ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೬೧

ಕೊಂಡನು. ಮೋಟಾರು ಜನಾರ್ದನಪುರವನ್ನು ಸೇರುವುದಕ್ಕೆ ಅರ್ಧ ಗಂಟೆ ಹಿಡಿಯಿತು. ಆ ಅವಧಿಯಲ್ಲಿ ಹೆಚ್ಚು ಮಾತುಗಳೇನೂ ನಡೆಯಲಿಲ್ಲ. ಸಾಹೇಬರು ಕೇಳಿದ ಪ್ರಶ್ನೆಗಳಿಗೆ, “ ಹೌದು, ಅಲ್ಲ ; ಇದೆ, ಇಲ್ಲ. ಎಂದು ಎರಡಕ್ಷರದ ಉತ್ತರಗಳನ್ನೆ ರಂಗಣ್ಣ ಕೊಟ್ಟು ಕೊಂಡುಬಂದನು. ಬಂಗಲೆಯ ಹತ್ತಿರ ಮೋಟಾರು ನಿಂತಿತು. ಸಾಹೇಬರು, ಮಧ್ಯಾಹ್ನ ಮೂರು ಗಂಟೆಗೆ ಕಚೇರಿಗೆ ಬರುತ್ತೇನೆ. ತನಿಖೆ ಮುಗಿಸಿಕೊಂಡು ಸಾಯಂಕಾಲ ಐದು ಗಂಟೆಗೆ ನಾನು ಹಿಂದಿರುಗಬೇಕು' ಎಂದು ಹೇಳಿ ಇಳಿದರು. 'ಆಗಬಹುದು ಸಾರ್ !' ಎಂದು ಹೇಳಿ ರಂಗಣ್ಣನು ಹೊರಟುಬಂದನು.

ಆ ದಿನ ಬೆಳಗ್ಗೆ ತನಗಾದ ತೇಜೋಭಂಗವನ್ನು ಅವನು ಮನೆಯಲ್ಲಿ ಹೇಳಲಿಲ್ಲ. ತನ್ನ ಹೆಂಡತಿ ನೊಂದುಕೊಳ್ಳುತ್ತಾಳೆ ; ತಾನು ಅರೆ ಹೊಟ್ಟೆ ತಿನ್ನುವುದರ ಜೊತೆಗೆ ಆಕೆಯೂ ಅರೆಹೊಟ್ಟೆ ತಿನ್ನುವುದನ್ನು ನೋಡಬೇಕಾಗುತ್ತದೆ ; ಈ ಸಮಾಚಾರವನ್ನು ತಿಳಿಸುವುದು ಸರಿಯಲ್ಲ - ಎಂದು ತೀರ್ಮಾನಿಸಿ ಕೊಂಡು ಸುಮ್ಮನಾದನು. ಆದರೆ ಹೊಟ್ಟೆಯಲ್ಲಿ ತುಂಬಿದ್ದ ವ್ಯಥೆಯಿಂದ ಅವನು ಸರಿಯಾಗಿ ಊಟ ಮಾಡಲಾಗಲಿಲ್ಲ. ಆ ವ್ಯಧೆಯನ್ನು ಹೊರಕ್ಕೆ ಕಕ್ಕಿದ್ದರೆ ಅನ್ನ ಇಳಿಯುತ್ತಿತ್ತೋ ಏನೋ ! ಅವನ ಹೆಂಡತಿ, ಎಂದಿನಂತೆ ನೀವು ಊಟ ಮಾಡುತ್ತಿಲ್ಲ. ಏಕೆ ?” ಎಂದು ಕೇಳಿದಳು. " ಸಾಹೇಬರ ಜೊತೆಯಲ್ಲಿ ಸರ್ಕಿಟು ಹೋಗಿರಲಿಲ್ಲವೆ ? ನೀನೇಕೆ ಕೇಳುತ್ತೀಯೆ ? ' ಎಂದು ಅವನು ಉತ್ತರ ಕೊಟ್ಟನು, ಸರ್ಕಿಟಿನಲ್ಲಿ ಕಾಫಿ, ಉಪ್ಪಿಟ್ಟು ಬಾಳೆಯ ಹಣ್ಣುಗಳ ನೈವೇದ್ಯ ಆಗಿರಬಹುದೆಂದು ಆಕೆ ತಿಳಿದುಕೊಂಡು, ಸರಿ, ಗೊತ್ತಾಯಿತು. ಕೇಳಿದರೆ ಏನು ತಪ್ಪು? ಎಂದುಬಿಟ್ಟಳು.

ಮಧ್ಯಾಹ್ನ ಸಾಹೇಬರು ಮೂರು ಗಂಟೆಗೆ ಕಚೇರಿಗೆ ಬಂದು ಕುಳಿತರು. ಗುಮಾಸ್ತೆ ನಾರಾಯಣರಾವ್ ತಾನು ಸಿದ್ಧಪಡಿಸಿದ್ದ ಕರಡು ವರದಿಯನ್ನು ಮೇಜಿನಮೇಲೆ ತಂದಿಟ್ಟನು, 'ಸಾದಿಲ್ವಾರ್ ಮೊಬಲಿಗಿನಲ್ಲಿ ಒಂದು ಕಟ್ಟು ಕಾಗದ ಕೊಂಡುಕೊಂಡಿದ್ದಾರೆ. ಇದು ಅಕ್ರಮ. ಕಾಗದದ ಸಪ್ಪೈ ಇವರಿಗೆ ಸ್ಟೇಷನರಿ ಡಿಪೋದಿಂದ ಆಗುತ್ತೆ. ಹಾಗೆ