೆ ಅಲ್ಲಿ ಬೇರೆ ಇಟ್ಟಿದೆ ?