ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೨೦

'ನೀವು ಹೇಳುವುದೆಲ್ಲ ಸರಿ ಮೇಷ್ಟೇ. ಆದರೂ ಬಡ ಉಪಾಧ್ಯಾಯರ ಅನ್ನ, ಅವರ ಮಕ್ಕಳ ಅನ್ನ ನಾನು ಕಿತ್ತು ಕೊಂಡು ತಿನ್ನಲೇ ? ಬೇಡ. ನನಗೆ ದೇವರು ಏನೂ ಕಡಮೆ ಮಾಡಿಲ್ಲ.'

'ಸ್ವಾಮಿ ! ನಾನು ಉಪಾಧ್ಯಾಯ ನಿಜ. ಬಡವರಾದರೂ ಸಹ ಒಪ್ರೊತ್ತು ತಮಗೆ ಅನ್ನ ಹಾಕುವುದರಿಂದ ಅವರು ಪಾಪರ್‌ ಎದ್ದು ಹೋಗುವುದಿಲ್ಲ. ತಾವು ಒಪ್ಪೊತ್ತು ಉಣ್ಣಲಿಲ್ಲ ಅನ್ನಿ, ಅವರೇನೂ ಅಷ್ಟರಿ೦ದಲೇ ಕುಬೇರರಾಗುವುದಿಲ್ಲ. ಬಡತನವಿದ್ದರೂ ಜೊತೆಗೆ ಪ್ರೀತಿ ವಿಶ್ವಾಸಗಳಿರುತ್ತವೆ ಸ್ವಾಮಿ ! ನನ್ನ ಮಟ್ಟಿಗೆ ನಾನು ಹೇಳುತ್ತೇನೆ. ಆತ್ಮಸ್ತುತಿ ಎಂದು ತಿಳಿಯಬೇಡಿ, ನಾನು ಮೂನ್ನೂರು ರೂಪಾಯಿ ಕಂದಾಯ ಕಟ್ಟುತ್ತೇನೆ ! ಹೊಲ, ಗದ್ದೆ, ತೆಂಗಿನ ತೋಪು, ಬಾಳೆಯ ತೋಟ ಮೊದಲಾದುವೆಲ್ಲ ನನಗಿದೆ. ಮನೆಯಲ್ಲಿ ಎರಡು ಹಸು, ಎರಡೆಮ್ಮೆ ಕರೆಯುತ್ತವೆ. ನಾಲ್ಕು ಏರು ನನ್ನ ಜಮೀನಿನಲ್ಲಿ ಸಾಗುವಳಿ ಮಾಡುತ್ತದೆ. ನನಗೆ ತಾವೇನೂ ಪ್ರಮೋಷನ್ ಕೊಡಬೇಡಿ, ನಾನು ತಮ್ಮಲ್ಲಿ ನೌಕರಿ ಸಂಬಂಧವಾಗಿ ಏನನ್ನೂ ಬೇಡುವುದಿಲ್ಲ. ಈ ಹಳ್ಳಿ ನನ್ನದು. ಚಿಕ್ಕಂದಿನಿಂದ ಬೆಳೆದ ಸ್ಥಳ; ಹಲವು ಕಡೆ ಸರ್ವಿಸ್ ಮಾಡಿ ಇಲ್ಲಿಗೆ ಬಂದಿದ್ದೇನೆ. ನಾನು ಬಂದಾಗ ಪಾಠಶಾಲೆಯಲ್ಲಿ ಮುವ್ವತ್ತು ಹುಡುಗರು ಮಾತ್ರ ಇದ್ದರು; ನಾನೊಬ್ಬನೇ ಉಪಾಧ್ಯಾಯ ಈಗ ನೋಡಿ ! ನೂರಕ್ಕೆ ಮೇಲ್ಪಟ್ಟು ಮಕ್ಕಳಿದ್ದಾರೆ. ನನ್ನ ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ನನ್ನನ್ನು ಬೇರೆ ಕಡೆಗೆ ವರ್ಗಮಾಡಿದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಜಮೀನನ್ನು ನೋಡಿಕೊಳ್ಳುತ್ತೇನೆ. ಬೇಕಾದರೆ ಸ್ವಂತವಾಗಿ ಒಂದು ಪಾಠ ಶಾಲೆ ಇಟ್ಟು ಕೊಳ್ಳುತ್ತೇನೆ. ಆದ್ದರಿಂದ ತಾವೇನೂ ಆಲೋಚನೆ ಮಾಡಬೇಕಾಗಿಲ್ಲ. ಮನೆ ಯಲ್ಲಿ ಅಡಿಗೆ ಆಗಿದೆ. ಅಲ್ಲಿಗೆ ದಯಮಾಡಿಸಿ, ಸ್ನಾನಮಾಡಿ. ಮಡಿ ಕೊಡುತ್ತೇನೆ. ಅರ್ಧಗಂಟೆಯಲ್ಲಿ ದೇವರ ಪೂಜೆಯನ್ನು ಮುಗಿಸುತ್ತೇನೆ, ಊಟಮಾಡಿಕೊಂಡು, ವಿಶ್ರಾಂತಿ ತೆಗೆದು ಕೊಂಡು, ಸಾಯಂಕಾಲ ಐದು ಗಂಟೆಗೆ ಹೊರಟರೆ ದೊಡ್ಡ ರಸ್ತೆಯಲ್ಲಿ ಬಸ್ಸು ಬರುತ್ತದೆ. ಅದರಲ್ಲಿ ಕುಳಿತುಕೊಂಡು ಜನಾರ್ದನಪುರವನ್ನು ಸೇರಬಹುದು. ಆದ್ದರಿಂದ ಬೈಸ್ಕಲ್