ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೫೫

ಎಲ್ಲವೂ ಆಗಿವೆ ಸ್ವಾಮಿ ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಅನುಕೂಲವಿಲ್ಲ. ಈ ಗುಡಿಗೆ ಬಾಗಿಲಿಲ್ಲ. ಗ್ರಾಮಸ್ಥರು ಬೇರೆ ಕಟ್ಟಡ ಕಟ್ಟಿಸಿ ಕೊಟ್ಟಿಲ್ಲ. ಸಾಮಾನುಗಳೆಲ್ಲ ಚೆರ್ಮನ್ನರ ಮನೆಯಲ್ಲಿ ದಾಸ್ತಾನಿದೆ.'

'ಪಾಠ ಮಾಡುವಾಗ ನೀನು ತಂದುಕೊಳ್ಳಬೇಕು !'

'ಅಪ್ಪಣೆ ಸ್ವಾಮಿ ! ಆದರೆ ಅವು ಬಹಳ ಭಾರ! ಬೋರ್ಡು ಬಹಳ ದೊಡ್ಡದು ; ಬೆಂಚು ಮೊದಲಾದುವನ್ನು ಮಕ್ಕಳು ಹೊರಲಾರರು. ಅವುಗಳನ್ನೆಲ್ಲ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡೆರಡು ಹೊತ್ತೂ ಸಾಗಿಸೋದು ಕಷ್ಟ ಸ್ವಾಮಿ !”

'ಹಾಗಾದರೆ ಬೋರ್ಡಿಲ್ಲದೆ ಪಾಠ ಹೇಗೆ ಮಾಡುತ್ತೀಯೆ ?? ಹಾಗೇನೇ ಕಷ್ಟ ಪಟ್ಟು ಕೊಂಡು ಪಾಠ ಮಾಡುತ್ತಾ ಇದ್ದೇನೆ ಸ್ವಾಮಿ !”

'ಕಟ್ಟಡ ಏಕಾಗಲಿಲ್ಲ ? ಮುಚ್ಚಳಿಕೆ ಬರೆದು ಕೊಟ್ಟಿದ್ದಾರೋ ಇಲ್ಲವೋ ? :

'ಬರೆದು ಕೊಟ್ಟಿದ್ದಾರೆ ಸ್ವಾಮಿ ! ಪಾಯ ಹಾಕಿದ್ದಾರೆ ; ನೆಲೆ ಕಟ್ಟಡ ಎದ್ದಿಲ್ಲ ಎರಡು ವರ್ಷ ಆಗೋಯ್ತು.'

'ಏಕೆ ಕಟ್ಟಡ ಆಗಲಿಲ್ಲ ? ಏಕೆ ನಿಂತು ಹೋಯಿತು ?'

'ಆದು ರೈತನೊಬ್ಬನ ಜಮೀನು ಸ್ವಾಮಿ ! ಅವನಿಗೆ ಕಾಂಪನ್ ಸೇಷನ್ ಕೊಡಿಸ್ತೇವೆ ಎಂದು ಗ್ರಾಮಸ್ಥರು ಹೇಳಿದ್ದರು. ಆ ಮೇಲೆ ಆ ರೈತನಿಗೆ ಏನೂ ಕೊಡಲಿಲ್ಲ. ಈಗ ಹಾಗೇನೇ ಕೊಟ್ಟು ಬಿಡು ಎಂದು ಒತ್ತಾಯ ಮಾಡುತ್ತಿದ್ದಾರೆ! ಆ ರೈತ ಈ ಗ ತಕರಾರು ಎಬ್ಬಿಸಿ ಕೆಲಸ ಮುಂದುವರಿಯದಂತೆ ತಡೆದುಬಿಟ್ಟಿದ್ದಾನೆ ಸ್ವಾಮಿ !'

ಸಾಹೇಬರು ರಂಗಣ್ಣನ ಕಡೆಗೆ ತಿರುಗಿ ಕೊಂಡು, “ಆ ಜಮೀನನ್ನು ಅಕ್ವೈರು ಮಾಡಿ ಕೊಳ್ಳೋಣ. ಕೂಡಲೇ ಶಿಫಾರಸು ಮಾಡಿ ಕಾಗದವನ್ನು ಕಳಿಸಿಕೊಡಿ' ಎಂದು ಹೇಳಿದರು.