ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೫೭

'ನೀವು ಯಾವಾಗಲೂ ನಿಮ್ಮ ಮೇಷ್ಟ್ರುಗಳನ್ನು ವಹಿಸಿಕೊಂಡೇ ಮಾತನಾಡುತ್ತೀರಿ ! ಆ ಸುಂಡೇನಹಳ್ಳಿ ಮೇಷ್ಟರ ವಿಚಾರದಲ್ಲಿಯೂ ಹಾಗೆಯೇ ಮಾಡಿದಿರಿ!'

ರಂಗಣ್ಣ ಮಾತನಾಡಲಿಲ್ಲ, ಅಲ್ಲಿಂದ ಮುಂದೆ ಎರಡು ಮೈಲಿಗಳ ದೂರ ಹೋದ ಮೇಲೆ ಒಂದು ದೊಡ್ಡ ಹಳ್ಳಿ ಸಿಕ್ಕಿತು. ಅಲ್ಲಿ ಹುಡುಗರ ಸ್ಕೂಲೊಂದು, ಹುಡುಗಿಯರ ಸ್ಕೂಲೊಂದು ಇದ್ದು ವು. ಮೊದಲು ಹುಡುಗರ ಸ್ಕೂಲಿಗೆ ಇಬ್ಬರೂ ಹೋದರು. ಪಕ್ಕಾ ಸರಕಾರಿ ಕಟ್ಟಡ ಅದು, ವಿಶಾಲವಾಗಿಯೂ ಚೆನ್ನಾಗಿಯೇ ಇತ್ತು. ಆದರೆ ಚಾವಣೆಯಲ್ಲಿ ಹತ್ತು ಹನ್ನೆರಡು ಮಂಗಳೂರು ಹೆಂಚುಗಳು ಇರಲಿಲ್ಲ ಅವು ಇಲ್ಲದ್ದರಿಂದ ಹಿಂದೆ ಮಳೆ ಬಂದಾಗ ಆ ಭಾಗದಲ್ಲಿ ಗೋಡೆಯಮೇಲೆ ಕರೆಗಳೂ ಪಟ್ಟಿಗಳೂ ಬಿದ್ದಿದ್ದುವು. ಸಾಹೇಬರ ದೃಷ್ಟಿ ಆ ಚಾವಣಿಯ ಕಡೆಗೆ ಹೋಯಿತು.

“ಅಲ್ಲಿದ್ದ ಹೆಂಚುಗಳು ಏನಾದುವು ?' ಎಂದು ಹೆಡ್‌ಮೇಷ್ಟರನ್ನು ಕೇಳಿದರು.

ಎರಡು ವರ್ಷಗಳ ಹಿಂದೆ ಬಿರುಗಾಳಿ ಎದ್ದಾಗ ಕೆಲವು ಹೆಂಚುಗಳು ಹಾರಿ ಕೆಳಕ್ಕೆ ಬಿದ್ದು ಹೋದುವು ಸ್ವಾಮಿ | ಆ ಬಗ್ಗೆ ರಿಪೋರ್ಟ್ ಮಾಡಿದ್ದೇನೆ.'

“ ಅವುಗಳನ್ನು ಏಕೆ ಇದುವರೆಗೂ ಹಾಕಿಸಲಿಲ್ಲ ?

ಅದಕ್ಕೆ ರಂಗಣ್ಣನು, ಹಿಂದೆಯೇ ಆ ಬಗ್ಗೆ ರಿಪೋರ್ಟನ್ನು ಕಳಿಸಿದೆ. ಅದು ತಮ್ಮ ಕಚೇರಿಯಲ್ಲಿದೆಯೋ ಅಥವಾ ಡಿಸ್ಟಿಕ್ಟ್ ಬೋರ್ಡ್ ಕಚೇರಿಯಲ್ಲಿದೆಯೋ ತಿಳಿಯದು. ಸ್ಯಾನಿಟರಿ ಇನ್ ಸ್ಪೆಕ್ಟರೊ ಪಂಚಾಯತಿ ಇನ್ ಸ್ಪೆಕ್ಟರೋ ಬಂದು ಎಸ್ಟಿಮೆಟ್ ಮಾಡಿಕೊಂಡು ಹೋಗಿರಬೇಕು ಎಂದು ತಿಳಿಸಿದನು.

ಹೆಡ್ ಮೇಷ್ಟು 'ಹೌದು ಸ್ವಾಮಿ ! ಹೋದ ವರ್ಷ ಸ್ಯಾನಿಟರಿ ಇನ್ ಸ್ಪೆಕ್ಟರು ಬಂದಿದ್ದರು. ಆಗ ಆರೇ ಹೆಂಚುಗಳು ಹಾರಿ ಹೋಗಿದ್ದುವು. ರಿಪೇರಿ ಬಗ್ಗೆ ಎಸ್ಟಿಮೇಟು ಮಾಡಿಕೊಂಡು ಹೋದರು. ಅವರು, ಹೋದ ತರುವಾಯ ಪುನಃ ಗಾಳಿಯೆದ್ದು ಮತ್ತೆ ಕೆಲವು ಹೆಂಚುಗಳು ಹಾರಿಬಿ ದ್ದು ವು. ಪುನಃ ಇನ್ಸ್ಪೆಕ್ಟರು ಬಂದುನೋಡಿ-ನನ್ನ ಮೊದಲನೆಯ