ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ರಂಗಣ್ಣನ ಕನಸಿನ ದಿನಗಳು

ಸಾಹೇಬರು ಕೆಲವು ರಿಜಿಸ್ಟರುಗಳನ್ನು ನೋಡಿದ ಬಳಿಕ ಮೂರನೆಯ ತರಗತಿಯ ಹುಡುಗರಿಗೆ ಎರಡು ಬಾಯಿ ಲೆಕ್ಕಗಳನ್ನು ಕೇಳಿದರು. “ಹದಿನೈದನ್ನು ಏಳರಿಂದ ಗುಣಿಸಿ ನಲವತ್ತು ಕಳೆದು ಉಳಿದದ್ದಕ್ಕೆ ಹದಿನಾರು ಸೇರಿಸಿ ಒಂಬತ್ತು ಜನಕ್ಕೆ ಹಂಚಿದರೆ ಒಬ್ಬೊಬ್ಬನಿಗೆ ಎಷ್ಟೆಷ್ಟು ಬರುತ್ತದೆ ?'

ಹುಡುಗರು ಬೆಪ್ಪಾಗಿ ನಿಂತಿದ್ದರು. ಉತ್ತರವನ್ನು ಹೇಳಲಾಗಲಿಲ್ಲ.

'ಮುನ್ನೂರ ಎಪ್ಪತ್ತೈದರಲ್ಲಿ ನೂರೆಪ್ಪತ್ತೆಂಟು ಕಳೆದು ಬಂದದ್ದನ್ನು ಹನ್ನೆರಡರಿಂದ ಗುಣಿಸಿದರೆ ಏನು ಬರುತ್ತದೆ ??

ಈ ಪ್ರಶ್ನೆಗೂ ಉತ್ತರ ಬರಲಿಲ್ಲ. ಸಾಹೇಬರಿಗೆ ಕೋಪ ಬಂದು ಮೇಷ್ಟು ಶುದ್ಧ ನಾಲಾಯಖ್ ಎಂದು ತೀರ್ಮಾನಿಸಿ ಪರಂಗಿ ಟೋಪಿ ಹಿಡಿದುಕೊಂಡು ಮೆಟ್ಟಲಿಳಿದರು. ಮೋಟಾರನ್ನು ಹತ್ತಿ ಮುಂದಕ್ಕೆ ಹೊರಟದ್ದಾಯಿತು.

“ಏನು ಇನ್‌ಸ್ಪೆಕ್ಟರೆ ! ನಿಮ್ಮ ಮೇಷ್ಟುಗಳು ಸರಿಯಾಗಿ ಬಾಯಿ ಲೆಕ್ಕಗಳನ್ನು ಹೇಳಿ ಕೊಡುವುದೇ ಇಲ್ಲ.'

'ಸಾರ್ ! ತನುಗೆ ಕೋಪ ಬರಬಹುದು. ತಾವು ಕೇಳಿದ ಪ್ರಶ್ನೆಗಳೇ ಸರಿಯಲ್ಲ. ಅಷ್ಟು ಉದ್ದವಾದ ಮತ್ತು ಜಟಿಲವಾದ ಬಾಯಿ ಲೆಕ್ಕಗಳನ್ನು ಕೇಳಬಾರದು. ನಾವು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಹೇಳಿದ್ದರೆ ಬಹುಶಃ ಉತ್ತರ ಬರುತ್ತಿತ್ತೋ ಏನೋ ! ತಮ್ಮ ಪ್ರಶ್ನೆಗಳಿಗೆ ಆ ಹುಡುಗರು ಬೆಪ್ಪಾಗಿ ಹೋದದ್ದು ಏನಾಶ್ಚರ್ಯ! ನನಗೂ ಉತ್ತರ ಹೊಳೆಯದೆ ನಾನೂ ಸಹ ಬೆಪ್ಪಾಗಿ ಹೋದೆ !?

“ಏನು ? ನಿಮಗೂ ಉತ್ತರ ತಿಳಿಯಲಿಲ್ಲವೆ ! ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಹುಡುಗರು ಎಂಥೆಂಥ ದೊಡ್ಡ ಲೆಕ್ಕಗಳನ್ನು ಬಾಯಲ್ಲಿ ಮಾಡುತ್ತಾರೆ !?

ಇರಬಹುದು ಸಾರ್ ! ಆದರೆ ನನಗೆ ಆ ಅನುಭವಗಳಿಲ್ಲ. ಮೇಷ್ಟ್ರು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾನೆ.'