ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ರಂಗಣ್ಣನ ಕನಸಿನ ದಿನಗಳು

ಇಲ್ಲಿರಲಿ. ತಾವು ನನ್ನ ಮನೆಗೆ ದಯಮಾಡಿಸಿ '-ಎಂದು ದೊಡ್ಡ ಭಾಷಣವನ್ನೇ ಹೆಡ್ಮಾಸ್ಟರು ಮಾಡಿದನು.

'ಇನ್ನು ಹಟ ಮಾಡಬಾರದು' ಎಂದು ವಿವೇಕವನ್ನು ತಂದುಕೊಂಡು ರಂಗಣ್ಣ ವೆಂಕಟಸುಬ್ಬಯ್ಯನ ಮನೆಗೆ ಹೊರಟನು.

ಬಡತನ ಇತ್ಯಾದಿ ಕಷ್ಟಗಳಿಲ್ಲದೆ ಸುಖವಾಗಿಯೂ ಸಂತೋಷವಾಗಿಯೂ ಇರುವ ಉವಾಧ್ಯಾಯರು ಒಬ್ಬರಾದರೂ ಇದ್ದಾರಲ್ಲ ಎಂದು ಮೆಚ್ಚಿಕೊಳ್ಳುತ್ತ, ಗ್ರಾಮದ ಮುಖಂಡರು ಮೊದಲಾದವರ ವಿಷಯಗಳನ್ನೆಲ್ಲ ಪ್ರಸ್ತಾಪಿಸುತ್ತ, ವೆಂಕಟಸುಬ್ಬಯ್ಯನ ಮನೆಗೆ ಬಂಗಣ್ಣ ಬಂದನು. ಮುಂದಿನ ಬಾಗಿಲನ್ನು ದಾಟುತ್ತಲೂ ವಿಶಾಲವಾದ ಅಂಗಳ ; ಅದರ ಎಡಗಡೆಯಲ್ಲಿ ದನಗಳ ಕೊಟ್ಟಿಗೆ ; ಬಲಗಡೆ ನೀರಮನೆ ಮತ್ತು ಚಿಲ್ಲರೆ ಸಾಮಾನುಗಳನ್ನು ಅಡಕಿದ್ದ ಒಪ್ಪಾರ, ನಡುವೆಯನ್ನು ದಾಟಿದಮೇಲೆ ಹಜಾರ. ಅದರ ಎದುರುಬದುರು ಪಕ್ಕಗಳಲ್ಲಿ ಎರಡೆರಡು ಕೊಟಡಿಗಳು ; ಅಲ್ಲಿಂದ ಮುಂದೆ ಊಟದ ಮನೆ ; ಅದರ ಬಲಗಡೆ ಅಡಿಗೆಯ ಮತ್ತು ದೇವರ ಪೂಜೆಯ ಕೋಣೆಗಳು. ಅಡಿಗೆಯ ಮನೆಯಿ೦ದಲೂ ಇತ್ತ ನೀರ ಮನೆಯಿಂದಲೂ ಹಿಂಬದಿಗೆ ಹೋಗಲು ಬಾಗಿಲುಗಳಿದ್ದವು. ಹಿಂಭಾಗದಲ್ಲಿ ಗೊಬ್ಬರದ ಗುಂಡಿಯೂ ಇತ್ತು, ಒಟ್ಟಿನಲ್ಲಿ ವೆಂಕಟಸುಬ್ಬಯ್ಯ ಸ್ಥಿತಿವಂತನೆಂಬುದು ಆ ಮನೆಯ ಅಚ್ಚುಕಟ್ಟಿನಿಂದ ತಿಳಿಯಬಹುದಾಗಿತ್ತು. ಹಜಾರದ ಬಲಗಡೆಯ ಕೊಟಡಿಯೊಂದರಲ್ಲಿ ಕುರ್ಚಿಯೊಂದನ್ನು ಹಾಕಿತ್ತು ; ನೆಲಕ್ಕೆ ಚಾಪೆಯನ್ನು ಹಾಸಿತ್ತು. ರಂಗಣ್ಣ ತನ್ನ ಉಡುಪು ಗಳನ್ನು ತೆಗೆಯುತ್ತಿದ್ದಾಗ ಒಂದು ಸರಿಗೆಯ ಪಂಚೆಯನ್ನು ವೆಂಕಟಸುಬ್ಬಯ್ಯ ತಂದು ಕೊಟ್ಟನು. ಆ ಸಂದರ್ಭದಲ್ಲಿ ಎದುರುಗಡೆಯ ಕೊಟಡಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ರಂಗಣ್ಣನ ಕಣ್ಣಿಗೆ ಬಿತ್ತು. 'ಏನು ವೆಂಕಟಸುಬ್ಬಯ್ಯ ! ಕಬ್ಬಿಣದ ಪೆಟ್ಟಿಗೆ ಬೇರೆ ಇಟ್ಟಿದ್ದೀರಿ. ಲೇವಾದೇವಿ ಏನಾದರೂ ಮಾಡುತ್ತಿದ್ದೀರಾ? ಒಳಗೆ ಹಣ ಭರ್ತಿ ಇದೆಯೋ?' ಎಂದು ನಗುತ್ತಾ ಕೇಳಿದನು. ಒಡನೆಯೆ ವೆಂಕಟಸುಬ್ಬಯ್ಯನ ಮುಖ ಸಪ್ಪಗಾಯಿತು ; - ಕಣ್ಣಲ್ಲಿ ನೀರು ಉಕ್ಕಿ ತು; ಗಂಟಲು ಕಟ್ಟಿ ತು ; ಮಾತು ಹೊರಡಲಿಲ್ಲ. ಏನು ಸಂಕಟದ ವಿಚಾರವೊ ! ತಾನೇಕೆ ಕೇಳಿದೆನೋ