ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೦

ರಂಗಣ್ಣನ ಕನಸಿನ ದಿನಗಳು

ಹಿಂದಿರುಗಿದರೆ - ಊರೊಳಕ್ಕೆ ಬರಬೇಡಿ ಎಂದು ತಡೆದುಬಿಟ್ಟರು. ವೆಂಕಟಸುಬ್ಬಯ್ಯ ಹೇಳಿನೋಡಿದರು, ಯಾರು ಹೇಳಿದರೂ ಹಳ್ಳಿಯವರು ಕೇಳಲೇ ಇಲ್ಲ! ನನ್ನನ್ನು ಹದಿನೈದು ದಿನ ಊರೊಳಕ್ಕೆ ಸೇರಿಸಲೇ ಇಲ್ಲ ! ನನ್ನ ಕಷ್ಟವನ್ನು ಆಲೋಚಿಸಿ ಸ್ವಾಮಿ ! ಆ ಮಂಟಪದಲ್ಲಿ ಅಡಿಗೆ ಮಾಡಿಕೊಂಡು, ಈ ಕಟ್ಟಡದೊಳಗೆ ಮಕ್ಕಳನ್ನಿಟ್ಟುಕೊಂಡು ಮಲಗುತಿದ್ದೆ. ಹದಿನೈದು ದಿನ ಕಳೆದಮೇಲೆ ಊರಲ್ಲಿ ಎಲ್ಲಿಯೂ ಇಲಿ ಬೀಳದೆ ಜನ ಕಾಯಿಲೆಯಾಗದೆ ಇದ್ದು ದನ್ನು ನೋಡಿ ಜನ ನನ್ನನ್ನು ಊರೊಳಕ್ಕೆ ಬಿಟ್ಟರು ?

“ಆದದ್ದು ಆಗಿ ಹೋಯಿತು ಮೇಷ್ಟೇ ! ಇನ್ನೂ ನಿಮಗೆ ಪೂರ್ವ ವಯಸ್ಸು. ಎರಡನೆಯ ಮದುವೆ ಮಾಡಿಕೊಳ್ಳಿ. ಈ ದುಃಖ ಮರೆಯುತ್ತೆ, ಮಕ್ಕಳಿಗೂ ದಿಕ್ಕಾಗುತ್ತೆ.'

ರಾಮ ರಾಮ ! ಇನ್ನು ಆ ಯೋಚನೆಯೇ ಇಲ್ಲ ಸ್ವಾಮಿ ! ಆಕೆಗೆ ನಾನು ವಂಚನೆ ಮಾಡೋದಿಲ್ಲ ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ !?

ಇದೇನು ಹೀಗೆ ಹೇಳುತ್ತೀರಿ ಮೇಷ್ಟೇ ? ಎರಡನೆಯ ಮದುವೆ ಮಾಡಿಕೊಂಡರೆ ಮೊದಲನೆಯ ಹೆಂಡತಿಗೆ ವಂಚನೆ ಮಾಡಿದ ಹಾಗಾಗುತ್ತದೆಯೆ? ಮಕ್ಕಳಿಗೆ ಏನು ಮೋಸವಾಗುತ್ತದೆ ದಿಕ್ಕಾಗುವುದಿಲ್ಲವೇ?'

“ಸ್ವಾಮಿ | ಇತರರ ಮಾತನ್ನು ನಾನೇತಕ್ಕೆ ಆಡಲಿ ? ನನ್ನ ಮಾತು ಹೇಳುತ್ತೇನೆ. ನಾನು ಸಂಸಾರದ ಸುಖ ನೋಡಿದ್ದಾಯಿತು ಸ್ವಾಮಿ ! ವಯಿನವಾದ ಹೆಂಡತಿಯಿದ್ದರೆ ಬಡತನದ ದುಃಖ ಕಾಣಿಸೋದಿಲ್ಲ! ನನಗೆ ಹದಿನೈದು ರುಪಾಯಿ ಸಂಬಳ, ನಾನು ಬಡವ-ಎಂಬ ಚಿಂತೆಯೇ ನನಗಿರಲಿಲ್ಲ ಸ್ವಾಮಿ ದೇವರಾಣೆಗೂ ಹೇಳುತ್ತೇನೆ. ಹೇಗೆ ತಾನೆ ಸಂಸಾರವನ್ನು ನಡೆಸುತ್ತಿದ್ದಳೋ ಆಕೆ! ಸೀರೆ ಬೇಕು ಎಂದು ಕೇಳಿದವಳಲ್ಲ, ಒಡವೆ ಬೇಕು ಎಂದು ಕೇಳಿದವಳಲ್ಲ; ಮನೆಯಲ್ಲಿ ಉಪ್ಪಿಲ್ಲ, ಅಕ್ಕಿ ಯಿಲ್ಲ~ ಎಂದು ಒಂದು ದಿನವಾದರೂ ಹೇಳಿದವಳಲ್ಲ ; ಎಂದೂ ಮುಖವನ್ನು ಸಿಡುಕುಮಾಡಿ ಕೊಂಚವಳೇ ಅಲ್ಲ ! ಅ೦ಥ ಹೆಂಡತಿಯೊಡನೆ ಸಂಸಾರಮಾಡಿ, ಆದನ್ನು ಮರೆಯುವುದುಂಟೆ ? ಆಕೆಯನ್ನು ಮರೆಯುವುದುಂಟೇ ? ಆಕೆಯನ್ನು