ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಪ್ಪೇನಹಳ್ಳಿಯ ಮೇಷ್ಟ್ರು

೧೭೧

ಮರೆಸಿ ಬೇರೊಬ್ಬಳನ್ನು ಮದುವೆಯಾಗುವುದುಂಟಿ ! ದೃಢಸಂಕಲ್ಪ ಮಾಡಿದ್ದೇನೆ ಸ್ವಾಮಿ ? ಒಂದುವೇಳೆ ಮದುವೆಯಾದೆ ಎಂದಿಟ್ಟು ಕೊಳ್ಳಿ. ಈ ಮಕ್ಕಳನ್ನು ಆ ಹೊಸಬಳು ಆದರಿಸು ತ್ತಾಳೆಯೇ ? ತನ್ನ ಮಕ್ಕಳಿಗೂ ಕಡೆಗೆ ತನ್ನ ಅಕ್ಕ ತಂಗಿಯರ ಮಕ್ಕಳಿಗೂ ಭೇದಮಾಡುವುದು ಸ್ತ್ರೀಯರ ಸ್ವಭಾವ. ತನ್ನ ಮಗನಿಗೆ ಎರಡು ಮಿಳ್ಳೆ ತುಪ್ಪ, ತನ್ನ ತಂಗಿಯ ಮಗನಿಗೆ ಒಂದು ಮಿಳ್ಳ ತುಪ್ಪ ! ತನ್ನ ಮಗನಿಗೆ ಮೊಸರು, ಅಕ್ಕನ ಮಗನಿಗೆ ಮಜ್ಜಿಗೆ ! ತನ್ನ ಮಗನಿಗೆ ವಾರಕ್ಕೊಂದು ಬಾರಿ ಎರೆಯುವುದು ತಂಗಿಯ ಮಗನಿಗೆ ತಿಂಗಳಿಗೊಮ್ಮೆ ಎರೆಯುವುದು- ಹೀಗೆಲ್ಲ ಲೋಕದಲ್ಲಿ ಮಾಡುತ್ತಾರೆ. ಹೊಸದಾಗಿ ಬರುವವಳಿಗೆ ಇವರು ತಂಗಿಯ ಮಕ್ಕಳೇ? ಅಕ್ಕನ ಮಕ್ಕಳೇ ? ಇವರ ಆರೈಕೆ ಹೇಗೆ ? ದೃಢ ಸಂಕಲ್ಪ ಮಾಡಿದ್ದೇನೆ ಸ್ವಾಮಿ ! ಮುತ್ತಿನಂತಹ ಮಕ್ಕಳು : ಒಂದು ಗಂಡು ! ಒಂದು ಹೆಣ್ಣು ! ಇವರ ಆರೈಕೆ ನಾನೇ ಮನವಾರೆ ಮಾಡುತ್ತೇನೆ. ಮತ್ತೊಬ್ಬರ ಕೈಗೆ ಈ ಮಕ್ಕಳನ್ನು ಒಪ್ಪಿ ಸುವುದಿಲ್ಲ.”

“ನನ್ನಿಂದ ಏನಾದರೂ ಸಹಾಯ ಬೇಕೇ ಮೇಷ್ಟೇ ??

“ಏನು ಸಹಾಯ ಕೇಳಲಿ ಸ್ವಾಮಿ ? ಸಾಧ್ಯವಾದರೆ ಜುಲ್ಮಾನೆ ವಜಾ ಮಾಡಿಸಿ ನನ್ನ ಮಾನ ಉಳಿಸಿ, ಹೆಂಡತಿ ಸತ್ತಾಗ ಇಷ್ಟು ಸಂಕಟ ಆಗಲಿಲ್ಲ, ಜುಲ್ಮಾನೆಯಿಂದ ಮಾನ ಹೋದ್ದಕ್ಕೆ ಹೆಚ್ಚು ಸಂಕಟವಾಗಿದೆ. ಅಷ್ಟೇ ಸ್ವಾಮಿ ! ಎರಡು ದಿನ ಈ ಕಷ್ಟ ಅನುಭವಿಸುತ್ತೇನೆ. ನನ್ನ ಅಕ್ಕ ಒಬ್ಬಳು ವಿಧವೆ ಇದ್ದಾಳೆ. ಕಾಗದ ಬರೆದಿದ್ದೇನೆ. ಆಕೆ ಬಂದರೆ ನನಗೆ ಸಹಾಯವಾಗುತ್ತೆ. ಇನ್ನು ಹದಿನೈದು ದಿನಗಳಲ್ಲಿ ಬರುತ್ತೇನೆಂದು ಜವಾಬು ಬರೆಸಿದ್ದಾಳಿ ಸ್ವಾಮಿ !!

ರಂಗಣ್ಣ ಆ ಮೇಷ್ಟರಿಂದ ಅರ್ಜಿ ಬರೆಯಿಸಿಕೊಂಡು ಹೊರಕ್ಕೆ ಬಂದನು. ಮೇಷ್ಟ್ರು ಜೊತೆಯಲ್ಲಿ ಸ್ಪಲ್ಪ ದೂರ ಬಂದು, 'ಸ್ವಾಮಿ | ಈ ಹಳ್ಳಿಯಿಂದ ವರ್ಗಮಾಡಿಸಿಕೊಡಲು ಸಾಧ್ಯವೆ ? ಆ ಮನೆಯಲ್ಲಿ ಮತ್ತೆ ನಾನು ಇರಲಾರೆನಲ್ಲ ' ಎಂದು ಹೇಳಿದನು

“ಆಗಲಿ ಮೇಷ್ಟೆ ! ವರ್ಗ ಮಾಡುತ್ತೇನೆ. ಆದರೆ ಆಲೋಚನೆ ಮಾಡಿ, ಇನ್ನೆರಡು ತಿಂಗಳು ಬಿಟ್ಟು ಕೊಂಡು ಈ ದುಃಖ ಮರೆತಮೇಲೆ