ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಪ್ಪೇನಹಳ್ಳಿಯ ಮೇಷ್ಟ್ರು

೧೬೯

ಮೋಟಾರಿನಲ್ಲಿ ಹೊರಟೇ ಹೋದರು ಸ್ವಾಮಿ ! ನಾನೇನು ಮಾಡಲಿ ? ನನ್ನ ಹಣೆಯ ಬರೆಹ ! ಹೆಂಡತಿ ಸತ್ತದ್ದಕ್ಕೆ ಅಳಲೇ ? ಮಕ್ಕಳು ತಬ್ಬಲಿಗಳಾಗಿ ಅನ್ನ ನೀರು ಕಾಣದೆ ಒದ್ದಾಡುವುದಕ್ಕೆ ಅಳಲೇ ? ಸಾಹೇಬರು ಕೋಪ ಮಾಡಿಕೊಂಡು ಜುಲ್ಮಾನೆ ಹಾಕಿದ್ದಕ್ಕೆ ಅಳಲೇ ? ನಾನು ಯಾವ ದೇವರ ಹತ್ತಿರ ಹೋಗಿ ನನ್ನ ಮೊರೆಯನ್ನು ಹೇಳಿಕೊಳ್ಳಲಿ ?'

“ಮೇಷ್ಟೇ ! ಆಳಬೇಡಿ. ಸಮಾಧಾನ ಮಾಡಿಕೊಳ್ಳಿ ; ಧೈರ್ಯ ತಂದುಕೊಳ್ಳಿ. ನನ್ನ ಕೈಗೊಂದು ಅರ್ಜಿಯನ್ನು ಕೊಡಿ. ವಿವರಗಳನ್ನೆಲ್ಲ ತಿಳಿಸಿ ದಯವಿಟ್ಟು ಜುಲ್ಮಾನೆಯನ್ನು ವಜಾ ಮಾಡಿಸಬೇಕು-ಎಂದು ಬರೆಯಿರಿ. ನಾನು ಶಿಫಾರಸು ಮಾಡುತ್ತೇನೆ. ನಿಮ್ಮ ಅದೃಷ್ಟ ಒಳ್ಳೆಯದಾಗಿದ್ದರೆ ಜುಲ್ಮಾನೆ ವಜಾ ಆಗುತ್ತದೆ.'

ನನ್ನ ಅದೃಷ್ಟ ಕಾಣುತ್ತಿದೆಯಲ್ಲ ಸ್ವಾಮಿ | ಏಳರಾಟ ಶನಿ ಹೊಡೆದು ಅಪ್ಪಳಿಸುತ್ತಿದೆ! ಇಲ್ಲದಿದ್ದರೆ ಹೀಗೆ ನಾನಾ ಭಂಗಪಡುತ್ತಿದ್ದೆನೇ ನಾನು? ನನ್ನ ಹೆಂಡತಿ ಸತ್ತ ದಿನ ನನ್ನ ಗೋಳು ಕೇಳಬೇಕೆ? ಆ ಹೆಣ ಸಾಗಿಸುವುದಕ್ಕೆ ಬ್ರಾಹ್ಮಣ ಜನ ಈ ಹಳ್ಳಿಯಲ್ಲಿಲ್ಲ. ಹೆಡ್ ಮೇಷ್ಟ್ರು ವೆಂಕಟಸುಬ್ಬಯ್ಯನವರಿಗೆ ವರ್ತಮಾನ ಕಳಿಸಿಕೊಟ್ಟೆ, ಪುಣ್ಯಾತ್ಮರು ಐವತ್ತು ರುಪಾಯಿ ಗಂಟು ಕಟ್ಟಿಕೊಂಡು ಜನರನ್ನೂ ಪುರೋಹಿತನನ್ನೂ ಕರೆದುಕೊಂಡು ಇಲ್ಲಿಗೆ ಬಂದು ದಹನ ಕ್ರಿಯೆಗಳನ್ನು ನಡೆಸಿಕೊಟ್ಟ ರು ; ಕರ್ಮಾ೦ತರಗಳಿಗೆ ಹಣ ಕೊಟ್ಟು ಧೈರ್ಯ ಹೇಳಿ ಹೋದರು,

“ಯಾವ ವೆಂಕಟಸುಬ್ಬಯ್ಯ ? ಎಲ್ಲಿಯ ಹೆಡ್‌ಮೇಷ್ಟು?

“ಇಲ್ಲೇ ಸ್ವಾಮಿ ! ಮೂರು ಮೈಲಿ ದೂರದ ಬೊಮ್ಮನಹಳ್ಳಿ ಸ್ಕೂಲಿನ ಹೆಡ್‌ಮೇಷ್ಟು, ವೆಂಕಟಸುಬ್ಬಯ್ಯ ! ದೇವರು ಅವರ ಹೊಟ್ಟೆ ತಣ್ಣಗಿಟ್ಟಿರಲಿ ಸ್ವಾಮಿ !?

'ಏನಾಗಿತ್ತು ನಿಮ್ಮ ಹೆಂಡತಿಗೆ ?'

'ಏನೆಂದು ಹೇಳಲಿ ಸ್ವಾಮಿ? ಏನೂ ಜ್ವರ ಬಂತು. ನಾಲ್ಕು ದಿನ ಜೋರಾಗಿ ಹೊಡೆಯಿತು. ಇದ್ದಕ್ಕಿದ್ದ ಹಾಗೆ ಕಣ್ಮುಚ್ಚಿ ಕೊಂಡುಬಿಟ್ಟಳು ! ಊರವರೆಲ್ಲ-ಪ್ಲೇಗು ಮಾರಿ ಇರಬಹುದು, ಊರು ಬಿಟ್ಟು ಹೊರಟು ಹೋಗಿ ಎಂದು ಗಲಾಟೆ ಮಾಡಿದರು. ನನ್ನ ಹೆಂಡತಿಯ ಹೆಣ ಸುಟ್ಟು