ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಪ್ಪೇನಹಳ್ಳಿಯ ಮೇಷ್ಟ್ರು

೧೬೭

'ಹಾಗೆಲ್ಲ ನಾನು ಮಕ್ಕಳನ್ನು ಸೇರಿಸುತ್ತಿಲ್ಲ ಸ್ವಾಮಿ ! ಪರಾಂಬರಿಸಬೇಕು. ಹಳ್ಳಿಯವರನ್ನು ಕೇಳಿ ನೋಡಿ ಸ್ವಾಮಿ ! ಆ ಜನರ ನಿಷ್ಟುರವನ್ನೆಲ್ಲ ತಲೆಗೆ ಕಟ್ಟಿಕೊಂಡು ರೂಲ್ಕು ಪ್ರಕಾರ ಕೆಲಸ ಮಾಡುತ್ತಿದೇನೆ. ಮುಖ್ಯ, ನನಗೆ ಗ್ರಹಚಾರ ಕಾಲ ! ಮೇಲಿಂದ ಮೇಲೆ ಕಷ್ಟ ಗಳೂ ದುಃಖಗಳೂ ತಲೆಗೆ ಕಟ್ಟುತ್ತಿವೆ' ಎಂದು ಅಳುತ್ತಾ ಮೇಷ್ಟು ಪಂಚೆಯ ಸೆರಗಿನಿಂದ ಕಣ್ಣೀರನೊರಸಿಕೊಳ್ಳುತ್ತಿದ್ದನು. ಮೇಷ್ಟು ಬೂಟಾಟಿಕೆ ಮಾಡುತಿದ್ದಾನೋ ಏನೋ ! ಎಂದು ರಂಗಣ್ಣನಿಗೆ ಸಂಶಯವುಂಟಾಯಿತು. ಒಳಕ್ಕೆ ಹೋಗಿ ಕುರ್ಚಿಯ ಮೇಲೆ ಕುಳಿತು ಕೊಂಡನು. ಹಾಜರಿ ರಿಜಿಸ್ಟರನ್ನು ಕೈಗೆ ತೆಗೆದುಕೊಂಡು ಹಾಜರಿಗಳನ್ನು ಎಣಿಸಿದನು ; ಹಾಜರಿದ್ದ ಮಕ್ಕಳ ಸಂಖ್ಯೆ ಯನ್ನೂ ಎಣಿಸಿದನು ; ತಾಳೆಯಾಗಲಿಲ್ಲ ! ಇಬ್ಬರು ಮಕ್ಕಳು ಹೆಚ್ಚಾಗಿದ್ದಂತೆ ಕಂಡಿತು. ಪುನಃ ಹಾಜರಿ ಎಣಿಸಿ, ಮಕ್ಕಳನ್ನು ನಿಧಾನವಾಗಿ ನೋಡುತ್ತ ಎಣಿಸತೊಡಗಿದನು. ಇಬ್ಬರು ಹೆಚ್ಚಾಗಿಯೇ ಇದ್ದರು ! ಬಳಿಕ ಒಬ್ಬೊಬ್ಬರ ಹೆಸರನ್ನೂ ಕರೆದು ಅವರು ಹಾಜರಿ ಹೇಳುತ್ತಲೂ ಆ ಮಕ್ಕಳನ್ನು ಹೊರಕ್ಕೆ ಆಟಕ್ಕೆ ಬಿಡುತ್ತಾ ಬಂದನು. ಕಡೆಗೆ ಹಾಜರಿ ಮುಗಿಯಿತು. ಒಂದು ಹುಡುಗಿ ಮತ್ತು ಒಬ್ಬ ಹುಡುಗ ಉಳಿದು ಕೊಂಡರು ! ರಂಗಣ್ಣನಿಗೆ ಸ್ವಲ್ಪ ಕೋಪ ಬಂತು.

ಮೇಷ್ಟೇ ! ಇದೇಕೆ ಸುಳ್ಳು ಹೇಳುತ್ತೀರಿ? ಈ ಇಬ್ಬರು ಮಕ್ಕಳು ದಾಖಲೆಯಲ್ಲಿಲ್ಲವಲ್ಲ ! ಅಲ್ಲದೆ ವಯಸ್ಸು ಕೂಡ ಚಿಕ್ಕದು. ಇವರನ್ನೇಕೆ ಕೂಡಿಸಿಕೊಂಡಿದ್ದೀರಿ ? '

ಸ್ವಾಮಿ ! ಅವು ನನ್ನ ಮಕ್ಕಳು ! ” ಎಂದು ಹೇಳುತ್ತಾ ಮೇಷ್ಟ್ರು ಗಟ್ಟಿಯಾಗಿ ಅಳುವುದಕ್ಕೆ ತೊಡಗಿದನು,

ನಿಮ್ಮ ಮಕ್ಕಳಿರಬಹುದು. ಮನೆಯಲ್ಲಿ ಬಿಡದೆ ಇಲ್ಲೇಕೆ ತಂದು ಕೂಡಿಸಿಕೊಂಡಿದ್ದೀರಿ ? ರೂಲ್ಸಿಗೆ ವಿರುದ್ಧವಲ್ಲವೇ ??

ಇನ್ನೇನು ಮಾಡಲಿ ಸ್ವಾಮಿ ! ಆ ಮಕ್ಕಳು ತಬ್ಬಲಿಯಾಗಿ ಹೋದುವಲ್ಲ ! ತಾಯಿಯಿಲ್ಲವೇ ! ಆವನ್ನು ಎಲ್ಲಿ ಬಿಟ್ಟು ಬರಲಿ ? ಎರಡು ತಿಂಗಳ ಹಿಂದೆ ಈ ಹಳ್ಳಿಯಲ್ಲೇ ನನ್ನ ಹೆಂಡತಿ ಸತ್ತು ಹೋದಳು. ಈ ಪಾಪಿಷ್ಠ ಕೈಯಿಂದಲೇ ಚಿತೆ ಹಚ್ಚಿ ಭಸ್ಮಮಾಡಿ ಬಂದೆನಲ್ಲ ! ಮನೆಯಲ್ಲಿ