ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೨

ರಂಗಣ್ಣನ ಕನಸಿನ ದಿನಗಳು

ಬೇರೆ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಮೊದಲಿನಂತಿಯ ಒಳ್ಳೆಯ ಹೆಂಡತಿ ದೊರೆತಾಳು.'

'ಇಲ್ಲ ಸ್ವಾಮಿ ! ದೃಢ ಸಂಕಲ್ಪ ಮಾಡಿದ್ದೇನೆ ! ಹಿರಿಯರ ಹೆಸರು ಉಳಿಸುವುದಕ್ಕೆ ಒಬ್ಬ ಮಗನಾಯಿತು ; ಕನ್ಯಾದಾನದ ಪುಣ್ಯಕ್ಕೆ ಒಬ್ಬಳು ಮಗಳಾದಳು. ಮೇಷ್ಟರುಗಳನ್ನು ಬಡತನ ಹಿಡಿದು ಕಿತ್ತು ತಿನ್ನುತ್ತಿರುವಾಗ ಸಾಲ ಮಾಡಿ ಮತ್ತೆ ಮದುವೆ ಮಾಡಿಕೊಂಡು, ಮತ್ತೆ ನಾಲ್ಕಾರು ಮಕ್ಕಳಾಗಿ, ಅಯ್ಯೋ ! ಆ ಜಂಜಾಟ ಬೇಡ ! ಬೇಡ ! ಸಂಸಾರ ಸುಖ ತೃಪ್ತಿ ಆಗಿಹೋಯಿತು ! ಸಾಕು ! ಈಗ ಏನಿದ್ದರೂ ನನ್ನ ತಬ್ಬಲಿ ಮಕ್ಕಳ ಯೋಗಕ್ಷೇಮ ! ಅದನ್ನು ನೋಡಿಕೊಳ್ಳುತ್ತೇನೆ.”

'ಒಳ್ಳೆಯದು ಮೇಷ್ಟೆ ! ನೀವು ನಿಲ್ಲಿರಿ' ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿ ಹೊರಟನು.