ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಪಪ್ರಚಾರ

೧೮೭

ದುಡ್ಡನ್ನು ಏಕೆ ಖರ್ಚು ಮಾಡಿದಿರಿ ?” ಎಂದು ಕೇಳಿದರು. ತನ್ನ ಮನಸ್ಸನ್ನು ಸಮಾಧಾನ ಮಾಡಿಕೊಂಡು,

'ಗೌಡರೇ ! ನಮ್ಮ ಮನೆಗೆ ಹೊಟಿಲಿಂದ ತಿಂಡಿಪ೦ಡಿ ತರಿಸುವುದಿಲ್ಲ. ಇದನ್ನೆಲ್ಲ ಮನೆಯಲ್ಲೇ ಮಾಡುತ್ತಾರೆ ' ಎಂದನು.

ಗೌಡರು ಮೈಸೂರು ಪಾಕನ್ನು ಬಾಯಿಗೆ ಹಾಕಿಕೊಂಡರು. 'ಏನು ಸ್ವಾಮಿ ? ಹೋಟೆಲಿನಲ್ಲಿ ಕೂಡ ಇಷ್ಟು ಚೆನ್ನಾಗಿ ಮಾಡುವುದಿಲ್ಲವಲ್ಲ ! ಆದರ ತಲೆಯ ಮೇಲೆ ಹೊಡೆದಂತೆ ಇದೆಯೇ !

“ಹೌದು. ಆದ್ದರಿಂದಲೇ ಹೋಟೆಲ್ ತಿಂಡಿಯ ಆಶೆ ನಮಗಾರಿಗೂ ಇಲ್ಲ. ಮನೆಯಲ್ಲಿ ಬೇಕಾದ ತಿಂಡಿಪಂಡಿಗಳನ್ನು ಆಕೆ ಮಾಡುತ್ತಿರು ತಾಳೆ. ನಾನು ಸರ್ಕಿಟಿಗೆ ಹೊರಟಾಗಲಂತೂ ನನ್ನ ಕೈ ಪೆಟ್ಟಿಗೆಯಲ್ಲಿ ತುಂಬಿಡುತ್ತಾಳೆ!

“ ಹೌದು ಸ್ವಾಮಿ ! ನನಗೆ ಜ್ಞಾಪಕವಿದೆ. ಹರಪುರದ ಕ್ಯಾಂಪಿನಲ್ಲಿ ತಾವು ಕೊಟ್ಟ ತೇಂಗೊಳಲು ಬೇಸಿನ್ ಲಾಡು, ಇನ್ನೂ ನನ್ನ ನಾಲಿಗೆ ಯಲ್ಲಿ ನೀರೂರಿಸುತ್ತಿವೆ !

'ನಾನು ಯಾವುದಕ್ಕೂ ತಾಪತ್ರಯ ಪಟ್ಟು ಕೊಳ್ಳಬೇಕಾದ್ದಿಲ್ಲ ಗೌಡರೇ ! ದೇವರು ಯಾವ ವಿಚಾರಕ್ಕೂ ಕಡಮೆ ಮಾಡಿಲ್ಲ. ನಾನು ಸಂತೋಷವಾಗಿ ಮತ್ತು ಸೌಖ್ಯವಾಗಿ ಸಂಸಾರ ನಡೆಸಿ ಕೊಂಡು ಹೋಗುತ್ತಿದೇನೆ. ಎಲ್ಲವು ವಯಿನವಾಗಿವೆ. ಈ ಇನ್ ಸ್ಪೆಕ್ಟರ್ ಗಿರಿಯಲ್ಲಿ ನನ್ನ ಕೆಲವು ಭಾವನೆಗಳನ್ನೂ ತತ್ತ್ವಗಳನ್ನೂ ಕಾರ್ಯರೂಪಕ್ಕೆ ತಂದು ವಿದ್ಯಾಭಿವೃದ್ಧಿಯನ್ನುಂಟುಮಾಡೋಣ, ಒಂದು ಮಾರ್ಗದರ್ಶನ ಮಾಡೋಣ, ಉಪಾಧ್ಯಾಯರನ್ನೂ ನಗಿಸುತ್ತ ನಾನೂ ನಗುನಗುತ್ತ ಕೆಲಸ ಮಾಡಿಕೊಂಡು ಹೋಗೋಣ – ಎಂಬ ಧೈಯಗಳನ್ನಿಟ್ಟು ಕೊಂಡಿದ್ದೇನೆ. ಆದರೆ ನನ್ನ ಮೇಲೆ ನಿಮ್ಮ ಮುಖಂಡರು ಛಲ ಸಾಧಿಸುತ್ತಿದಾರೆ, ನನ್ನ ಮೇಲೆ ಇಲ್ಲದ ನಿಂದೆಗಳನ್ನು ಹೊರಿಸುತ್ತಿದಾರೆ. ಅವರಿಗೆ ನಾನೇನು ಅಪಕಾರ ಮಾಡಿದ್ದೆ ನೆಂಬುದು ತಿಳಿಯದು. ನನ್ನೊಡನೆ ನೀವುಗಳೆಲ್ಲ