ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ರಂಗಣ್ಣನ ಕನಸಿನ ದಿನಗಳು

ಒಂದುವೇಳೆ ಕೊಂಡುಕೊಳ್ಳಬೇಕಾಗಿದ್ದಿದ್ದರೆ ನಮ್ಮ ಆಫೀಸಿನ ಅಪ್ಪಣೆ ಪಡೆಯಬೇಕಾಗಿತ್ತು ? – ಎಂದು ಒಂದು ದೊಡ್ಡ ಆಕ್ಷೇಪಣೆ ಇತ್ತು, ಸಾಹೇಬರು, " ಏಕೆ ಹಾಗೆ ಮಾಡಿದಿರಿ ? ನೀವು ರೂಲ್ಸು ತಿಳಿದು ಕೊಳ್ಳಬೇಕು ' ಎಂದು ರಂಗಣ್ಣನಿಗೆ ಹೇಳಿದರು.

ಒಂದು ರೀಮು ಕಾಗದ ಕೊಂಡುಕೊಳ್ಳಬೇಕೆಂದು ತಮ್ಮ ಕಚೇರಿಗೆ ತಿಳಿಸಿ ಅಪ್ಪಣೆ ಕೇಳಿದ್ದೇನೆ. ಸಾರ್ ! ಕಾಗದ ಬರೆದು ಆರು ತಿಂಗಳಾದುವು ; ಎರಡು ರಿಮೈಂಡರುಗಳನ್ನು ಸಹ ಕೊಟ್ಟೆ. ಜವಾಬೇ ಬರಲಿಲ್ಲ, ನಾನೇನು ಮಾಡಲಿ ಸಾರ್ ? ಕಾಗದ ಬಹಳ ಜರೂರಾಗಿ ಬೇಕಾಗಿತ್ತು. ಆದ್ದರಿಂದ ಕೊಂಡು ಕೊಳ್ಳಬೇಕಾಯಿತು. ನನ್ನ ಆಫೀಸು ಕಾರ್ಡುಗಳನ್ನು ತೋರಿಸುತ್ತೇನೆ, ಪರಾಂಬರಿಸಬೇಕು' ಎಂದು ರಂಗಣ್ಣ ಹೇಳಿ, ಶಂಕರಪ್ಪನಿಂದ ದಾಖಲೆಗಳನ್ನು ತರಿಸಿ ತೋರಿಸಿದನು.

ನಿಮಗೆ ಹೆಚ್ಚಿಗೆ ಕಾಗದಕ್ಕೆ ಆವಶ್ಯಕತೆ ಏನು ? ಬೇರೆ ರೇಂಜುಗಳಲ್ಲಿ ಹೀಗೆ ಕೊಂಡುಕೊಂಡಿಲ್ಲ. ?

ಇಲ್ಲಿ ಮೇಷ್ಟು ಗಳಿಗೆ ರೂಲ್ಲುಗಳ ವಿಷಯದಲ್ಲಿ, ಬೋಧನಕ್ರಮ ಮತ್ತು ಸಂವಿಧಾನಗಳ ವಿಷಯದಲ್ಲಿ ತಿಳಿವಳಿಕೆ ಕೊಡುವುದಕ್ಕಾಗಿ ಹಲವು ಸರ್ಕ್ಯುಲರುಗಳನ್ನು ಕಳುಹಿಸಿದ್ದೇನೆ. ಆದ್ದರಿಂದ ಕಾಗದ ಹೆಚ್ಚು ಖರ್ಚಾಯಿತು '- ಎಂದು ಹೇಳಿ ರಂಗಣ್ಣ ಸರ್ಕ್ಯುಲರುಗಳ ಕಟ್ಟನ್ನು ತಂದು ಮುಂದಿಟ್ಟನು.

ಸಾಹೇಬರು ಅವುಗಳನ್ನೆಲ್ಲ ನೋಡಿ, 'ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ! ನನಗೆ ಬಹಳ ಸಂತೋಷವಾಗುತ್ತದೆ ! ಇವುಗಳ ನಕಲುಗಳಿದ್ದರೆ ಒಂದು ಕಟ್ಟನ್ನು ನನ್ನ ಕಚೇರಿಗೆ ಕಳಿಸಿಕೊಡಿ. ಇತರ ರೇಂಜು ಗಳಲ್ಲಿಯೂ ಹೀಗೆಯೇ ಮಾಡಿಸುತ್ತೇನೆ' - ಎಂದು ಹೇಳಿದರು. ರಂಗಣ್ಣನಿಗೆ ಸಂತೋಷವಾಯಿತು. ಬೆಳಗಿನ ತೇಜೋಭಂಗ ಮುಕ್ಕಾಲು ಭಾಗ ಹೋದ೦ತಾಯಿತು. ತನಿಖೆಯಲ್ಲಿದ್ದ ಇತರ ಅಂಶಗಳು : ಮೇಷ್ಟ್ರುಗಳ ಸರ್ವಿಸ್ ರಿಜಿಸ್ಟರುಗಳಲ್ಲಿ ದಾಖಲೆಗಳನ್ನು ಪೂರ್ತಿಯಾಗಿ ಬರೆದಿಲ್ಲ ; ಕೆಲವು ಕಡೆ ಇನ್ ಸ್ಪೆಕ್ಟರ ರುಜುಗಳಿಲ್ಲ ; ಪಾಠಶಾಲೆಗಳ ಕಟ್ಟಡಗಳ ನಕ್ಷೆಗಳು ಕೆಲವು ಕಡೆ ಇಲ್ಲ ; ರಿಪೇರಿಗಳು ಯಾವಾಗ ಆದುವು ?